ಸವಣೂರು 22: ನಗರದಲ್ಲಿ ಕೊರೊನಾ ವೈರಸ್ ಹರಡದಂತೆ ಹೋರಾಡುತ್ತಿರುವ ಸೇನಾನಿಗಳಿಗೆ ತಾಲ್ಲೂಕಿನ ಶಿಕ್ಷಕರ ಬಳಗದವರು ಊಟದ ವ್ಯವಸ್ಥೆ ಏರ್ಪಡಿಸಿ ಅಳಿಲು ಸೇವೆ ಸಲ್ಲಿಸಲಾಯಿತು.
ಅಳಿಲು ಸೇವೆ ಸಲ್ಲಿಸಿದ ಬಗ್ಗೆ ಮಾತನಾಡಿದ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಟಿ.ಮೆಳ್ಳಳ್ಳಿ ಕೋರಾನಾ ವೈರಸ್ ವಿರುದ್ಧ ಹೋರಡುತ್ತಿರುವ ದಿಶೆಯಲ್ಲಿ ಮೂರು-ನಾಲ್ಕು ವಾರಗಳ ಕಾಲ ಇಡೀ ದೇಶವೇ ಸ್ಥಬ್ದಗೊಳ್ಳುತ್ತಿದೆ.ಮಾನವ ಸಂಪರ್ಕದ ಮೂಲಕ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ದಿಗ್ಭಂಧನ ವಿಧಿಸಿರುವುದು ಅನಿವಾರ್ಯ.ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನೇಕ ನಿರ್ಬಂಧನೆಗಳನ್ನು ವಿಧಿಸಿವೆ. ಇವುಗಳ ಪಾಲನೆಗಾಗಿ ಪೋಲಿಸ್ ಇಲಾಖೆ ,ಆರೋಗ್ಯ ಇಲಾಖೆ ,ಆಶಾ ಕಾರ್ಯಕತರ್ೆಯರು , ಅಂಗನವಾಡಿ ಕಾರ್ಯಕತರ್ೆಯರು , ಪುರಸಭೆಯ ಸಿಬ್ಬಂದಿ ಹಾಗೂ ಸಫಾಯಿ ಕರ್ಮಚಾರಿಗಳು ,ತಾಲೂಕು ಪಂಚಾಯತಿ ಸಿಬ್ಬಂದಿ ಮತ್ತು ಎಲ್ಲ ಹಂತದ ಸಿಬ್ಬಂದಿಯವರು ಹಗಲಿರುಳೆನ್ನದೇ ತಮ್ಮ ವಯಕ್ತಿಕ ಆಸೆ , ಅಭಿರುಚಿ ಮತ್ತು ಆರೋಗ್ಯವನ್ನು ಗಮನಿಸದೇ ಶ್ರಮ ವಹಿಸಿ ದುಡಿಯುತ್ತರುವುದು ಪ್ರಶಂಸನೀಯ.ಇಂತಹ ನಮ್ಮ ಸೇನಾನಿಗಳಿಗೆ ಊಟದ ವ್ಯವಸ್ಥೆ ಏರ್ಪಡಿಸಿರುವುದು ನಮಗೆ ಹೆಮ್ಮೆ & ನಮ್ಮದೊಂದು ಅಳಿಲು ಸೇವೆ.ಈ ನಮ್ಮ ಸೇನಾನಿಗಳಿಗೆ ಸರಕಾರವು ಸೂಕ್ತ ಸುರಕ್ಷಾ ಸಾಮಗ್ರಿಗಳನ್ನು ನೀಡಬೇಕು , ಸಾರ್ವಜನಿಕರು ಅವರೊಂದಿಗೆ ಸಹಕರಿಸಬೇಕು,ಉಳಿದ ನೌಕರ ವರ್ಗ ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕು ಮತ್ತು ಮನೋಧೈರ್ಯ ತುಂಬಬೇಕು. ನಿಮ್ಮ ಕಾರ್ಯ ಶ್ಲ್ಯಾಘನೀಯ, ನಿಮ್ಮೊಂದಿಗೆ ನಾವಿದ್ದೇವೆಂದು ಎಂದು ನೈತಿಕ ಬೆಂಬಲ ವ್ಯಕ್ತಪಡಿಸಿದರು. ಅಳಿಲು ಸೇವೆಗೈದ ಪಿ.ಆರ್.ನವಲೆ,ಎಂ.ಎನ್.ಅಡಿವೆಪ್ಪನವರ,ಎಸ್.ಜಿ.ಕೋರಿ, ಜಿ.ಎಸ್.ಗುಂಜಳ, ಎಸ್.ಎಲ್.ಕುಲಕಣರ್ಿ ,ಆರ್.ಎಸ್.ಈಳಗೇರ,ಎಸ್.ಟಿ.ಮಹಾಪುರುಷ, ಬಿ.ಬಿ.ತಿಪ್ಪಕ್ಕನವರ, ಜಿ.ಸಿ.ಹಿರೇಮಠ ,ಸಿ.ಎಸ್.ಕರ್ಜಗಿ,ಎಫ್.ಆರ್ಹಿರೇಮಠ ,ಸಿ.ಎ.ಬಮ್ಮಕ್ಕನವರ,ಎಂ.ಕೆ.ಕಾಟೇನಹಳ್ಳಿ,ಎನ್.ಎಸ್.ಹಿರೇಮಠ ,ಬಿ.ಡಿ.ಭಜಂತ್ರಿ, ಎ .ವಿ.ಬನ್ನಿಕಲ್ಲ, ಮುಂತಾದವರು ಅಳಿಲು ಸೇವೆ ಸಲ್ಲಿಸಿದರು.