6 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಶಾಸಕ ಮಾನೆ ಭೂಮಿ ಪೂಜೆ
ಹಾನಗಲ್ 20: ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿಯಡಿ ತಾಲೂಕಿನ ಮಲ್ಲಿಗಾರ ಗ್ರಾಮದ ಬಳಿ ರೂ. 6 ಕೋಟಿ ವೆಚ್ಚದಲ್ಲಿ ಪಡುಬಿದ್ರಿ-ಚಿಕ್ಕಾಲಗುಡ್ಡ ರಾಜ್ಯ ಹೆದ್ದಾರಿ-1 ಪುನಶ್ಚೇತನ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.
ಹೆದ್ದಾರಿಯಲ್ಲಿ ವಾಹನ ದಟ್ಟನೆ ಹೆಚ್ಚಾಗಿದೆ.ಹಾಗಾಗಿ ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಗಿದ್ದು,ಆ ಮೂಲಕ ಬಹುದಿನಗಳ ಬೇಡಿಕೆ ಈಡೇರಿಸಿದಂತಾಗಿದೆ.ಕಾಮಗಾರಿಯಡಿ ಮರು ಡಾಂಬರೀಕರಣ ಸೇರಿದಂತೆ ಇತರ ಕಾಮಗಾರಿ ಕೈಗೊಳ್ಳಲಾಗುವುದು. ಹೆದ್ದಾರಿಯಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗುವುದು. ನಿಗದಿತ ಕಾಲಾವಧಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಮಾನೆ ತಿಳಿಸಿದರು.ಈ ಸಂದರ್ಭದಲ್ಲಿ ಕರಗುದರಿ ಗ್ರಾಪಂ ಉಪಾಧ್ಯಕ್ಷ ಚಂದ್ರಣ್ಣ ನಿಟಗಿನಕೊಪ್ಪ,ಸದಸ್ಯ ಕಲೀಂ ಮಾಸನಕಟ್ಟಿ, ಮುಖಂಡರಾದ ಅಶೋಕ ಅಡವಿ,ನಾಗರಾಜ ಗಾಜಿಪೂರ,ಈರಣ್ಣ ಹಿರೇಮಠ ಸೇರಿದಂತೆ ಗ್ರಾಪಂ ಸದಸ್ಯರು,ಮುಖಂಡರು ಇದ್ದರು.