ಗ್ರಾಮದೇವತೆ ಜಾತ್ರೆಗೆ ಚಾಲನೆ ನೀಡಿದ ಶಾಸಕ ಬಸವರಾಜ ಶಿವಣ್ಣನವರ.ಗ್ರಾಮದೇವತೆ ಜಾತ್ರೆಗೆ ಧ್ವಜಾರೋಹಣ ಕಾರ್ಯಕ್ರಮ
ಬ್ಯಾಡಗಿ 01 :ಪಟ್ಟಣದ ಗ್ರಾಮದೇವತೆ ಜಾತ್ರೆಗೆ ಧ್ವಜಾರೋಹಣ ಮೂಲಕ ಚಾಲನೆ ನೀಡಿ ಮಾತನಾಡಿದ ಗ್ರಾಮ ದೇವತೆ ಜಾತ್ರೆಗಳು ನಮ್ಮ ಸಂಸ್ಕೃತಿಯ ರಾಯಭಾರಿ ಯಾಗಿವೆ.ಪ್ರತಿ ಐದು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ ಊರಿನ ಗ್ರಾಮದೇವಿಯ ಜಾತ್ರೆ ಎಂದರೆ ಇದು ಕೆವಲ ಒಂದು ಜಾತಿಗೆ ಸೀಮಿತ ನಲ್ಲಿ ಇಡಿ ಪಟ್ಟಣಕ್ಕೆ ಸರ್ವ ಜಾತಿಗಳಿಗೂ ಜಾತ್ರೆ ಎಂದರು ಈ 7 ದಿನಗಳ ಕಾಲ ನಡೆಯುವ ಜಾತ್ರೋತ್ಸವಕ್ಕೆ ಸರ್ವರು ಪಾಲ್ಗೂಳ್ಳಬೇಕು ಎಂದರು. ಮುಂದಿನ ಜಾತ್ರೆಯಲ್ಲಿ ದ್ಯಾಮವ್ವ ದೇವಿಯ ಬಗ್ಗೆ ಎರಡು ದಿನ ಪ್ರವಚನ ಇಟ್ಟುಕೊಳ್ಳ ಬೇಕು ಎಂದರು.ದಿನಾಲು ಸಾಯಂಕಾಲ ಸಾಂಸ್ಕೃತೀಕ ಕಾರ್ಯಕ್ರಮ ಇಟ್ಟು ಕೊಂಡಿದ್ದು ತುಂಬಾ ಸಂತೋಷ ತಂದಿದೆ.ದೇವಿಯು ರೈತರಿಗೆ ಮಳೆ ಬೆಳೆ ಚೆನ್ನಾಗಿ ಬರಲಿ ಪ್ರತಿ ಯೊಬ್ಬರಿಗೂ ದ್ಯಾಮವ್ವ ಆರೋಗ್ಯ ಆಯುಷ್ಯ ನೀಡಿ ಆಶೀರ್ವದಿಸಲಿ ಎಂದು ಹೇಳಿದರು ಜಾತ್ರೆ ಕಾರ್ಯಕ್ರಮದೂ ಎಲ್ಲರೂ ಭಾಗವಹಿಸಿ ಯಶಸ್ವಿ ಗೊಳಿಸಿ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿ ಗಂಗಣ್ಣ ಎಲಿ ಗುಡ್ಡಪ್ಪ ಕಾಟೇನಹಳ್ಳಿ ವಾರ ಸಮಕಾಲಿನವರು ಈ ಜಾತ್ರೆ ನಡೆದುಕೊಂಡು ಬಂದಿದೆ ಮಧ್ಯಯದಲ್ಲಿ ನಿಂತಿತ್ತು 1995 ರಲ್ಲಿ ಮತ್ತೆ ಜಾತ್ರೆ ಮಾಡಲು ಇಬ್ಬರು ಮುಂದೆ ಬಂದರು ಅವರೆ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ.ಎಸ್ ಆರ್ ಪಾಟೀಲ ಅವರು ಕೈಜೋಡಿಸಿ ಜಾತ್ರೆಯನ್ನು ಮಾಡಲು ಚಾಲನೆ ನೀಡಿದರು.60. ಲಕ್ಷ ಉಳಿತಾಯ ಅದರಲ್ಲಿ 40 ಲಕ್ಷ ವೆಚ್ಚದಲ್ಲಿ ಜಾಗ ತೆಗೆದುಕೊಂಡಿತು 10 ಲಕ್ಷ ವೆಚ್ಚದಲ್ಲಿ ಎಂ ಪಿ ಎಂ ಸಿ ಮಾರುಕಟ್ಟೆಯ ಹಿಂದಿನ ಗೇಟಿನ ಹತ್ತಿರ ಜಾಗ ಖರೀದಿಸಿದಲಾಗಿದೆ ಎಂದು ಹೇಳಿದರು.ಮಂಗಳವಾರ ದಿನ ಸಾಯಂಕಾಲ ಸುಮಾರು 70, ಕ್ಕೂ ಹೆಚ್ಚು ಕಲಾತಂಡಗಳು ಬರುತ್ತವೆ ಸುಮಾರು 10.30 ಕೀಲೋ ಮೀಟರ್ ಸಾಗುವುದು ಪ್ರತಿ ವಾರ್ಡುಗಳಲ್ಲಿ ಆಯಾ ಮೆಂಬರಗಳು ಮೆರವಣಿಗೆ ಸಾಗುವುದು.ಎಂದರು.ಈ ಸಂದರ್ಭದಲ್ಲಿ ಮುಪ್ಪಿನೇಶ್ವರ ಮಠದ ಮಲ್ಲಿಕಾರ್ಜುನ ಸ್ವಾಮಿಗಳು. ಪುರಸಭೆ ಅಧ್ಯಕ್ಷ ಬಾಲಚಂದ್ರ ಗೌಡ ಪಾಟೀಲ.ಅಧ್ಯಕ್ಷತೆ ಪುಟ್ಟಪ್ಪ ಛತ್ರದ.ಎಸ್ ಆರ್ ಪಾಟೀಲ.ಬಸಣ್ಣ ಛತ್ರದ.ಮುರಗೆಪ್ಪ ಶೆಟ್ಟರ.ಗಂಗಾಧರಯ್ಯಾ ಹೀರೆಮಠ.ಓದಿಸೋಮಠ ರಾಮಯ್ಯನವರು.ಕುಮಾರಗೌಡ ಪಾಟೀಲ.ಸುಭಾಷ ಮಾಳಗಿ.ಪ್ರದೀಪ ಕಟಾವಕರ.ರಾಮಣ್ಣ ಕೋಡಿಹಳ್ಳಿ.ಸುರೇಶ ಆಸಾದಿ.ಚಂದ್ರಣ್ಣ ಶೆಟ್ಟರ.ಗಜಾನನ ರಾಯ್ಕರ.ಜಯಣ್ಣ ಸುಣಗಾರ.ಬಸಪ್ಪ ಬೋಗಳೆ.ಮುಕ್ತೆಯರ ಮುಲ್ಲಾ. ಶಿವಣ್ಣ ಬಣಕಾರ.ಸೋಮಣ್ಣ ಕರ್ನೂಲ್.ಆರ್ ಸಿ ಹೊತ್ತಿಗಿಗೌಡ್ರ.ದುರ್ಗೆಶ ಗೋಣೆಮ್ಮನವರ . ಬುದ್ದಿವಂತ ಹಂಜಗಿ.ಸಂಜೀವ ಮಡಿವಾಳರ.ಹಾಗೂ ಎಲ್ಲಾ ಸಮಾಜದ ಬಾಂಧವರು ಊರು ನಾಗರೀಕರು ಉಪಸ್ಥಿತರಿದ್ದರು.