ಲೋಕದರ್ಶನ ವರದಿ
ಕುಮಟಾ 7: ಪುರಾಣ ಪ್ರಸಿದ್ಧವಾದ ತಾಲೂಕಿನ ಚಂದಾವರದ ಸೀಮೆಯ ಶ್ರೀ ಹನುಮಂತ ದೇವರ ಕಾತರ್ಿಕ ದೀಪೋತ್ಸವ, ವನ ಭೋಜನ, ಪಲ್ಲಕ್ಕಿ ವನಪ್ರವೇಶ ಹಾಗೂ ಲಾಲಕಿ ಮೆರವಣಿಗೆ ಕಾರ್ಯಕ್ರಮ ಸಾವಿರಾರು ಭಕ್ತರ ನಡುವೆ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆಯಿಂದ ಶ್ರೀ ದೇವರ ಸನ್ನಿಧಿಯಲ್ಲಿ ವಿವಿಧ ಧಾಮರ್ಿಕ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ಸಂಪ್ರದಾಯದಂತೆ ದೇವರ ಪಲ್ಲಕಿಯು ಸಮೀಪದ ಚಂದ್ರಪ್ರಭಾ ನದಿ ತೀರಕ್ಕೆ ತೆರಳಿ, ನಂತರ ಶ್ರೀ ಹನುಮಂತ ದೇವರನ್ನು ವನಭೋಜನ ಮಂಟಪದಲ್ಲಿ ಪುಷ್ಪಾಲಂಕಾರದಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರತ್ಯೇಕವಾಗಿ ಭಕ್ತಾದಿಗಳಿಗಾಗಿ ವಿಶೇಷ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಹಣ್ಣು, ಕಾಯಿ, ಬಾಳೆಗೊನೆ ಸೇವೆ ಹಾಗೂ ವಿವಿಧ ಸೇವೆ ಸಲ್ಲಿಸಿದರು. ನಂತರ ನಡೆದ ವನಭೋಜನ ಕಾರ್ಯಕ್ರಮದಲ್ಲಿ ಹಳ್ಳಿ-ಹಳ್ಳಿಗಳಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ರಾತ್ರಿ 9 ಗಂಟೆಯಿಂದ ನಡೆದ ಲಾಲಕಿ ಮೆರವಣಿಗೆ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಹಣತೆ ಬೆಳಗಿ ದೇವರ ದರ್ಶನ ಪಡೆದರು.
ಕುಮಟಾ ತಾಲೂಕಿನ ಕೂಜಳ್ಳಿಯ ಮಹೇಶ ಸುರೇಶ ಗುನಗಾ ಅವರು ಲಕ್ಷದೀಪೋತ್ಸವದ ಪ್ರಯುಕ್ತ ಚಂದಾವರದ ನಾಕಾ ವೃತ್ತದಲ್ಲಿ ಥರ್ಮಕಾಲ್ನಿಂದ ಸಿದ್ಧಪಡಿಸಿದ ಶ್ರೀ ಆಂಜನೇಯ ಮೂತರ್ಿಯ ಕಲಾಕೃತಿ ಸಾವಿರಾರು ಭಕ್ತರ ಗಮನ ಸೆಳೆಯಿತು. ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಶ್ರೀ ಮಾರುತಿ ಮಿತ್ರ ಮಂಡಳಿ ಚಂದಾವರ, ಜೈ ಹನುಮಾನ ಮಿತ್ರ ಮಂಡಳಿ ವಡೆಗೇರಿ ಹಾಗೂ ಚಂದಾವರ ಸೀಮೆಯ ಸಮಸ್ತ ನಾಗರಿಕರ ಹಾಗೂ ಆಡಳಿತ ಮಂಡಳಿಯವರ ಆಶ್ರಯದಲ್ಲಿ ನಡೆಯಿತು.
ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಚಂದಾವರ ನಾಕಾದಿಂದ ದೇವಸ್ಥಾನವರೆಗೆ ಪೋಲಿಸ್ ಬಿಗಿ ಬದ್ರತೆಯನ್ನು ಒದಗಿಸಲಾಗಿದ್ದು, ಎಡಿಶನ್ ಎಸ್ಪಿ, ಎಎಸ್ಪಿ ಶಿರಸಿ, ಭಟ್ಕಳ ಡಿವೈಎಸ್ಪಿ, 6 ಸಿಪಿಐ, 10 ಪಿಎಸ್ಐ ಸೇರಿದಂತೆ 300 ಸಿಬ್ಬಂದಿಗಳು ಭದ್ರತೆಗಾಗಿ ನಿಯೋಜಿಸಲಾಗಿತ್ತು.