ನೂತನ ಕಟ್ಟಡ ಕಾಮಗಾರಿಗೆ ಶಾಸಕ ಅರುಣಕುಮಾರ ಭೂಮಿ ಪೂಜೆ

ಲೋಕದರ್ಶನವರದಿ

ರಾಣೇಬೆನ್ನೂರು ಜೂ.21: ಇಲಾಖೆಗಳಿಗೆ ಮೂಲಭೂತ ಕಟ್ಟಡದೊಂದಿಗೆ ಸೌಲಭ್ಯವಿದ್ದರೇ, ಎಲ್ಲ ರೀತಿಯಲ್ಲಿ ನಾಗರೀಕ ಸೇವೆಯನ್ನು ನೀಡಲು ಸಾಧ್ಯವಾಗುವುದು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. ಅವರು ಶನಿವಾರ ನಗರದ ಹಂಚಿನ ಫ್ಯಾಕ್ಟರಿ ಹಿಂಭಾಗದಲ್ಲಿ ರೈತ ಸಂಪರ್ಕ ಕೇಂದ್ರ  ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜಾ ನೆರವೇರಿಸಿ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನ ನಗರದಲ್ಲಿ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ತಂದು ಮಾರಾಟ ಮಾಡುತ್ತಾರೆ.  ಅವರಿಗೆ ಸಂಪರ್ಕ ಕೇಂದ್ರಗಳ ಅಗತ್ಯತೆ ಬಹಳಷ್ಟು ಇದೆ.  ಈ ವಿಷಯವನ್ನು ಇಲಾಖೆ ಗಮನಕ್ಕೆ ತಂದಿದ್ದರಿಂದ ತಾವು ಕೂಡಲೇ ಈ ಕುರಿತು ಕ್ರೀಯಾ ಯೋಜನೆ ರೂಪಿಸಲು ಸೂಚಿಸಲಾಗಿತ್ತು.  ಅದರಂತೆ ನೂತನ ಕಟ್ಟಡ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ.  ಗುತ್ತಿಗೆದಾರರು ಇದು ರೈತ ಸಂಪರ್ಕ ಕೇಂದ್ರವಾಗಿರುವುದರಿಂದ ಪರಿಪೂರ್ಣ ಗುಣಮಟ್ಟದ ಕಾಮಗಾರಿಯನ್ನು ಮಾಡಿ ನಿಗದಿತ ಅವಧಿಯಲ್ಲಿ ರೈತರ ಸೇವೆಗೆ ಲೋಕಾರ್ಪಣೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಬಿಜೆಪಿ ತಾಲೂಕಾ ಮಾಜಿ ಅಧ್ಯಕ್ಷ ವಿಶ್ವನಾಥ ಪಾಟೀಲ, ನಗರಸಭೆ ಪೌರಾಯುಕ್ತ ಡಾ|| ಎನ್.ಮಹಾಂತೇಶ್, ಕೃಷಿ ಸಹಾಯಕ ನಿದರ್ೇಶಕ ಎಚ್.ಬಿ.ಗೌಡಪ್ಪಳವರ, ಭೂ ಸೇನಾ ನಿಗಮದ ಅಧಿಕಾರಿ ರುದ್ರೇಶ್, ಉತ್ತರ ಕನರ್ಾಟಕ ರೈತ ಹಾಗೂ ರೈತ ಕಾಮರ್ಿಕರ ಸಂಘದ ಅಧ್ಯಕ್ಷ ಕೃಷ್ಣಮೂತರ್ಿ ಲಮಾಣಿ, ಗುತ್ತಿಗೆದಾರ ಸುರೇಶ್ಗೌಡ್ರ, ಎಸ್.ಎಸ್.ಮುದ್ದಪ್ಪಳವರ, ಬಿಜೆಪಿ ನಗರ ಅಧ್ಯಕ್ಷ ದೀಪಕ್ ಹರಪನಹಳ್ಳಿ, ಪವನ್ ಮಲ್ಲಾಡದ, ರಾಘವೇಂದ್ರ ಕುಲಕಣರ್ಿ ಸೇರಿದಂತೆ ಮತ್ತಿತರ ಗಣ್ಯರು, ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.