ಚೆನ್ನೈ 07: ತಮಿಳುನಾಡಿನ ಮಾಜೀ ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ (ಆಒಏ) ಪಕ್ಷದ ಪರಮೋಚ್ಛ ನೇತಾರ ಮುತ್ತುವೇಲ್ ಕರುಣಾನಿಧಿ ಅವರು ಮಂಗಳವಾರ ಸಾಯಂಕಾಲ ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.
ವಯೋಸಹಜ ಅನಾರೋಗ್ಯದ ಕಾರಣದಿಂದ ಕರುಣಾನಿಧಿ ಅವರನ್ನು ಕೆಲ ದಿನಗಳ ಹಿಂದೆಯಷ್ಟೇ ನಗರದ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತು ಕಳೆದ ಆದಿತ್ಯವಾರದಿಂದ ಅವರ ಆರೋಗ್ಯ ಹದಗೆಡುತ್ತಾ ಬಂದಿತ್ತು. ಇಂದು ಅವರ ಪ್ರಮುಖ ಅಂಗಗಳ ಕಾರ್ಯಕ್ಷಮತೆ ಕ್ಷೀಣವಾಗುತ್ತಾ ಬರುತ್ತಿದ್ದಂತೆಯೇ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ತಜ್ಞ ವೈದ್ಯರ ತಂಡವು ಕರುಣಾನಿಧಿ ಅವರ ಆರೋಗ್ಯ ಚೇತರಿಕೆಗೆ ಸಂಬಂಧಿಸಿದಂತೆ ಕಳವಳವನ್ನು ವ್ಯಕ್ತಪಡಿಸಿತ್ತು. ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಕುರಿತಾದಂತೆ ಕ್ಷಣಕ್ಷಣದ ಮಾಹಿತಿಯನ್ನು ನೀಡಲಾಗುತ್ತಿತ್ತು.
ಆದರೆ ಮಂಗಳವಾರ ಸಾಯಂಕಾಲದ ಹೊತ್ತಿಗೆ ಅವರ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಡಲಾರಂಭಿಸಿತು ಮತ್ತು ಸುಮಾರು 6.15ರ ಹೊತ್ತಿಗೆ ತಮಿಳುನಾಡಿನ ರಾಜಕೀಯ ರಂಗದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ್ದ ಮತ್ತು ದ್ರಾವಿಡ ಸ್ವಾಭಿಮಾನಿ ಹೋರಾಟದ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದ ಮುತ್ತುವೇಲ್ ಕರುಣಾನಿಧಿ ಅವರು ನಿಧನರಾಗಿದ್ದಾರೆಂಬ ಸುದ್ದಿ ಬರಸಿಡಿಲಿನಂತೆ ಎರಗಿತು
ಕಲೈಗ್ನಾರ್ ಕರುಣಾನಿಧಿ .. 1924ರ ಜೂನ್ 3ರ ರಂದು ತಂಜಾವೂರು ಜಿಲ್ಲೆಯ ತಿರುಕ್ಕುವಲೈನಲ್ಲಿ ಜನನ.. ತಿರು ಮುತುವೇಳರ್ ಮತ್ತು ತಿರುಮತಿ ಅಂಜುಗಮ್ ಅಮ್ಮೈಯಾರ್ ದಂಪತಿ ಮಗನಾಗಿ ಜನಿಸಿದ ಎಂ.ಕರುಣಾನಿಧಿ ಭಾರತ ಕಂಡ ತಮಿಳುನಾಡಿನ ಅದ್ಬುತ ರಾಜಕಾರಣಿ.
ದ್ರಾವಿಡ ಮುನ್ನೇತ್ರ ಕಳಗಮ್ನ ಸಂಸ್ಥಾಪಕರಲ್ಲಿ ಒಬ್ಬರು. ಇವರು ರಾಜಕೀಯಕ್ಕೆ ಬರುವ ಮುನ್ನ ಅತ್ಯುತ್ತಮ ಕವಿ, ಬರಹಗಾರ, ಪತ್ರಿಕೆ ಮಾಲೀಕರಾಗಿದ್ದವರು. ಅಷ್ಟೇ ಅಲ್ಲ ಎಂ.ಕರುಣಾನಿಧಿ ತಮಿಳು ಚಿತ್ರೋದ್ಯಮದಲ್ಲಿ ಕಥಾ ಲೇಖಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿ ರಾಜಕೀಯದಲ್ಲಿ ಹೆಮ್ಮರವಾಗಿ ಬೆಳದು ನಿಂತವರು. ಸಿ.ಎನ್.ಅಣ್ಣಾದೊರೈ ಡಿಎಂಕೆ ಸ್ಥಾಪಕ ಅಧ್ಯಕ್ಷರು. ಆದರೆ ಅವರ ಮರಣಾನಂತರ ಇಡೀ ಡಿಎಂಕೆ ಪಕ್ಷ ಕರುಣಾನಿಧಿ ತೆಕ್ಕೆಗೆ ಬಂತು. ಹೇಗೆ ಕಾಂಗ್ರೆಸ್ ಎಂದರೆ ಇಂದಿರಾ.. ಇಂದಿರಾ ಎಂದರೆ ಇಂಡಿಯಾನೋ ಹಾಗೆಯೇ ಕರುಣಾನಿಧಿ ಎಂದರೆ ಡಿಎಂಕೆ... ಡಿಎಂಕೆ ಎಂದರೆ ಕರುಣಾನಿಧಿ ಎನ್ನುವಂತಾಯಿತು.
ಕರುಣಾನಿಧಿ ಅಂದಿನ ಜಸ್ಟಿಸ್ ಪಕ್ಷದ ಅಳಗಿರಿ ಸ್ವಾಮಿಯವರ ಭಾಷಣದಿಂದ ಪ್ರೇರಿತರಾಗಿ ತಮ್ಮ 14ನೇ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶ ಪಡೆದುಕೊಳ್ಳುತ್ತಾರೆ. 1932ರಲ್ಲಿ ಅಳಗಿರಿಸ್ವಾಮಿಯವರಿಂದ ಹೆಚ್ಚು ಪ್ರಭಾವಿತರಾಗಿ ಹಿಂದಿ ವಿರೋಧಿ ಚಳವಳಿಗಳಲ್ಲಿಯೂ ಭಾಗವಹಿಸಿದರು. ತದನಂತರ 'ತಮಿಳು ಮಾನವರ್ ಮನ್ರಮ್ ಎಂಬ ವಿದ್ಯಾಥರ್ಿ ಸಂಘವನ್ನು ಕಟ್ಟಿದರು. ಇದು ದ್ರಾವಿಡ ಚಳವಳಿಯ ಮೊದಲ ವಿದ್ಯಾಥರ್ಿ ತಂಡ. ಕರುಣಾನಿಧಿ ಸ್ವತಃ ವಿದ್ಯಾಥರ್ಿ ಸಮುದಾಯದ ಜತೆ ಇತರೆ ಸದಸ್ಯರೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ. ಕರುಣಾನಿಧಿ ತಮಿಳುನಾಡು ವಿಧಾನಸಭೆಗೆ 1957ರಲ್ಲಿ ತಿರುಚಿರಾಪಲ್ಲಿ ಜಿಲ್ಲೆಯ ಕುಳಿತಲೈ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಗೊಳ್ಳುತ್ತಾರೆ.
ಕರುಣಾನಿಧಿ ಸಿ.ಎನ್.ಅಣ್ಣಾದೊರೆ ಮೃತಪಟ್ಟ ಬಳಿಕ ಹಿಂತಿರುಗಿ ನೋಡಲೇ ಇಲ್ಲ... 1957 ರಿಂದ ಸತತವಾಗಿ ಇಲ್ಲಿಯವರೆಗೂ ಅವರು ಎಂಎಲ್ಎ... ಸೋಲಿಲ್ಲದ ಸರದಾರ... ಇನ್ನು ಐದು ಬಾರಿ ಮುಖ್ಯಮಂತ್ರಿಯಾದ ಹೆಗ್ಗಳಿಕೆ... 1969-71, 1971-76, 1989-91, 1996-2001 ಮತ್ತು 2006- 2011ರವರೆಗೂ ಸಿಎಂ ಆಗಿ ತಮಿಳುನಾಡಿನಲ್ಲಿ ಆಡಳಿತ ನಡೆಸಿದ್ದಾರೆ. 60 ವರ್ಷಗಳ ದೀರ್ಘ ಕಾಲದ ರಾಜಕೀಯ ವೃತ್ತಿ ಜೀವನದಲ್ಲಿ ಅವರು ಸ್ಪಧರ್ಿಸಿದ ಪ್ರತಿಯೊಂದು ಚುನಾವಣೆಯಲ್ಲಿ ಜಯಿಸುವ ಮೂಲಕ ದಾಖಲೆ
ಮಾಡಿದ್ದಾರೆ.
2004ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದಲ್ಲಿ ಮಿತ್ರಪಕ್ಷಗಳು ಎಲ್ಲ 39 ಸ್ಥಾನ ಗೆದ್ದು ಯುಪಿಎ ಮೈತ್ರಿಕೂಟಕ್ಕೆ ಬಲ ನೀಡಿದ ಹಿರಿಮೆ ಕರುಣಾನಿಧಿ ಅವರದ್ದು. 2009 ರಲ್ಲೂ ಡಿಎಂಕೆ ಗಣನೀಯ ಸಾಧನೆ ಮಾಡಿ ಸತತವಾಗಿ 10 ವರ್ಷ ಕೇಂದ್ರ ಸಕರ್ಾರದ ಮೇಲೆ ಹಿಡಿತ ಸಾಧಿಸಿದ ನಿಪುಣ ರಾಜಕಾರಣಿ.