ಲೋಕದರ್ಶನ ವರದಿ
ಕುಮಟಾ, 30 : ತಾಲೂಕಿನ ಅಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಪ್ರಸಿದ್ಧ ಪ್ರವಾಸಿ ತಾಣವಾದ ಯಾಣ ಕ್ಷೇತ್ರಕ್ಕೆ ಸೋಮವಾರ ಸರಕಾರಿ ಇಲಾಖಾ ಸಿಬ್ಬಂದಿಗಳ ಜೊತೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಅವರು ಆ ಭಾಗದ ಸುತ್ತಮುತ್ತಲಿನ ಜನರ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೇ ಪ್ರವಾಸಿಗರನ್ನು ಆಕಷರ್ಿಸಲು ಯಾಣ ಭಾಗಕ್ಕೆ ಮೂಲಭೂತ ಸೌಕರ್ಯದ ಅವಶ್ಯಕತೆಯಿದ್ದು, ಈ ಸೌಕರ್ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಅವರ ಸಹಕಾರದಿಂದ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಅಹವಾಲು ಸ್ವೀಕಾರ ಸಭೆಯಲ್ಲಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಮತನಾಡಿದ ಶಾಸಕರು, ಯಾಣ ಕ್ಷೇತ್ರ ಹಾಗೂ ಅದರ ಸುತ್ತಮುತ್ತಲಿನ ಸುಂದರ ಪರಿಸರ ರಾಜ್ಯ ಅಷ್ಟೇ ಅಲ್ಲದೆ ರಾಷ್ಟೃದ ಗಮನ ಸೆಳೆದಿದೆ. ದೇಶದ ನಾನಾ ಭಾಗದಿಂದ ಪ್ರವಾಸಿಗರು ಇಲ್ಲಿಗೆ ಬಂದು ಯಾಣದ ಗುಹೆಯಲ್ಲಿರುವ ಭೈರವೇಶ್ವರ ದೇವರ ದರ್ಶನ ಪಡೆಯುವುದರ ಜೊತೆಗೆ ಇಲ್ಲಿರುವ ಸುಂದರ ಪ್ರಕೃತಿಯ ಸವಿಯನ್ನು ಸವಿಯುತ್ತಿದ್ದಾರೆ. ಹಾಗಗಿ ಈ ಭಾಗದಲ್ಲಿ ಮೂಲಭೂತ ಸೌಕರ್ಯದ ಅವಶ್ಯಕತೆ ಇದೆ. ಹಾಗಾಗಿ ಸಚಿವರೊಂದಿಗೆ ಚಚರ್ಿಸಿ ಇಲ್ಲಿನ ಸಮಸ್ಯೆಗಳನ್ನು ಪರಿಸರಿಸುವುದಾಗಿ ಭೆರವಸೆ ನೀಡಿದರು.
ಇಲ್ಲಿನ ಸುತ್ತಮುತ್ತಲಿ ಗ್ರಾಮದಲ್ಲಿ ವಿದ್ಯುತ್, ಬಸ್ ಹಾಗೂ ರಸ್ತೆಗಳ ಸಮಸ್ಯೆಗಳಿದೆ. ಅಲ್ಲದೇ ಈ ಭಾಗದಲ್ಲಿ ಹೊಸದಾಗಿ ಟಿ ಸಿ ಹಾಕುವ ಕಾಮಗಾರಿ ಮಂಜೂರಾಗಿ 6 ತಿಂಗಳ ಕಳೆದರೂ ಇನ್ನುವರೆಗೂ ಹೆಸ್ಕಾಂ ಇಲಾಖೆಯವರು ಕಾಮಗಾರಿ ಪ್ರಾರಂಭಿಸಲಿಲ್ಲ. ವಿದ್ಯುತ್ ತಂತಿಗಳು ಎಲ್ಲಂದರಲ್ಲಿ ಜೋತು ಬಿದ್ದಿವೆ. ಅದನ್ನು ಸಹ ಸರಿಪಡಿಸುತ್ತಿಲ್ಲ ಎಂದು ಸಭೆಗೆ ಆಗಮಿಸಿದ ಗ್ರಾಮಸ್ಥರು ಶಾಸಕರಿಗೆ ದೂರಿದರು. ಗ್ರಾಮಸ್ಥರ ದೂರಿಗೆ ಸ್ಪಂದಿಸಿದ ಶಾಸಕರು, ಸಭೆಯಲ್ಲಿ ಉಪಸ್ಥಿತರಿದ್ದ ಹೆಸ್ಕಾಂ ಅಭಿಯಂತರರನ್ನು ಹಾಗೂ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಈ ಕಾಮಗಾರಿಗಳನ್ನು 1 ವಾರದಲ್ಲಿ ಮುಗಿಸಿ ನನಗೆ ವರದಿ ಒಪ್ಪಿಸಬೇಕೆಂದು ಸೂಚಿಸಿದರು.
ಕುಮಟಾದಿಂದ ಯಾಣ ಭಾಗಕ್ಕೆ ಬರುವ ಮಧ್ಯಾಹ್ನದ ಬಸ್ಸನ್ನು ಶಾಲಾ, ಕಾಲೇಜು ವಿದ್ಯಾಥರ್ಿಗಳ ಅನುಕೂಲವಾಗುವಂತೆ ಕುಮಟಾದಿಂದ ಮಧ್ಯಾಹ್ನ 3.15 ಗಂಟೆಗೆ ಬಸ್ ಬಿಡುವ ವ್ಯವಸ್ಥೆಯಾಗಬೇಕು ಎಂದು ವಿದ್ಯಾಥರ್ಿಗಳ ಪಾಲಕರು ಶಾಸಕರನ್ನು ಕೋರಿಕೊಳ್ಳುವ ಜೊತೆಗೆ ಹೆಗ್ಗಾರಗದ್ದೆ ರಸ್ತೆಗೆ ಸೇತುವೆ ಹಾಗೂ ಪಟಗಾರ ಕೇರಿಯ ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಪೈಪ್ ಮೋರಿ, ಗಟಾರ ನಿಮರ್ಿಸಿಕೊಡುವಂತೆ ಆ ಭಾಗದ ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಶಾಸಕರ ಅನುದಾನ ನಿಧಿಯ ಹಣದಿಂದ ಕಾಮಗಾರಿ ಮಾಡಿಸಿಕೊಡುವುದಾಗಿ ದಿನಕರ ಶೆಟ್ಟಿ ಭರವಸೆ ನಿಡಿದರು.
ಭೈರವೇಶ್ವರ ದೇವಸ್ಥಾನಕ್ಕೆ ಬರುವ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಪರಿವತರ್ಿಸಿಕೊಡಬೇಕು, ಶಾಸಕರ ನಿಧಿಯಿಂದ ದೇವಸ್ಥಾನದ ಆವರಣಕ್ಕೆ ಇಂಟರ್ಲಾಕ್ ಹಾಕಿಸಿಕೊಡಬೇಕು ಹಾಗೂ ಕುಮಟಾ ಯಾಣ ರಸ್ತೆಯ ಮೂಲಕ ಶಿಶರ್ಿಗೆ ಹೋಗಲಿರುವ ಮಣ್ಣು ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಪರಿವತರ್ಿಸುವುದರ ಮೂಲಕ ಈ ರಸ್ತೆಯ ಉಪಯೋಗ ಜನರಿಗೆ ಲಭಿಸುವಂತೆ ಮಾಡಬೇಕು. ಜೊತೆಗೆ ಯಾಣ ಭಾಗಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಸಕರ್ಾರದ ಯೋಜನೆಗಳ ಮೂಲಕ ಒದಗಿಸಿಕೊಡಬೇಕೆಂದು ಭೈರವೇಶ್ವರ ದೇವಸ್ಥಾನದ ವತಿಯಿಂದ ದೇವಸ್ಥಾನದ ಮೋಕ್ತೆಸರ ಸೀತಾರಾಮ ಭಟ್ಟ ಮನವಿ ಸಲ್ಲಿಸಿ ಶಾಸಕರನ್ನು ಕೋರಿಕೊಂಡರು.
ಸಂಡಳ್ಳಿ ಶಾಲೆಗೆ ಆವರಣ ಗೋಡೆ ಮತ್ತು ಕುಡಿಯುವ ನೀರಿನ ಬಾವಿಯನ್ನು ನಿಮರ್ಿಸಿಕೊಡುವಂತೆ ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷರು ಹಾಗೂ ಸದಸ್ಯರು ಶಾಸಕ ದಿನಕರ ಶೆಟ್ಟಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಎನ್ಆರ್ಇಜಿ ವತಿಯಿಂದ ಶಾಲೆಯ ಆವರಣ ಗೋಡೆ ಮತ್ತು ಬಾವಿಯನ್ನು ನಿಮರ್ಿಸಿಕೊಡುವಂತೆ ತಾಲೂಕಾ ಪಂಚಾಯತ್ ಕಾರ್ಯ ಕಾರ್ವಹಣಾಧಿಕಾರಿಗೆ ಆದೇಶಿಸಿದರು.
ನಂತರ ಶಾಸಕರು ಹೆಬ್ಬಾರ ಮನೆ ಕ್ರಾಸ್ನಿಂದ ದೇವನಳ್ಳಿ-ಶಿರಸಿಗೆ ಸಂಪರ್ಕ ಕಲ್ಪಿಸುವ 3ಕಿಮೀ ಮಣ್ಣಿನ ರಸ್ತೆಯಲ್ಲಿ ಕಾಲ್ನೆಡಿಗೆಯಿಂದ ತೆರಳಿ ರಸ್ತೆ ಪರಿಶೀಲನೆ ನಡೆಸಿದರು. ತಡಸ-ಕುಮಟಾ ರಸ್ತೆಯನ್ನು ಹೆದ್ದಾರಿಯನ್ನಾಗಿಸುವ ಕಾಮಗಾರಿಗಾಗಿ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸುವ ಯೋಜನೆಯನ್ನು ರೂಪಿಸಿದೆ. ಇದರಿಂದ ಕರಾವಳಿ ಭಾಗದಿಂದ ಶಿರಸಿ ಮಾರ್ಗವಾಗಿ ಸಂಚರಿಸುವವರಿಗೆ ಹಾಗೂ ಮಾರ್ಗಮಧ್ಯದಲ್ಲಿನ ಊರಿನ ಜನತೆಗೆ ತೊಂದರೆ ಅನುಭವಿಸುವಂತಾಗುತ್ತದೆ. ಈ ತೊಂದರೆ ನಿವಾರಣೆಗಾಗಿ ಹೆಬ್ಬಾರ ಮನೆ ಕ್ರಾಸ್ನಿಂದ ದೇವನಳ್ಳಿ, ಶಿರಸಿ ರಸ್ತೆಯನ್ನು ಪಯರ್ಾಯವಾಗಿ ವಾಹನ ಚಲಾಯಿಸುವಂತೆ ನಿಮರ್ಿಸಿಕೊಡಬೇಕು ಎಂದು ಒತ್ತಾಯಿಸಿದ್ದಲ್ಲದೇ, ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚಚರ್ಿಸಲಿದ್ದೇನೆ ಎಂದರು.
ಜಿ ಪಂ ಸದಸ್ಯ ಗಜಾನನ ಪೈ ಅವರು ಮಾತನಾಡಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಅವರ ಕರ್ತವ್ಯವನ್ನು ನಿರ್ವಹಿಸಬೇಕು. ಆದರೆ ರೈತರಿಗೆ ಕಿರುಕುಳ ನೀಡುವಂತವರಾಗಬಾರದು. ರೈತರ ಜೊತೆ ಅರಣ್ಯ ಇಲಾಖಾ ಸಿಬ್ಬಂದಿಗಳು ಪ್ರೀತಿಯಿಂದ ವತರ್ಿಸಬೇಕು ಎಂದರು.
ಈ ಸಂದರ್ಭದಲ್ಲಿ ಭೈರವೇಶ್ವರ ದೇವಾಲಯದಲ್ಲಿ 35 ವರ್ಷದಿಂದ ಟ್ರಸ್ಟ್ಟಿಯಾಗಿ ಸೇವೆಸಲ್ಲಿಸುತ್ತಿದ್ದ ಹಾಗೂ ದೇವಾಲಯದ ಮಹಾದ್ವಾರವನ್ನು ತಮ್ಮ ಸ್ವಂತ ಖಚರ್ಿನಿಂದ ನಿಮರ್ಿಸಿಕೊಡುವುದಲ್ಲದೇ ದೇವಾಲಯದಲ್ಲಿ ನಡೆಯುವ ಎಲ್ಲ ಧಾಮರ್ಿಕ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ದೇವಾಲಯದ ಅಭಿವೃದ್ಧಿ ಹಾಗೂ ಊರಿನ ಶ್ರೇಯೋಭಿವೃದ್ಧಿ ಕಾರ್ಯಗಳಲ್ಲಿ ಕಳಕಳಿ ಹೊಂದಿದವರಾಗಿದ್ದ ಸೀತಾರಾಮ ಭಟ್ ಇವರಿಗೆ ಊರ ನಾಗರಿಕರ ಪರವಾಗಿ ಶಾಸಕ ದಿನಕರ ಶೆಟ್ಟಿ ಅವರು ಸನ್ಮಾನಿಸಿ, ಗೌರವಿಸಿದರೆ, ದಿನಕರ ಶೆಟ್ಟಿ ಶಾಸಕರಾದ ನಂತರ ಇದೇ ಮೊದಲ ಬಾರಿಗೆ ಯಾಣ ಗ್ರಾಮಕ್ಕೆ ಭೇಟಿ ನೀಡಿದ್ದರಿಂದ ಅಲ್ಲಿನ ಜನತೆ ಹಾಗೂ ದೇವಸ್ಥಾನದ ಟ್ರಸ್ಟಿನ ವತಿಯಿಂದ ಶಾಸಕರಿಗೆ ಸನ್ಮಾನಿಸಿ, ಗೌರವಿಸಿದರು.
ತಾ ಪಂ ಸದಸ್ಯೆ ಅನಸೂಯಾ ಅಂಬಿಗ, ಮಾಜಿ ಜಿ ಪಂ ಸದಸ್ಯ ಜಿ ಎಂ ಶೆಟ್ಟಿ ಅಂಕೋಲಾ, ತಾ ಪಂ ಕಾರ್ಯನಿರ್ವಹಣಾಧಿಕಾರಿ ಸಿ ಟಿ ನಾಯ್ಕ, ಜಿ ಪಂ ಎಇಇ ಆರ್ ಜಿ ಗುನಗಿ, ಲೋಕೋಪಯೋಗಿ ಎಇಇ ಶಾನಭಾಗ, ಕ್ಷೇತ್ರ ಶಿಕ್ಷಣಾಧಿಕಾರಿ ಮುಲ್ಲಾ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸೀತಾರಾಮ ಮರಾಠಿ ಸ್ವಾಗತಿಸಿ, ನಿರೂಪಿಸಿದರು. ನರೇಂದ್ರ ಭಟ್ ವಂದಿಸಿದರು.