ಶ್ರೀ ಹನುಮಂತನು ಸಾಟಿಯಿಲ್ಲದ ದೈವಿಕ ಶಕ್ತಿ: ಸುರೇಶ ಯಾದವ
Lord Hanuman is an unparalleled divine power: Suresh Yadav
ರಾಮತೀರ್ಥ ನಗರ ರಹವಾಸಿಗಳಿಂದ ಹನುಮಾನ ಜಯಂತಿ ಪ್ರಯುಕ್ತ ಮುತ್ತೈದೆಯರಿಂದ ತೋಟಿಲೋತ್ಸವ ಮೆರವಣಿಗೆ
ಬೆಳಗಾವಿ 02: ರಾಮತೀರ್ಥ ನಗರ ರಹವಾಸಿಗಳಿಂದ ಕಣಬರ್ಗಿಯ ಕೆರೆ ರಸ್ತೆಯ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ಹನುಮಾನ ಜಯಂತಿಯನ್ನು ಸಂಭ್ರಮ ದಿಂದ ಆಚರಿಸಲಾಯಿತು.
ಬಳಿಕ, ಹನುಮಾನ ಜಯಂತಿ ಪ್ರಯುಕ್ತ ಮುತೈದೆಯರಿಂದ ತೋಟಿಲೋತ್ಸವವನ್ನು, ಕುಂಭ ಮೇಳ ಮೂಲಕ ಶ್ರೀ ಗಣೇಶ ಮಂದಿರ ಸರ್ಕಲದಿಂದ ಮೆರವಣಿಗೆ ನಡೆಸಲಾಯಿತು.
ಮಂದಿರದಲ್ಲಿ ಗಣ ಹೋಮ , ನವಗ್ರಹ ಹೋಮ ಮಾಡಲಾಯಿತು.ಸುರೇಶ ಯಾದವ ಫೌಂಡೇಶನ್ ಅಧ್ಯಕ್ಷರಾದ ಸುರೇಶ ಯಾದವ ಅವರು ಮಾತನಾಡಿ, ಹನುಮಂತನು ಸಾಟಿಯಿಲ್ಲದ ದೈಹಿಕ ಶಕ್ತಿ, ಮಾನಸಿಕ ಧೈರ್ಯ, ಭಕ್ತಿ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿದ್ದು, ಆತ ನಮ್ಮ ಆಂತರಿಕ ಶಕ್ತಿಯಾಗಿದ್ದಾನೆ. ರಾಮಭಕ್ತನಾಗಿ ಆತ ಆತ್ಮವಿಶ್ವಾಸ, ಶಿಸ್ತು ಮತ್ತು ನಿಸ್ವಾರ್ಥ ಸೇವಾ ಮನೋಭಾವವನ್ನು ಕಲಿಸುತ್ತಾನೆ. ಹನುಮಾನ್ ಚಾಲೀಸಾ ಪಠಣೆಯು ಭಯವನ್ನು ಹೋಗಲಾಡಿಸಿ, ಜೀವನದ ಕಷ್ಟಗಳನ್ನು ಪರಿಹರಿಸಿ, ನೆಮ್ಮದಿ ಮತ್ತು ದೈವಿಕ ರಕ್ಷಣೆಯನ್ನು ನೀಡುತ್ತದೆ. ಅವನ ತಾಯಿ ಅಂಜನಾ ಶಾಪದಿಂದಾಗಿ ಭೂಮಿಯ ಮೇಲೆ ಜನಿಸಿದ ಅಪ್ಸರೆ ಮಗನಿಗೆ ಜನ್ಮ ನೀಡಿದ ಮೇಲೆ ಆಕೆಗೆ ಈ ಶಾಪ ವಿಮೋಚಣೆಯಾಯಿತು. ವಾಲ್ಮೀಕಿ ರಾಮಾಯಣವು ಅವನ ತಂದೆ ಕೇಸರಿಯು ಇಂದಿನ ಕರ್ನಾಟಕದ ವಿಜಯನಗರದ ಜಿಲ್ಲೆಯ ಹಂಪಿ ಬಳಿಯ ಕಿಷಿಠಾ ಸಾಮ್ರಾಜ್ಯದ ಸಮೀಪದಲ್ಲಿರುವ ಸುಮೆರು ಎಂಬ ಪದೇಶದ ರಾಜ ಬ್ರಹಾಂಸ್ಮತಿಯ ಎಂದು ಹೇಳುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಪ್ಪಯ್ಯ ಕೊಲ್ಕರ, ಗುರುಪುತ್ರ್ಪ ತೋರಗಲ್, ಅರ್ಜುನ ಊರಬೀನಟ್ಟಿ, ಪವಿತ್ರಾ ಪಾಟಿಲ, ಕೆಂಪಣ್ಣ ಜಿನರಾಳ, ಅಭಿಷೇಕ ಅಗಸಗಿ, ಶಿವಲಿಂಗಪ್ಪ ಕಬಾಡಗಿ, ಮಾರುತಿ ಭಾಸ್ಕರ, ರಮೇಶ ಮಗದುಮ್ಮ, ಅನೀಲ ಕಲಮನ್ನಿ, ನಾರಾಯಣ ಕುಮಟೇಕರ್, ರಾಜು ಪಾಟೀಲ ಹಾಗೂ ಸಂತೋಷ ಮೆರೆಕಾರ ,ರಾಚಯ್ಯ ಮಠಪತಿ ಬಾಳಪ್ಪ ಹಂಜಿ, ಅಕ್ಷಯ ಅಂಬಡಗಟ್ಟಿ ಉಪಸ್ಥಿತರಿದ್ದರು. ರಾಮತೀರ್ಥ ನಗರ ಹಾಗೂ ಇತರರು ಭಕ್ತಾಧಿಗಳು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 