ಯಮಕನಮರಡಿಯಲ್ಲಿ ವಿಜೃಂಭಣೆಯಿಂದ ಭಗವಾನ್ ಮಹಾವೀರ ಜಯಂತಿ ಆಚರಣೆ
Lord Mahavir Jayanti celebrated with great pomp at Yamakanamardhi
ಲೋಕದರ್ಶನ ವರದಿ
ಯಮಕನಮರಡಿ 31 : ಸ್ಥಳೀಯ ಸಾವಿರದ ಎಂಟು ಪರಿಶ್ವನಾಥ ದಿಗಂಬರ್ ಜೈನ ಮಂದಿರದಲ್ಲಿ ದಿನಾಂಕ 30 ರಂದು ಭಗವಾನ್ ಮಹಾವೀರರ 2024ನೇ ಜಯಂತಿಯನ್ನು ಸ್ಥಳೀಯ ಎಲ್ಲಾ ಜೈನ ಕುಲಬಾಂಧವರು ಭಕ್ತಿ ಪೂರ್ವಕವಾಗಿ ಆಚರಿಸಿದರು ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಕುಂಬೋತ್ಸವ ಆಚರಿಸಲಾಯಿತು ಮೆರವಣಿಗೆಯಲ್ಲಿ ಅಪಾರ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದು ಅಹಿಂಸಾ ಪರಮೋಧರ್ಮ ಘೋಷಣೆ ಕೂಗುತ್ತಾ ಗ್ರಾಮದ ಜನರಲ್ಲಿ ಭಕ್ತಿಭಾವ ಮೂಡಿಸುವಲ್ಲಿ ಯಶಸ್ವಿಯಾದರು ಮುಂಜಾನೆ ಶ್ರೀಗಂಧ ಮಸ್ತಾಭಿಷೇಕ ಆಯೋಜಿಸಲಾಗಿತ್ತು ಮೆರವಣಿಗೆ ವೇಳೆಯಲ್ಲಿ ಯಾವುದೇ ತರದ ಅಹಿತರ ಘಟನೆಗಳು ನಡೆಯದಂತೆ ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿಗಳು ಉಪಸ್ಥಿತರಿದ್ದು ಎಲ್ಲ ಕಾರ್ಯಕ್ರಮಗಳು ಶಾಂತಿ ಸಂಕೇತದಲ್ಲಿ ಜರಗುವಂತೆ ಶಿಸ್ತು ಕ್ರಮ ಕೈಗೊಂಡು ಮೆರವಣಿಗೆ ಯಶಸ್ವಿ ಗೊಳಿಸಿದರು ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಗೆ ಸದಸ್ಯರಾದ ದೇವೇಗೌಡ ಮ ಪಾಟೀಲ್ ಅಶೋಕ್ ಚಿನ್ನಪ್ ಸಮಯ ರಾಮಪ್ಪ ಮಲಾಜಿ ಅಶೋಕ್ ಮಲಾಜಿ ರವೀಂದ್ರ ಪಾಟೀಲ್ ಪಾರಿಶ್ ಯಾದವಾಡಿ ಮಹಾವೀರ ನಾಸಿಪುಡಿ ರವೀ ರವೀಂದ್ರ ರಣದೇವಿ ಪದ್ಮರಾಜ್ ಕಾ ಮಗದುಮ್ ಶ್ಯಾಮ್ ಮಲಾಜಿ ಅಪ್ಪಾಸಾಬ ಜಿ ಮಗದುಮ್ ರಾಜು ಸಾತಗೌಡ ಮಲಾಜಿ ರಾಜೇಂದ್ರ ಮಲಾಜಿ ನೇಮೀನಾಥ್ ಸಮಯ ವಿದ್ಯಾನಂದ ಭೂ ಯಾದವಾಡಿ ಮಹಾವೀರ ನಾಸೀ ಪುಡಿ ಮಹಾವೀರ ಪಾಟೀಲ್ ಸಂಜು ಹಟ್ಟಿ ಕಾಡಪ್ಪ ಜಗಳ ಹಾಗೂ ಪದ್ಮಾವತಿ ಮಹಿಳಾ ಮಂಡಲದ ಶ್ರಾವಕಿಯರು ಉಪಸ್ಥಿತರಿದ್ದರು ಸರ್ವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 