ತಾಳಿಕೋಟಿ 08: ಪಟ್ಟಣದ ದಲಿತ ಸಮಾಜದ ಮುಖಂಡ, ಪುರಸಭೆ ಸದಸ್ಯ ಮುತ್ತಪ್ಪ ಚಮಲಾಪೂರ ಇವರ ಧರ್ಮಪತ್ನಿ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಮನೆಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದನಗೌಡ ಪಾಟೀಲ (ನಾವದಗಿ),ಸುರೇಶ ಧಣಿ ನಾಡಗೌಡ( ಬಿಂಜಲಭಾವಿ), ಪ್ರಭುಗೌಡ ಮದರಕಲ್ಲ,ಎಂ.ಕೆ.ಚೋರಗಸ್ತಿ, ಶರಣುಧಣಿ ದೇಶಮುಖ, ಸಿದ್ದನಗೌಡ ಮಂಗಳೂರ, ತಿಪ್ಪಣ್ಣ ಸಜ್ಜನ, ಸಂಗನಗೌಡ ಅಸ್ಕಿ, ಸುರೇಶ ಹಜೇರಿ, ಗೋವಿಂದಸಿಂಗ ಗೌಡಗೇರಿ, ಪ್ರಕಾಶ ಪಾಟೀಲ (ತಮದಡ್ಡಿ), ರತನಸಿಂಗ್ ಕೊಕಟನೂರ, ಫಯಾಜ ಉತ್ನಾಳ, ಗೋಪಾಲ ಕಟ್ಟಿಮನಿ, ಆಸಿಫ್ ಕೆಂಭಾವಿ ಮತ್ತಿತರರು ಇದ್ದರು.