ಬೀಳಗಿ 04: ಬೀಳಗಿ ಪಟ್ಟಣ ಪಂಚಾಯತಿ ಶೀಘ್ರದಲ್ಲಿಯೇ ಪುರಸಭೆಯಾಗಲಿದೆ. ಪುರಸಭೆಯಾಗುವುದರಿಂದ ಇನ್ನೂ ಹೆಚ್ಚಿನ ಅನುದಾನ ಬರುವುದರಿಂದ ಹೆಚು ಅಭಿವೃದ್ದಿ ಕೆಲಸ ಮಾಡಲಿಕ್ಕೆ ಸಾಧ್ಯ.ಗ್ಯಾರಂಟಿ ಯೋಜನೆಗಳಿಗೆ ಅನುದಾನ ಜೊತೆಗೆ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸಾಲ ಮತ್ತು ಅನುದಾನ ಇಲ್ಲದೇ ಕೋಟ್ಯಾಂತರ ಕಾಮಗಾರಿಗಳಿಗೆ ಪೂಜಾ ಕಾರ್ಯಕ್ರಮ ಹಮ್ಮಿಕೊಂಡು ಆರ್ಥಿಕ ದೀವಾಳಿ ಮಾಡಿ ಹೋಗಿದ್ದಾರೆ. ಅವುಗಳ ಎಲ್ಲವನ್ಮು ನಿಭಾಯಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಮತಕ್ಷೇತ್ರದ ಅಭಿವೃದ್ದಿಗೆ ಅನುದಾನ ನೀಡಲಿದ್ದಾರೆ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಸ್ಥಳೀಯ ಪಾಲಿಟೆಕ್ನಿಕ್ ಕಾಲೇಜಿನ ಅಡಿಟೋರಿಯಂ ಹಾಲ್ ಕಾಮಗಾರಿ ಹಾಗೂ ಎಸ್.ಸಿ.ಎನ್.ಎನ್ ಸರ್ಕಾರಿ ಬಾಲಕೀಯರ ಪದವಿ ಪೂರ್ವಕಾಲೇಜು 2 ಕೋಠಡಿ ನಿರ್ಮಾಣ ಹಾಗೂ ಶ್ರೀಮತಿ ಬಸಲಿಂಗಮ್ಮ ಹೇಮನಗೌಡ್ರ ಜಕ್ಕನಗೌಡ್ರ ಬಾಲಕೀಯರ ಸರ್ಕಾರಿ ಪ್ರೌಢ ಶಾಲಾ ಕೋಠಡಿ ನಿರ್ಮಾಣ ಮತ್ತು ಪಟ್ಟಣದ ಸರ್ಕಾರಿ ಆರ್ಯುವೇದ ಆಸ್ಪತ್ರೆ ಕಟ್ಟಡ ವಿಸ್ತೀರ್ಣ ಕಾಮಗಾರಿ ಹಾಗೂ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕೋಟ್ಯಾಂತರ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನರೆವೇರಿಸಿ ಅವರು ಮಾತನಾಡಿದರು. ಮಹಿಳೆಯರು ಎಲ್ಲರಂಗದಲ್ಲಿ ಮುಂದೆ ಇದ್ದಾರೆ. ವಿದ್ಯಾರ್ಥಿಗಳ ಕಲಿಕೆಗಾಗಿ ಸರ್ಕಾರವು ಸಾಕಷ್ಟು ಅಭಿವೃದ್ಧಿ ಯೋಜನೆಗಳು ಹಮ್ಮಿಕೊಂಡಿದ್ದು ಆದರ ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಜೀವನವು ಬಹಳ ಸಕ್ಷಮತೆಯಿಂದ ಕೂಡಿದೆ. ಇದನ್ನು ಸರಿಯಾಗಿ ಉಪಯೋಗಿಸಿಕೊಂಡು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಬೇಕು ಎಂದರು.
ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಮತ್ತೊಬ್ಬರ ಮೇಲೆ ಅವಲಿಂಬಿತರಾಗದೇ ಪರೀಕ್ಷೆಯಲ್ಲಿ ಯಾವುದೇ ರೀತಿಯಲ್ಲಿ ನಕಲು ಮಾಡದೇ ಪರೀಕ್ಷೆ ಬರೆಯಬೇಕು. ನಕಲು ಮಾಡುವುದರಿಂದ ಶಿಕ್ಷಣಕ್ಕೆ ವಂಚನೆ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಹಾಗೂ ಇನ್ನಿತರ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಪಿ ಮಾಡದಂತೆ ನೋಡಿಕೊಳ್ಳಬೇಕು. ಪರೀಕ್ಷೆಯಲ್ಲಿ ರಾ್ಯಂಕ್ ಬರದಿದ್ದರೂ ಚಿಂತೆಯಿಲ್ಲ. ಅವರಲ್ಲಿ ಆತ್ಮಾಭಿಮಾನದ ಪರೀಕ್ಷೆಯಲ್ಲಿ ಅಂಕಗಳು ಸಾಕು ಅವರು ತಮ್ಮ ಮುಂದಿನ ಗುರಿ ಮುಟ್ಟಲಿಕ್ಕೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಮೋಬೈಲ ಹಾಗೂ ಟಿವ್ಹಿಗಳಿಂದ ಹಾಳಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ದೂರಾಗಬೇಕು ಎಂದರು. ಪಟ್ಟಣ ಆಶ್ರಯ ಕಾಲೋನಿಗೆ ಅಭಿವೃದ್ಧಿಗೆ ಈಗಾಗಲೇ ಕ್ರೀಯಾಯೋಜನೆ ಮಾಡಿ ಪ್ರಪೋಜಲ್ ಕಳಿಸಲಾಗಿದೆ. ಅನುದಾನ ಬರಬೇಕಾಗಿದೆ. ಒಂದು ವೇಳೆ ಅನುದಾನ ಬರುವುದು ವಿಳಂಬವಾದರೆ ಬೆಳಗಾವಿಯಲ್ಲಿ ನಡೆಯುವ ಅದಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಹೋರಾಟ ನಡೆಯುತ್ತಿದೆ ಬೆಳಗಾವಿ ಸದನದಲ್ಲಿ ಈ ವಿಷಯವಾಗಿ ಮಾತನಾಡಲು ಅವಕಾಶ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೃಷ್ಣಾ ಮೇಲ್ದಂಡೆಯ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದಾರೆ ಎನ್ನುವ ಭರವಸೆ ನನಗೆ ಇದೆ ಎಂದರು.
ಬಿಇಓ ಆರ್.ಎಸ್.ಆದಾಪೂರ, ಪಂಚಾಯತ ರಾಜ್ಯ ಜಿಪಂ ಉಪ ವಿಭಾಗದ ಎಇಇ ಗೋವಿಂದ ಅಳ್ಳಿಕಟ್ಟಿ, ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ಗ್ಯಾರಂಟಿ ಯೋಜನೆಯ ತಾಲೂಕಾ ಆಧ್ಯಕ್ಷ ಅಣವೀರಯ್ಯ ಪ್ಯಾಠಿಮಠ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಣಮಂತ ಕಾಖಂಡಕಿ, ಸಂಗಪ್ಪ ಕಂದಗಲ್ಲ, ಪಪಂ ಮಾಜಿ ಅಧ್ಯಕ್ಷ ಅನಿಲ ಗಚ್ಚಿನಮನಿ, ಮಹಾದೇವ ಹಾದಿಮನಿ, ಭೀಮಸಿ ಬಂಡಿವಡ್ಡರ, ಅಜ್ಜುಬಾಯಿ ಸರ್ಕರ, ಸಿದ್ದು ಸಾರಾವರಿ, ಬಸವರಾಜ ಹಳ್ಳದಮನಿ ಹಾಗೂ ಇನ್ನೂ ಅನೇಕರು ಇದ್ದರು.