ಬ್ಯಾಡಗಿ೧೮: ಪಟ್ಟಣದಲ್ಲಿರುವ ಕೋಲ್ಡ್ ಸ್ಟೊರೇಜ್ಗಳಲ್ಲಿ ಒಣ ಮೆಣಸಿನಕಾಯಿ ಚೀಲಗಳನ್ನು ಸಂಗ್ರಹಿಸಿಡಲು ವಿವಿಧ ರಾಜ್ಯ ಹಾಗೂ ರಾಜ್ಯದ ಕೊರೊನಾ ಸೋಂಕಿತ ಜಿಲ್ಲೆಗಳಿಂದ ಬರುತ್ತಿರುವ ವಾಹನಗಳನ್ನು ನಿಷೇಧಿಸುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಹಾವೇರಿಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅವರನ್ನು ಭೇಟಿಯಾಗಿ ಮಾತನಾಡಿದ ಅವರು ರಾಜ್ಯದ ಕೊರೋನಾ ವೈರಸ್ ಹಾಟ್ಸ್ಪಾಟ್ ಜಿಲ್ಲೆಗಳಾದ ಬಳ್ಳಾರಿ, ರಾಯಚೂರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಪಟ್ಟಣಕ್ಕೆ ಆಗಮಿಸುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಈ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿವೆ. ಕಾರಣ ಮುಂಜಾಗ್ರತೆಯ ಹಿನ್ನಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿಗಳು ಬಳ್ಳಾರಿ ಮತ್ತು ರಾಯಚೂರ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಸಂಪಕರ್ಿಸಿ ಬ್ಯಾಡಗಿ ಹಾಗೂ ಹಾವೇರಿ ಜಿಲ್ಲೆಯ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಒಣ ಮೆಣಸಿನಕಾಯಿ ಚೀಲಗಳನ್ನು ಹೊತ್ತು ತರುವ ವಾಹನಗಳಿಗೆ ಅನುಮತಿ ನೀಡದಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಈವರೆಗೂ ಹಾವೇರಿ ಜಿಲ್ಲೆಯಲ್ಲಿ ಒಂದೇ ಒಂದೂ ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆಯಾಗದಿರುವುದು ನಮ್ಮೆಲ್ಲರ ಸುದೈವವಾಗಿದ್ದು, ಇನ್ನೂ ಮುಂದಿನ 15 ದಿನಗಳ ಕಾಲ ಮುನ್ನೆಚ್ಚರಿಕೆಯಲ್ಲಿ ಕಠಿಣ ಕ್ರಮಗಳ ಮೂಲಕ ಲಾಕ್ ಡೌನ್ ಆದೇಶವನ್ನು ಪಾಲನೆಯಾಗುವಂತೆ ಜಿಲ್ಲೆಯಾದ್ಯಂತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.