ಲಿ. ಪ್ರಭುಲಿಂಗೇಶ್ವರ ಪುಣ್ಯ ಸ್ಮರಣೋತ್ಸವ, ಜಾತ್ರಾ ಮಹೋತ್ಸವ 28ರ ವರೆಗೆ
ವಿಜಯಪುರ,19- ಅಗರಖೇಡದ ಪರಮಜ್ಯೋತಿ ನಾಡಿನ ಪರಮ ಗುರು ಶ್ರೀ ಲಿಂ. ಪ್ರಭುಲಿಂಗೇಶ್ವರ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವವು 18 ರಿಂದ ಪ್ರಾರಂಭವಾಗಿದ್ದು, 28 ರವರಗೆ ವಿಜ್ರಂಭಣೆಯಿಂದ ಜರುಗಲಿದೆ ಎಂದು ಪ್ರಭುಲಿಂಗೇಶ್ವರ ಸಂಸ್ಥಾನ ವಿರಕ್ತಮಠದ ಅಭಿನವ ಪ್ರಭುಲಿಂಗೇಶ್ವರ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿನವ ಪ್ರಭುಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಲಿಂ. ಪ್ರಭುಲಿಂಗೇಶ್ವರ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಪ್ರತಿದಿನ ಸಾಯಂಕಾಲ ಸೊನ್ನಲಗಿ ಸಿದ್ದರಾಮೇಶ್ವರ ಪುರಾಣವನ್ನು ಅಫಜಲಪೂರ ತಾಲೂಕಿನ ನೀಲೂರಿನ ಶ್ರೀ ರಾಚೋಟೆಶ್ವರ ಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು ನಡೆಸಿಕೊಡಲಿದ್ದಾರೆ. ಹಾರ್ಮೋನಿಯಂ ಸೇವೆಯನ್ನು ಮಲ್ಲಿಕಾರ್ಜುನ ಗವಾಯಿಗಳು ಹಾಗೂ ತಬಲಾ ಸಾಥಿಯನ್ನು ಕಾಚಾಪುರ ಕಲ್ಲಯ್ಯಸ್ವಾಮಿಗಳು ನಡೆಸಿಕೊಡಲಿದ್ದಾರೆ.
26 ರಂದು ಆಲಮೇಲದ ಚಂದ್ರಶೇಖರ ಶಿವಾಚಾರ್ಯರ ಅಮೃತ ಹಸ್ತದಿಂದ ಅಯ್ಯಾಚಾರ ಲಿಂಗದಿಕ್ಷೆ ನಡೆಯಲಿದೆ. 27 ರಂದು ಪರಮ ಗುರು ಲಿಂ. ಪ್ರಭುಲಿಂಗೇಶ್ವರ ಕತೃಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮದಲ್ಲಿ ತಡವಲಗಾ, ಯಡ್ರಾಮಿ, ಆಲಮೇಲ ಶ್ರೀಗಳು ಹಾಗೂ ರಾಜಕೀಯ ಗಣ್ಯರು, ಗ್ರಾ.ಪಂ. ಸದಸ್ಯರು ಅಧಿಕಾರಿಗಳು ಗ್ರಾಮದ ಮುಖಂಡರು ಭಾಗವಹಿಸಲಿದ್ದಾರೆ.
28 ರಂದು ಖೇಡಗಿಯ ವಿರಕ್ತಮಠದ ಶಿವಬಸವರಾಜೇಂದ್ರ ಶ್ರೀಗಳ ಪಾವನ ಸಾನಿದ್ಯದಲ್ಲಿ ಮುತ್ತ್ಯೆದೆಯರ ಉಡಿ ತುಂಬುವ ಹಾಗೂ ಸಮಾರೋಪ ಸಮಾರಂಭದ ಕಾರ್ಯಕ್ರಮಗಳು ಜರುಗಲಿವೆ. ಲಚ್ಯಾಣದ ಸಂಜೀವಕುಮಾರ ಅಂಕಲಗಿ ದಂಪತಿಗಳಿಂದ ಮುತ್ತ್ಯೆದೆಯರ ಉಡಿ ತುಂಬುವ ಕಾರ್ಯಕ್ರಮ, ಪ್ರತಿನಿತ್ಯ ಭಕ್ತರಿಂದ ಅನ್ನದಾಸೋಹ ನಡೆಯಲಿದೆ.
ಭಕ್ತಾಧಿಗಳು ಈ ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಣ್ಯ ಸ್ಮರಣೋತ್ಸವ ಹಾಗೂ ಪುರಾಣವು ಯಶಸ್ವಿಗೊಳಿಸಬೇಕೆಂದು ಪ್ರಭುಲಿಂಗೇಶ್ವರ ಸಂಸ್ಥಾನ ವಿರಕ್ತಮಠವು ಪ್ರಕಟಣೆಯಲ್ಲಿ ತಿಳಿಸಿದೆ.