ಆಟೋಮೋಟಿವ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು

ಲೋಕದರ್ಶನ ವರದಿ

ಬೆಳಗಾವಿ, 3: ವಿದ್ಯುನ್ಮಾನ ತಂತ್ರಜ್ಞಾನವನ್ನು ಒಳಗೊಂಡ ವಾಹನ ಉತ್ಪಾದನಾ ಕ್ಷೇತ್ರದಲ್ಲಿನ ಬೆಳವಣಿಗೆಗಳು ಆಟೋಮೋಟಿವ್  ಕ್ಷೇತ್ರವನ್ನು ಹುಟ್ಟುಹಾಕಿದ್ದು ಕಳೆದ ಐದಾರು ವರ್ಷಗಳಲ್ಲಿ ವಾಹನ ಉತ್ಪಾದನಾ ಕ್ಷೇತ್ರ ಗಮನಾರ್ಹ ಬದಲಾವಣೆಯನ್ನು ಕಂಡಿದೆ ಹಾಗೂ ಆಟೋಮೋಟಿವ್ ಎಲೆಕ್ಟ್ರಾನಿಕ್ಸ್ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗವಕಾಶಗಳನ್ನು ತೆರೆದಿಟ್ಟಿದೆ ಎಂದು ಬೆಂಗಳೂರಿನ ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯ, ಅಡ್ವಾನ್ಸಡ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ಅಲ್ಲಾಬಕ್ಷ ನಾಯ್ಕೋಡಿ ಅಭಿಪ್ರಾಯಪಟ್ಟರು. ಅವರು ಬೆಳಗಾವಿಯ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಅಭಿಯಾಂತ್ರಿಕ  ವಿಭಾಗ "ಆಟೋಮೋಟಿವ್ ಎಲೆಕ್ಟ್ರಾನಿಕ್ಸ್ ಹಾಗೂ ಈ - ಮೊಬಿಲಿಟಿ ಕ್ಷೇತ್ರದಲ್ಲಿನ ಅವಕಾಶಗಳು" ಎಂಬ ವಿಷಯದ ಮೇಲೆ ಆಯೋಜಿಸಿದ್ದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತಿದ್ದರು. 

ಜನರ ಬೇಡಿಕೆ ಹಾಗೂ ಈ ಕ್ಷೇತ್ರದಲ್ಲಿನ ಜಾಗತಿಕ ಸ್ಪಧರ್ೆ, ವಾಹನ ಉತ್ಪಾದನಾ ಕ್ಷೇತ್ರ ಕೇವಲ ಯಂತ್ರಕ್ಕೆ ಸಂಬಂಧಿಸಿರದೆ ವಿದ್ಯುನ್ಮಾನ ಮತ್ತು ಗಣಕ ವಿಜ್ಞಾನದ ಅಂಶಗಳನ್ನು ಒಳಗೊಂಡ ಆಟೋಮೋಟಿವ್ ಕ್ಷೇತ್ರವಾಗಿದೆ. ಕೃತಕ ಬುದ್ಧಿಮತ್ತೆ ಹಾಗೂ ವಿದ್ಯುನ್ಮಾನ ಕ್ಷೇತ್ರಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳು ವಾಹನ ಉತ್ಪಾದನಾ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲು ಕಾರಣ ಎಂದು ಹೇಳಿದರು. "ವಿದ್ಯುತ್ ಚಾಲಿತ ವಾಹನಗಳ ಅವಶ್ಯಕತೆ" ಎಂಬ ವಿಷಯದ ಬಗ್ಗೆ ಮಾತನಾಡುತ್ತ ಇವತ್ತಿನ ವಿದ್ಯಾಥರ್ಿಗಳು ಬ್ಯಾಟರಿ ಬಾಳ್ವಿಕೆ, ಸುರಕ್ಷತೆ ಹಾಗೂ ದಕ್ಷತೆ ಬಗ್ಗೆ ಸಂಶೋಧನೆ ಕೈಗೊಳ್ಳಬೇಕು ಎಂದು ತಿಳಿಸಿದರು. ಇವತ್ತಿನ ಸಕರ್ಾರಗಳು ದೀಘರ್ಾವಧಿಯ  ಪರಿಸರ ಸ್ನೇಹಿ / ಹಸಿರು-ವಾಹನ ತಯಾರಿಕೆಗೆ ಅನುದಾನ ಹೆಚ್ಚಿಗೆ ನೀಡಿ ಪ್ರೋತ್ಸಾಹ ನೀಡಿದಂತೆ ಉತ್ಪಾದನಾ ವಲಯ ಬೆಳೆದು ಆಟೋಮೋಟಿವ್  ಉದ್ಯಮದ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚು ಪರಿಣತ ತಂತ್ರಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ ಆದ್ದರಿಂದ ಇವತ್ತಿನ ವಿದ್ಯಾಥರ್ಿಗಳು ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚು ಪರಿಣಿತಿಯನ್ನು ಪಡೆದು ಅಗತ್ಯವಿರುವ ಕೌಶಲ್ಯದೊಂದಿಗೆ  ಆಟೋಮೋಟಿವ್ ಕ್ಷೇತ್ರದಲ್ಲಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಕೊಳ್ಳಬಹುದು ಎಂದು ಅವರು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಐ ಐ ಟಿ ಮದ್ರಾಸ್ ದಲ್ಲಿ ಸಂಶೋಧನಾ ವಿದ್ಯಾಥರ್ಿಯಾಗಿರುವ  ಸುಶಾಂತ್ ಮುತಗೇಕರ್, ವಿದ್ಯುತ್ ಚಾಲಿತ ವಾಹನಗಳ ಕ್ರಾಂತಿಯಲ್ಲಿ ಇಂಜಿನಿಯರ್ ಪಾತ್ರ ಎಂಬ ವಿಷಯದ ಮೇಲೆ ಮಾತನಾಡಿದರು. ಹಾಗೂ ಇನ್ನೋರ್ವ ಅತಿಥಿ ಉಪನ್ಯಾಸಕ ಬೆಂಗಳೂರಿನ ರಾಬಟರ್್ ಬಾಷ್ ಕಂಪನಿಯ ಪ್ರಾಜೆಕ್ಟ್ ವಿಭಾಗದ ಮುಖ್ಯಸ್ಥ   ವೀರೇಶ್ ಬಿರಾದಾರ  'ಆಟೋ ಟೆಕ್ ಟ್ರಾನಿಕ್ಸ್' ಎಂಬ ವಿಷಯದ ಮೇಲೆ  ಮಾತನಾಡಿ ವಿದ್ಯಾಥರ್ಿಗಳೊಂದಿಗೆ ಸಂವಾದ ನಡೆಸಿದರು.

ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ ಅಧ್ಯಕ್ಷೀಯ ಭಾಷಣ ಮಾಡಿದರು, ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಸಂತೋಷ ಸರಾಫ್ ಸ್ವಾಗತಿಸಿದರು, ಪ್ರೊ. ಎಸ. ಪಿ. ದೇಶಪಾಂಡೆ ವಂದಿಸಿದರು. ವಿಚಾರ ಗೋಷ್ಠಿ ಸಂಯೋಜಕರಾದ ಪ್ರೊ. ಜಿ. ಪಿ. ಕದಂ ಮತ್ತು ಡಾ. ಪಿ. ಪಿ. ಪಟವರ್ಧನ್, ಸಿಬ್ಬಂದಿ ವರ್ಗ, ವಿದ್ಯಾಥರ್ಿಗಳು ಹಾಜರಿದ್ದರು.