ಐರಿಸ್, ಮಾ 11:) ಬಾರ್ಸಿಲೋನಾ ಸ್ಟಾರ್ ಫುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿ 2022ರ ಫಿಫಾ ವಿಶ್ವಕಪ್ 23 ಸದಸ್ಯರ ಅರ್ಜೆಂಟೀನಾ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 32ರ ಪ್ರಾಯದ ಮೆಸ್ಸಿ ತಂಡವನ್ನು ಮುನ್ನಡೆಸುವ ಜತೆಗೆ ಸ್ಟ್ರೈಕರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮ್ಯಾಂಚೆಸ್ಟರ್ ಸಿಟಿ ತಂಡದ ಸರ್ಜಿಯೊ ಅಗ್ಯೂರ್, ಜುವೆಂಟಾಸ್ ಮುಂಚೂಣಿ ಆಟಗಾರ ಪೌಲೊ ಡಿಬಾಲ ಹಾಗೂ ಇಂಟರ್ಮಿಲನ್ ಲೌಥರೊ ಮಾರ್ಟಿನ್ಜ್ ಅವರೂ ಸ್ಥಾನ ಪಡೆದಿದ್ದಾರೆಂದು ಕ್ಸಿನುವಾ ವರದಿ ಮಾಡಿದೆ.ಬ್ಯೂನಸ್ ಐರಿಸ್ನಲ್ಲಿ ಮಾರ್ಚ್ 26ರಂದು ಈಕ್ವೇಡರ್ ವಿರುದ್ಧ ಹಾಗೂ ಐದು ದಿನಗಳ ನಂತರ ಬೊಲೊವಿಯಾ ವಿರುದ್ಧ ಅರ್ಜೆಂಟೀನಾ ಸೆಣಸಲಿದೆ. ನಂತರ, ದಕ್ಷಿಣ ಅಮೆರಿಕ ವಲಯ ಮಟ್ಟದ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡ ಭಾಗವಹಿಸಲಿದೆ. ಈ ಟೂರ್ನಿಯ ಮೊದಲನೇ ಪಂದ್ಯದಲ್ಲಿ ಮೆಸ್ಸಿ ಆಡುವುದಿಲ್ಲ. ಏಕೆಂದರೆ, ಕೊಪಾ ಅಮೆರಿಕಾ ಟೂರ್ನಿಯ ಬಳಿಕ ಈ ಭಾಗದಲ್ಲಿ ಅವರು ಅಮಾನತು ಶಿಕ್ಷೆಯಲ್ಲಿದ್ದಾರೆ. ಕೊರೊನಾ ವೈರಸ್ ಹೊರತಾಗಿಯೂ ಇಟಲಿ ಮೂಲದ ಐವರು ಆಟಗಾರರನ್ನು ಅರ್ಜೆಂಟೀನಾ ಮುಖ್ಯ ಕೋಚ್ ಲಿಯೊನೆಲ್ ಸ್ಕಾಲೋನಿ ಕರೆದಿದ್ದಾರೆ