ನೂತನ ಪ್ರೌಢಶಾಲೆಗಳ ಪರೀಕ್ಷಾ ಕೇಂದ್ರಗಳಿಗೆ ಶಾಸಕ ವಿರೂಪಾಕ್ಷಪ್ಪ ಭೇಟಿ ನೀಡಿ ಪರಿಶೀಲನೆ

ಬ್ಯಾಡಗಿ 29:ಎಸ್.ಎಸ್.ಎಲ್.ಸಿ.ಪರೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಬ್ಯಾಡಗಿ ಪಟ್ಟಣದ ಲ್ಲಿನ ಎಸ್.ಜೆ.ಜೆ.ಎಂ. ಕನರ್ಾಟಕ ಪಬ್ಲಿಕ್ ಸ್ಕೂಲ್ ಹಾಗೂ ನೂತನ ಪ್ರೌಢಶಾಲೆಗಳ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ ವಿದ್ಯಾಥರ್ಿಗಳಿಗೆ ಶುಭ ಕೋರಿದರು.

  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಕೊರೊನಾ ವೈರಸ್ ಬಗ್ಗೆ ಪ್ರಚಾರಕ್ಕಿಂತ ಅಪ್ರಚಾರವೇ ಹೆಚ್ಚಾಗಿದೆ ಯಾವುದೇ ಕಾರಣಕ್ಕೂ ವಿದ್ಯಾಥರ್ಿಗಳು ಭಯಗೊಳ್ಳದೇ ಪರೀಕ್ಷೆಗಳನ್ನು ಎದುರಿಸುವಂತೆ ಮನವಿ ಮಾಡಿದರು.

   ಸಾರ್ವಜನಿಕರು ಲಾಕ್ಡೌನ್ ಸಡಿಲಿಕೆಯನ್ನು ದುರ್ಬಳಕೆ ಮಾಡಿಕೊಂಡ ಪ್ರದೇಶಗಳಲ್ಲಿ ಮಾತ್ರ ಇದರ ಕೊರೊನಾ ವೈರಸ್ ತೀವ್ರತೆ ಹೆಚ್ಚಾಗಿದೆ, ನಮ್ಮ ಹಾವೇರಿ ಜಿಲ್ಲೆಯ ಮಟ್ಟಿಗೆ ಯಾವುದೇ ತೀವ್ರವಾದಂತಹ ಪ್ರಕರಣಗಳಿಲ್ಲ ಹೀಗಾಗಿ ವಿದ್ಯಾಥರ್ಿಗಳು ಯಾವುದೇ ಅಳುಕನ್ನು ಇಟ್ಟುಕೊಳ್ಳದೇ ಪರೀಕ್ಷೆಗಳನ್ನು ಎದರಿಸುವಂತೆ ಸಲಹೆ ನೀಡಿದರು. 

   ಪರೀಕ್ಷೆ ನಡೆಯುತ್ತಿರುವ ಕುರಿತು ಮಾದ್ಯಮಗಳು ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ದಿನಕ್ಕೊಂದು ಹೇಳಿಕೆ ಬರುತ್ತಿದ್ದ ಪರಿಣಾಮ ಬಹುತೇಕ ವಿದ್ಯಾಥರ್ಿಗಳು ಪ್ರಸಕ್ತ ವರ್ಷ ಪರೀಕ್ಷೆ ನಡೆಯುವುದಿಲ್ಲ ಎಂದು ತೀಮರ್ಾನಿಸಿದ ಹಿನ್ನೆಲೆಯಲ್ಲಿ ಮಕ್ಕಳಿಗೆ ಪಾಲಕರ ಸಹಕಾರ ನಿರೀಕ್ಷಿತ ಪ್ರಮಾಣದಲ್ಲಿ ಮಕ್ಕಳಿಗೆ ತಲುಪಿಲ್ಲ ಎಂದು ವಿಷಾದಿಸಿದರು.

   ಮೊದಲನೇ ಸ್ಥಾನಕ್ಕೆ ಪೈಪೋಟಿ: ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಮುನಿ ಮಾತನಾಡಿ, ಹಿಂದಿನ ವರ್ಷಗಳ ಫಲಿತಾಂಶ ನೋಡಿದಾಗ ಬ್ಯಾಡಗಿ ತಾಲ್ಲೂಕ ಹಲವಾರು ಬಾರಿ ಮೊದಲ ಸ್ಥಾನ ಪಡೆದಿದೆಯಲ್ಲದೇ ಹ್ಯಾಟ್ರಿಕ್ ಸಾಧನೆಯನ್ನೂ ಕೂಡ ಮಾಡಿತ್ತು, ಪ್ರಸಕ್ತ ವರ್ಷ ಕೊರೋನಾ ವೈರಸ್ ಹಾಗೂ ಲಾಕ್ಡೌನ್ನಿಂದ ವಿದ್ಯಾಥರ್ಿಗಳಲ್ಲಿ ಪರೀಕ್ಷೆಯನ್ನು ಎದುರಿಸುವ ಉತ್ಸಾಹ ಕಡಿಮೆಯಾಗಿದೆ ಎಂದರು.

       ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳಿಗೆ ಮಾಸ್ಕ ಸೇರಿದಂತೆ ಇನ್ನಿತರ ಪರಿಕರಗಳನ್ನು ಶಾಸಕ ವಿರೂಪಾಕ್ಷಪ್ಪ ವಿತರಿಸಿ ದರು. ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್.ಬಾಕರ್ಿ, ಆರೋಗ್ಯ, ಪೋಲಿಸ್ ಸೇರಿದಂತೆ ಇನ್ನಿತರ ಇಲಾಖೆ ಸಿಬ್ಬಂದಿಗಳು ಹಾಗೂ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.