ಢಾಕಾ, ಡಿ 18 ಬಾಂಗ್ಲಾದೇಶ
ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬಳಿಕ ಚಾರ್ಲ್ ಲಾಂಗ್‌ವೆಡ್ತ್
ಅವರು ದಕ್ಷಿಣ ಆಫ್ರಿಕಾ ತಂಡದೊಂದಿಗೆ ಕಾರ್ಯನಿರ್ವಹಿಸಲು ಸಜ್ಜಾಗಿದ್ದಾರೆ.ದಕ್ಷಿಣ ಆಫ್ರಿಕಾ ತಂಡದಲ್ಲಿ
ಕಾರ್ಯನಿರ್ವಹಿಸಲು ಹೊಸ ಆಫರ್ ಬಂದಿರುವ ಹಿನ್ನೆಲೆಯಲ್ಲಿ ತಂಡದ ಬೌಲಿಂಗ್ ಕೋಚ್ ಸ್ಥಾನಕ್ಕೆ ರಾಜೀನಾಮೆ
ಸಲ್ಲಿಸುದಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಅವರು ಇಮೈಲ್ ಮಾಡಿದ್ದರು. ಇದನ್ನು ನಾವು ಪರಿಶೀಲಿಸಿದ
ಬಳಿಕ ಅವರ ರಾಜೀನಾಮೆಯನ್ನು ಅಂಗೀರಿಸಿದ್ದೇವೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಕ್ರಿಕೆಟ್
ಕಾರ್ಯಾಚರಣೆ ಸಮಿತಿ ಅಧ್ಯಕ್ಷ ಅಕ್ರಮ್ ಖಾನ್ ಸ್ಪಷ್ಟಪಡಿಸಿದ್ದಾರೆ."ದಕ್ಷಿಣ ಆಫ್ರಿಕಾ ಪುರುಷರ
ಹಿರಿಯ ತಂಡದಲ್ಲಿ ಕಾರ್ಯ ನಿರ್ವಹಿಸುವಂತೆ ಹೊಸ ಆಫರ್ ಬಂದಿದೆ. ಹಾಗಾಗಿ, ಬಿಸಿಬಿ ದಯಮಾಡಿ ನನ್ನ ರಾಜೀನಾಮೆ
ಪತ್ರವನ್ನು ಅಗೀಕರಿಸಿ ಎಂದು ಲಾಂಗ್‌ವೆಡ್ತ್ ಮನವಿ ಮಾಡಿದ್ದರು. ಹಾಗಾಗಿ, ನಾವು ಅವರನ್ನು ಬಿಡುಗಡೆ
ಮಾಡಲು ನಿರ್ಧರಿಸಿದೆವು," ಎಂದು ಅಕ್ರಮ್ ಖಾನ್ ತಿಳಿಸಿದ್ದಾರೆ. ಕಳೆದ ಜುಲೈ ತಿಂಗಳಲ್ಲಿ
ವೆಸ್ಟ್ ಇಂಡೀಸ್‌ನ ಕೌರ್ಟಿನಿ ವಾಲ್ಷ್ ಅವರ ಸ್ಥಾನಕ್ಕೆ ಬೌಲಿಂಗ್ ಕೋಚ್ ಆಗಿ ಲಾಂಗ್‌ವೆಡ್ತ್ ಅವರನ್ನು
ಬಿಸಿಬಿ ನೇಮಕ ಮಾಡಿತ್ತು. ಆದರೆ, ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಆಗಿ ಮಾರ್ಕ್ ಬೌಷರ್ ನೇಮಕವಾದ
ಬೆನ್ನಲ್ಲೆ ಹರಿಣಗಳ ತಂಡದ ಸಹಾಯಕ ಸಿಬ್ಬಂದಿಯನ್ನು ಹೊಸದಾಗಿ ನೇಮಿಸುವ ಪ್ರಕ್ರಿಯೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಲಾಂಗ್‌ವೆಡ್ತ್ ಅವರನ್ನುನೇಮಿಸಲಾಗಿದೆ.ಬಾಂಗ್ಲಾದೇಶ ಜನವರಿಯಲ್ಲಿ ಪಾಕಿಸ್ತಾನ
ಪ್ರವಾಸ ಕೈಗೊಳ್ಳಲಿದೆ. ಇದೀಗ, ಲಾಂಗ್‌ವೆಡ್ತ್ ಅವರ ಸ್ಥಾನ ತುಂಬಲು ಬಿಸಿಬಿಗೆ ಕೇವಲ ಒಂದು ತಿಂಗಳು
ಅವಕಾಶವಿದೆ.