ಶಾಸಕ ಯಶವಂತ್ರಾಯಗೌಡ ಪಾಟೀಲರು ಸರ್ವ ವಿಧದಲ್ಲಿ ಸುಧಾರಣೆ ಮಾಡಿ ಸುವಣರ್ಾಕ್ಷಗಳಿಂದ ಬರೆದಿಡುವಂತೆ ಮಾಡಿದ್ದಾರೆ : ಶೇಖರ ನಾಯಕ

ಲೋಕದರ್ಶನ ವರದಿ

ಇಂಡಿ,9:  ಸಾಮಾನ್ಯ ವರ್ಗದ ತಾ.ಪಂ ಅಧ್ಯಕ್ಷ ಸ್ಥಾನದ ಹುದ್ದೆ ಇದ್ದರೂ ಸಹಿತ  ಎಲ್ಲ ತಾ.ಪಂ ಸದಸ್ಯರ ಮನ ಒಲಿಸುವ ಮೂಲಕ ನಮ್ಮ ಸಮುದಾಯದ ಮೇಲಿನ ಪ್ರೀತಿ, ವಿಶ್ವಾಸದಿಂದಾಗಿ  ತಾಲೂಕಾ ಪಂಚಾಯತ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲು ಅತ್ಯಂತ ಪರಿಶ್ರಮಿಸಿದ ಶಾಸಕ ಯಶವಂತ್ರಾಯಗೌಡ ಪಾಟೀಲರಿಗೆ ಬಂಜಾರ ಸಮುದಾಯದ ಕುಲ ಬಾಂಧವರಿಂದ ಹೃದಯಪೂರ್ವಕ ಕೃತಜ್ಷತೆ ಸಲ್ಲಿಸುವದಾಗಿ ನೂತನವಾಗಿ ಆಯ್ಕೆಯಾದ ತಾ.ಪಂ ಅಧ್ಯಕ್ಷ ಶೇಖರ ನಾಯಕ ಹೇಳಿದರು.

   ಪಟ್ಟಣದ ಸ್ಟೇಶನ ರಸ್ತೆಯ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಅಧಿಕಾರ ಪದಗ್ರಹಣ ಮಾಡಿದ ನಂತರ ಕನರ್ಾಟಕ ಪತ್ರಕರ್ತರ ಸಂಘ (ರಿ) ಇಂಡಿ ಪ್ರೇಸ್ ಸಭಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು  ತಾಲೂಕಿನ ಸವರ್ಾಂಗೀಣ ಅಭಿವೃದ್ದಿಗಾಗಿ ಶ್ರಮಿಸಿದ ಶಾಸಕ ಯಶವಂತ್ರಾಯಗೌಡ ಪಾಟೀಲರು ನುಡಿದಂತೆ ನಡೆದ ಬದ್ದತೆಯ ಶಾಸಕರಾಗಿದ್ದಾರೆ. 12 ನೇ ಶತಮಾನದಲ್ಲಿ ಅಣ್ಣ ಬಸವಣ್ಣ ತತ್ವ ಸಂದೇಶದಂತೆ  ಸ್ಥಳಿಯ ಆಡಳಿತದಲ್ಲಿ ಎಲ್ಲ ಸಮುದಾಯವನ್ನು ಅಧಿಕಾರ ಹಂಚಿಕೆ ಮಾಡಿ ಸಮಾನತೆಯಿಂದ ಕಂಡಿದ್ದಾರೆ. ಶತ ಶತಮಾನಗಳಿಂದ ಅಭಿವೃದ್ದಿಯಿಂದ ವಂಚಿತವಾದ ಈ ಕ್ಷೇತ್ರವನ್ನು ಸರ್ವ ವಿಧದಲ್ಲಿ ಸುಧಾರಣೆ ಮಾಡಿ ಸುವಣರ್ಾಕ್ಷಗಳಿಂದ ಬರೆದಿಡುವಂತೆ ಮಾಡಿದ್ದಾರೆ.

ಇಂದು ಬೇಸಿಗೆ ಬಂದಿರುವದರಿಂದ  ಮುಂಗಾರು ಹಿಂಗಾರು ಮಳೆಯಾಗದೆ ಜನ ಜಾನುವಾರಗಳಿಗೆ ಕುಡಿಯಲು ನೀರು ಇಲ್ಲದೆ ಪರದಾಡುವ ಪರಸ್ಥಿತಿ ನಿಮರ್ಾಣವಾಗಿದೆ.  ಮಾನ್ಯ ಶಾಸಕರು ತಾಲೂಕಿನ ನೀರಾವರಿ ಯೋಜನೆಗಳಿಗಾಗಿ ಕೆರೆ ತುಂಬ ಯೋಜನೆ ಹಾಗೂ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಬಗ್ಗೆ ಸಾಕಷ್ಟು ಶ್ರಮಿಸಿದ್ದಾರೆ.  ರೈತರ ಪರವಾದ ಚಿಂತನೆಯುಳ್ಳವರಾಗಿರುವದರಿಂದಲೆ ಇಂತಹ ಅನೇಕ ಕಾರ್ಯಗಳಾಗಿವೆ. ಬರುವ ದಿನಗಳಲ್ಲಿ ಕುಡಿಯುವ ನೀರು ,ರಸ್ತೆ, ವಿದ್ಯುತ  ಸೇರಿದಂತೆ  ಗ್ರಾಮೀಣ ಭಾಗದ ಸಮಸ್ಯಗಳನ್ನು ಹೋಗಲಾಡಿಸಲು ಶಾಸಕರ ಸಹಕಾರದೊಂದಿಗೆ ಶ್ರಮಿಸುವದಾಗಿ ಹೇಳಿದ ಅವರು ಬಂಜಾರ ಸಮುದಾಯ ಸದಾ ಶಾಸಕರ ಬೆನ್ನೆಲುಬಾಗಿ ನಿಲ್ಲತ್ತೇವೆ ಎಂದಿಗೂ ಅವರ ಕೈ ಬೀಡುವದಿಲ್ಲ   ಅವರ ಪರವಾಗಿ ಇರುವದಾಗಿ ಭರವಸೆ ನೀಡಿದರು.

     ತಾ.ಪಂ ಸದಸ್ಯ ಡಾ.ರವಿಧಾಸ ಜಾಧವ, ರಾಜು ಕುಲಕಣರ್ಿ, ಮಹಾದೇವ ರಾಠೋಡ, ಬಾಬು ರಾಠೋಡ, ಸುನೀಲ ನಾಯ್ಕ, ಮಲ್ಲೇಶಿ ಡೋಣಗಿ ಮಾಜಿ ಗ್ರಾ.ಪಂ ಅಧ್ಯಕ್ಷ ಹಡಲಸಂಗ ಸುದ್ದಿಗೋಷ್ಠಿಯಲ್ಲಿದ್ದರು