ಲೋಕದರ್ಶನ ವರದಿ
ಯಲ್ಲಾಪುರ 13: ಕಳೆದ 20 ತಿಂಗಳ ಅವಧಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ
ಅಧ್ಯಕ್ಷರಾಗಿದ್ದ ಎಂ ಜಿ ಭಟ್ಟ
ಸಂಕದಗುಂಡಿ ಉಪಾಧ್ಯಕ್ಷರಾಗಿದ್ದ ರಾಘವೇಂದ್ರ ಗೋಂಧಿ ಮುಂದಿನ 20 ತಿಂಗಳ ಅವಧಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಶುಕ್ರವಾರ ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಯಲ್ಲಿ ತಹಶೀಲ್ದಾರ ಡಿ ಜಿ ಹೆಗಡೆ
ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು, ನಿಗದಿತ ಸಮಯದಲ್ಲಿ ಅಧ್ಯಕ್ಷರ ಹುದ್ದೆಗೆ ಎಂ ಜಿ ಭಟ್ಟ
ಸಂಕದಗುಂಡಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷ ಹುದ್ದೆಗೆ ರಾಘವೇಂದ್ರ ಗೋಂಧಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.
ಬೇರೆ
ಯಾರು ನಾಮಪತ್ರ ಸಲ್ಲಿಸದೇ ಇರುವ ಹಿನ್ನೆಲೆಯಲ್ಲಿ ನಾಮ
ಪತ್ರವನ್ನು ಪರಿಶೀಲಿಸಿ ನಾಮಪತ್ರ ಸಿಂಧುಗೊಳಿಸಿ ತಹಶೀಲ್ದಾರ ಡಿ ಜಿ ಹೆಗಡೆ
ಅಧ್ಯಕ್ಷ ಉಪಾಧ್ಯಕ್ಷರ ಘೋಷಣೆ ಮಾಡಿದರು.
ಘೋಷಣೆಯ ನಂತರ ಎಪಿಎಂಸಿ ಸಭಾಭವನದಲ್ಲಿ
ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕ
ಶಿವರಾಮ ಹೆಬ್ಬಾರ, ಮಾತನಾಡಿ ಹಿಂದಿನ ಅವಧಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ಎಂ ಜಿ ಭಟ್ಟ
ಸಂಕದಗುಂಡಿ ಹಾಗೂ ರಾಘವೇಂದ್ರ ಗೋಂಧಿ
ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.
ಜಿಲ್ಲೆ
ಹಾಗೂ ರಾಜ್ಯದಲ್ಲಿ ಉತ್ತಮ ಎಪಿಎಂಸಿ ಎಂದು ಯಲ್ಲಾಪುರ ಎಪಿಎಂಸಿ
ಹೆಸರು ಗಳಿಸಿದೆ.
ಇಲ್ಲಿಯ ಎಲ್ಲ ಸದಸ್ಯರ ಸಹಕಾರ
ಹಾಗೂ ಅಭಿವೃದ್ಧಿ ಪರವಾಗಿ ಇರುವ ಅವರ ನಿಲುವು
ಈ ಎಲ್ಲ ಅಭಿವೃದ್ಧಿಗೆ ಹೆಸರಿಗೆ
ಕಾರಣವಾಗಿದೆ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ
ಅಭಿನಂದಿಸುವುದಾಗಿ ತಿಳಿಸಿದ ಅವರು ಮುಂದಿನ ದಿನಗಳಲ್ಲಿ
ಎಪಿಎಂಸಿ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.
ನೂತನ ಅಧ್ಯಕ್ಷ ಎಂ
ಜಿ ಭಟ್ಟ ಸಂಕದಗುಂಡಿ ಮಾತನಾಡಿ
ಹಿಂದಿನ ಅವಧಿಯಲ್ಲಿ ಬಹಳಷ್ಟು ಕಾಮಗಾರಿಗಳು ಅಪೂರ್ಣವಾಗಿದ್ದು ಈ ಕಾಮಗಾರಿಗಳು ಮುಂದುವರಿಯಬೇಕಾಗಿದೆ.
ಅಲ್ಲದೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಗೋದಾಮಿನ ಅವಶ್ಯಕತೆ ಇದೆ, ಎಪಿಎಂಸಿ ಆವಾರದಲ್ಲಿ
ಒಂದು ಕೋಟಿ ರೂಪಾಯಿ ವೆಚ್ಚದ
ರಸ್ತೆ ನಿಮರ್ಾಣವಾಗಬೇಕಾಗಿದೆ. ಈ ಎಲ್ಲ ಅಭಿವೃದ್ಧಿ
ಕಾರ್ಯಗಳು ಮುಂದಿನ ಇಪ್ಪತ್ತು ತಿಂಗಳಲ್ಲಿ ಸಂಪೂರ್ಣಗೊಳ್ಳುವುದು ಎನ್ನುವ ವಿಶ್ವಾಸ ತಮಗಿದೆ. ತಮ್ಮನ್ನು ಪುನರಾಯ್ಕೆ ಗೊಳಿಸಲು ಸಹಕರಿಸಿದ ಎಲ್ಲಾ ಸದಸ್ಯರಿಗೆ ಅಭಿನಂದಿಸಿದರು.
ಎಪಿಎಂಸಿ ಉಪಾಧ್ಯಕ್ಷ ರಾಘವೇಂದ್ರ ಗೋಂಧಿ, ಕಾರ್ಯದಶರ್ಿ ಕೃಷ್ಣಕಾಂತ ನಾಯ್ಕ, ಕೆಪಿಸಿಸಿ ಸದಸ್ಯ ವಿಜಯ ಮಿರಾಶಿ ವೇದಿಕೆಯಲ್ಲಿ
ಉಪಸ್ಥಿತರಿದ್ದರು.
ಎಪಿಎಂಸಿ ಸದಸ್ಯರಾದ ಹೇರಂಬ ಹೆಗಡೆ, ಲಾರೆನ್ಸ್ ಸಿದ್ದಿ, ಸದಾನಂದ ಭಟ್, ಪರಮೇಶ್ವರ ಗೌಡ, ವಿಶ್ವನಾಥ ಪಾಠಣಕರ, ಸುಬ್ರಾಯ ಮರಾಠಿ, ಸುನಂದಾ ಹೆಗಡೆ, ಪ್ರಭಾ ಭಾಗವತ, ಗೋಪಾಲಕೃಷ್ಣ ಗಾಂವ್ಕರ, ಮುರಳಿ ಹೆಗಡೆ, ಉಮೇಶ ಭಾಗ್ವತ, ನಾಮನಿದರ್ೆಶಿತ ಸದಸ್ಯರಾದ ಶ್ರೀಕಾಂತ ಶೆಟ್ಟಿ, ತಮ್ಮಣ್ಣ ಭಟ್ಟ ಕವಡಿಕೆರೆ, ಛಾಯಾ ಹೆಗಡೆ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಎಂ ಆರ್ ಹೆಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.