ತಾಳಿಕೋಟಿ ಸಹಕಾರಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ
ತಾಳಿಕೋಟಿ 15: ಪಟ್ಟಣದ ಪ್ರತಿಷ್ಠಿತ ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್ ನ 13 ನಿರ್ದೇಶಕರ ಸ್ಥಾನಗಳಿಗೆ ಜನವರಿ 19ರಂದು ನಡೆಯಲಿರುವ ಚುನಾವಣೆಗೆ ಓಲ್ಡ್ ಈಸ್ ಗೋಲ್ಡ್ ಪೆನಲ್ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಿದರು.
ಮಂಗಳವಾರ ಪಟ್ಟಣದ ಸಗರಪೇಟ, ಉಪ್ಪಾರ ಓಣಿ ಹಾಗೂ ನಾಗರಕಲ್ ಬಡಾವಣೆಯಲ್ಲಿ ಪೆನಲ್ ಅಭ್ಯರ್ಥಿಗಳು ತಮ್ಮ ಅಪಾರ ಬೆಂಬಲಿಗರೊಂದಿಗೆ ಸೇರಿ ಮತದಾರ ಸದಸ್ಯರ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಪೆನಲ್ ಅಭ್ಯರ್ಥಿ ಮುರಿಗೆಪ್ಪ ಸರಶೆಟ್ಟಿ ಅವರು ನಾವು ಕಳೆದ ಕೆಲವು ಅವಧಿಗಳಿಂದ ಈ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿದ್ದು ಇದರ ಅಭಿವೃದ್ಧಿಗಾಗಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇವೆ. ಕೆಲವರು ಅಪಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಇದಕ್ಕೆ ಯಾವುದೇ ಆಧಾರವಿಲ್ಲ, ಬ್ಯಾಂಕನ್ನು ಇನ್ನಷ್ಟು ಅಭಿವೃದ್ಧಿಯಡೆಗೆ ತೆಗೆದುಕೊಂಡು ಹೋಗುಲು ನಾವು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಮತದಾರ ಬಾಂಧವರು ಮತ್ತೇ ನಮ್ಮ ಪೆನಲ್ ನ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿ ಸೇವೆಯನ್ನು ಮಾಡುವ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಈ ವೇಳೆ ಅಭ್ಯರ್ಥಿಗಳಾದ ದತ್ತಾತ್ರೇಯ ಹೆಬಸೂರ,ಕಾಶಿನಾಥ ಸಜ್ಜನ, ಎಂ.ಎಸ್.ಸರಶಟ್ಟಿ, ಬಾಬು ಹಜೇರಿ, ನಾಗಪ್ಪ ಚಿನಗುಡಿ, ಚಿಂತಪ್ಪಗೌಡ ಯಾಳಗಿ, ಬಿಳೇಭಾವಿ ಈಶ್ವರ್ಪ, ದ್ಯಾಮನಗೌಡ ಪಾಟೀಲ, ಸುರೇಶ ಪಾಟೀಲ, ರಾಮಣ್ಣ ಕಟ್ಟಿಮನಿ, ಸಂಜೀವಪ್ಪ ಬರದೇನಾಳ, ಗಿರಿಜಾಬಾಯಿ ಕೊಡಗನೂರ, ಶೈಲಾ ಬಡದಾಳಿ ಪುರಸಭೆ ಸದಸ್ಯ ವಾಸು ಹೆಬಸೂರ, ರಾಜು ಸಜ್ಜನ, ಪ್ರಭು ಬಿಳೇಭಾವಿ, ಈರಣ್ಣ ಸಜ್ಜನ, ಶಿವಣ್ಣ ಬಬಲೇಶ್ವರ, ಶ್ರೀಶೈಲ್ ಸಜ್ಜನ, ಬಡಾವಣೆ ನಿವಾಸಿಗಳಾದ ಅಶೋಕ ಜಾಲವಾದಿ, ಈರಯ್ಯ ಹಿರೇಮಠ, ಮಲ್ಲು ಮೇಟಿ, ಅಶೋಕ ಚಿನಗುಡಿ, ಅಮರೇಶ ಗೋನಾಳ, ರಾಜಶೇಖರ ಬಬಲೇಶ್ವರ, ಸುರೇಶ ಸರೂರ,ರಮೇಶ ಬಿಳೇಭಾವಿ ಹಾಗೂ ಬೆಂಬಲಿಗರು ಇದ್ದರು.