ಲೋಕದರ್ಶನ ವರದಿ
ಧಾರವಾಡ 04: ಇಲ್ಲಿಯ ಮೃತ್ಯುಂಜಯ ಅರ್ಬನ ಕೋ-ಆಫ್ ಕ್ರೆಡಿಟ್ ಸೊಸಾಯಿಟಿಯ ಕಾರ್ಯನಿವರ್ಾಹಕ ಮೇಘರಾಜ ವ್ಹಿ. ಹದ್ಲಿ ದಿ. 31ರಂದು ಸೇವಾ ನಿವೃತ್ತಿ ಹೊಂದಿದರು. ಮೂಲತಃ ನರಗುಂದ ತಾಲೂಕಿನ ಹದ್ಲಿ ಗ್ರಾಮದವರಾದ ಎಂ. ವ್ಹಿ. ಹದ್ಲಿ ಇವರು ಸೊಸಾಯಿಟಿಯಲ್ಲಿ ಕಳೆದ ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಪ್ರಾಮಾಣಿಕವಾಗಿ, ಸಹಕಾರ ತತ್ವದಡಿ ಸೇವೆ ಸಲ್ಲಿಸಿ, ಸೊಸಾಯಿಟಿ ಅಭಿವೃದ್ಧಿಯಲ್ಲಿ ಕಾರ್ಯಮಾಡಿದ್ದನ್ನು ಸ್ಮರಿಸಿ, ಸೊಸಾಯಿಟಿ ಅಧ್ಯಕ್ಷ ಅರವಿಂದ ಕಪಲಿ ಅವರ ಅಧ್ಯಕ್ಷತೆಯಲ್ಲಿ ಸೊಸಾಯಿಟಿ ವತಿಯಿಂದ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಮೇಘರಾಜ ಹದ್ಲಿ ಹಾಗೂ ಕಸ್ತೂರಿ ಹದ್ಲಿ ದಂಪತಿಗಳನ್ನು ಸನ್ಮಾನಿಸಿ ಹೃದಯಸ್ಪಶರ್ಿಯಾಗಿ ಬೀಳ್ಕೊಡಲಾಯಿತು.
ಸೊಸಾಯಿಟಿ ಸಂಸ್ಥಾಪಕ ಅಧ್ಯಕ್ಷ ಅರುಣ ಚರಂತಿಮಠ, ಮಾಜಿ ಅಧ್ಯಕ್ಷರು, ನಿದರ್ೇಶಕರಾದ ಬಾಪುಗೌಡ ಪಾಟೀಲ, ಸಿ. ಎಸ್. ಪಾಟೀಲ, ಬಸವರಾಜ ಕಪಲಿ, ಮಾರ್ಕಂಡೇಯ ದೊಡಮನಿ ಹಾಗೂ ಕುಮಾರೇಶ್ವರ ಗೃಹ ನಿಮರ್ಾಣ ಸಹಕಾರ ಸಂಘದ ಕಾರ್ಯದಶರ್ಿ ಆರ್. ವಿ. ಪಾಟೀಲ ಹಾಗೂ ಪಿ.ಎಲ್. ಡಿ. ಬ್ಯಾಂಕ್ ಮಾಜಿ ಕಾರ್ಯದಶರ್ಿ ಸಿ. ಜಿ. ಹಿರೇಮಠ ಮಾತನಾಡಿ, ಸರಳ ಸಜ್ಜನಿಕೆ, ಶಾಂತ ಗುಣ ಹೊಂದಿರುವ ಹದ್ಲಿ, ತಮ್ಮ ಸೇವಾ ಅವಧಿಯುದ್ದಕ್ಕೂ ಸಹಕಾರ ಕ್ಷೇತ್ರದಲ್ಲಿ ತಾಳ್ಮೆ ಹಾಗೂ ಸೌಜನ್ಯದಿಂದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯಹೊಂದಿ ಸದಸ್ಯರಿಗೆ ಸಾಲ ಮಂಜೂರಾತಿ ಹಾಗೂ ವಸೂಲಾತಿ ಸೇರಿದಂತೆ ಸೊಸಾಯಿಟಿಯ ಎಲ್ಲ ಕೆಲಸ ಕಾರ್ಯಗಳನ್ನು ಸುಗಮವಾಗಿ ನಡೆಸಿಕೊಂಡು ಬಂದ ಎಂ. ವ್ಹಿ. ಹದ್ಲಿ, ಸೊಸಾಯಿಟಿಯ ಬೆಳವಣಿಗೆಗೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿ, ಇದು ಅನುಕರಣೀಯ, ಇವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಶುಭ ಕೋರಿದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಎಂ. ವ್ಹಿ. ಹದ್ಲಿ, ತಮ್ಮ ಸೇವಾ ಅವಧಿಯುದ್ದಕ್ಕೂ ಮೃತ್ಯುಂಜಯಪ್ಪಗಳ ಸದಾಸ್ಮರಣೆಯೊಂದಿಗೆ, ಸೊಸಾಯಿಟಿ ಸದಸ್ಯರು, ಆಡಳಿತ ಮಂಡಳಿ ನೀಡಿದ ಸಹಾಯ, ಸಹಕಾರ, ಮಾರ್ಗದರ್ಶನ ಮತ್ತು ಸೊಸಾಯಿಟಿ ಸಹಸಿಬ್ಬಂದಿಗಳು, ಠೇವು ಸಂಗ್ರಹ ಸದಸ್ಯರು ತೋರಿದ ಪ್ರೀತಿ, ವಿಶ್ವಾಸ, ಸಹಕಾರಗಳಿಂದ ತಮ್ಮ ಸೇವಾ ಅವಧಿಯನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಯಿತು ಎಂದು ಭಾವುಕರಾಗಿ ಆತ್ಮೀಯ ಬೀಳ್ಕೊಡುಗೆಗೆ ತಮ್ಮ ಕೃತಜ್ಞತೆ ಸಲ್ಲಿಸಿ, ಇನ್ನುಮುಂದೆಯೂ ಸಹ ತಾವು ಸೊಸಾಯಿಟಿಯ ಅಭಿವೃದ್ಧಿಯ ಕೆಲಸ, ಕಾರ್ಯಗಳಲ್ಲಿ ಕೈಜೋಡಿಸಿ ಸಹಕಾರ ನೀಡುವದಾಗಿ ಹೇಳಿದರು.
ಸೊಸಾಯಿಟಿ ಕಾನೂನು ಸಲಹೆಗಾರ ಶಿವಾನಂದ ಭಾವಿಕಟ್ಟಿ ನಿರ್ವಹಿಸಿದರು. ನಿದರ್ೇಶಕಿ ಮಾಜಿ ಉಪಾಧ್ಯಕ್ಷೆ ಪಾರ್ವತಿ ಹಾಲಭಾವಿ ವಂದಿಸಿದರು. ಸೊಸಾಯಿಟಿ ಉಪಾಧ್ಯಕ್ಷ ಈಶ್ವರಗೌಡ ಎಲ್. ಪಾಟೀಲ, ನಿದರ್ೇಶಕರಾದ ಎಲ್. ಸಿ. ಕಬ್ಬೂರ, ಜಗದೀಶ ಹೊಳೆಯಣ್ಣವರ, ಮಹಾದೇವಿ ಕಬ್ಬೂರ, ಕಾನೂನು ಸಲಹೆಗಾರ ಎಸ್. ಬಿ. ಮತ್ತೂರ ಹಾಗೂ ಕುಮಾರೇಶ್ವರ ಗೃ.ನಿ.ಅ.ಸಂಘ, ಮೃತ್ಯುಂಜಯ ಸೊಸಾಯಿಟಿ, ಧಾರವಾಡ ಜಿಲ್ಲಾ ಯುನಿಯನ್ ಸಿಬ್ಬಂದಿಗಳಾದ ಗದಿಗೆಪ್ಪ ಜಕ್ಕಣ್ಣವರ, ಕಲ್ಲಪ್ಪ ಬಡಮಲ್ಲಣ್ಣವರ, ಸಿಬ್ಬಂದಿಗಳಾದ ಎಸ್. ಪಿ. ಪೊಲೀಸ್ಪಾಟೀಲ, ಮಹೇಶ, ಬಾಪುಗೌಡ ಕುಲಕಣರ್ಿ, ಯಲ್ಲಪ್ಪ ಸಿಂದೋಗಿ, ಕರಬಸವ್ವ ಬಾರಿಮರದ, ಕಿರಣ, ಬಿ. ಎನ್. ಮೇಟಿ, ಆನಂದ ಕಂಬಿ, ಡಿ. ಬಿ. ಚಿಕ್ಕೋಡಿ, ಮಾಳವಾಡ, ಪರಮೇಶ ಜಾಲಿ, ರಮೇಶ ಪಾಟೀಲ, ಶಂಕರ ಮೂರಶಿಳ್ಳಿ, ಆನಂದ ರಾಮನಗೌಡರ ಹಾಗೂ ಹದ್ಲಿ ಇವರ ಪರಿವಾರ ಮುಂತಾದವರು ಪಾಲ್ಗೊಂಡಿದ್ದರು.