ಬಾಣಂತಿಯರ ಸರಣಿ ಸಾವನ್ನು ಖಂಡಿಸಿ ಲೋಕಾಯುಕ್ತ ತನಿಖೆಗೆ ಒತ್ತಾಯ

Lokayukta condemns the serial maternal deaths and demands an investigation

ಕಂಪ್ಲಿ 06: ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದೆ. ಜಿಲ್ಲೆಯ ಬಿಮ್ಸ್‌ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿನ ಬಾಣಂತಿಯರ ಸರಣಿ ಸಾವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ಬಳ್ಳಾರಿ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಒತ್ತಾಯಿಸಿದ್ದಾರೆ.ಕಂಪ್ಲಿ ತಾಲೂಕಿನ ಎಮ್ಮಿಗನೂರ ಗ್ರಾಮದ ಬ್ರಾಹ್ಮಣರ ಕ್ಯಾಂಪಿನ ನಿವಾಸಿ ಸಾವನ್ನಪ್ಪಿದ ಬಾಣಂತಿ ರೋಜಾ ಮನೆಗೆ ಜೆಡಿಎಸ್ ಪಕ್ಷದ ವರಿಷ್ಠರ ಆದೇಶದ ಮೇರೆಗೆ ಜೆಡಿಎಸ್ ನಿಯೋಗ ಭೇಟಿ ಮಾಡಿ 35000ಸಾವಿರ ರೂ ನಗದು ಪರಿಹಾರ ನೀಡಿ ಸಾಂತ್ವನ ಹೇಳಿ ಬಾಣಂತಿ ರೋಜಾ ಕುಟುಂಬದವರ ಯೋಗ ಕ್ಷೇಮ ವಿಚಾರಿಸಿ,ನಂತರ ಮಾಧ್ಯಮದವರೊಂದಿಗೆ   ಜೆಡಿಎಸ್ ಪಕ್ಷದ ಬಳ್ಳಾರಿ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಮಾತನಾಡಿ ಬಳ್ಳಾರಿ ಜಿಲ್ಲಾಸ್ಪತ್ರೆ ಅನ್ನೊದು ಸಾವಿನ ಮನೆಯಂತಾಗಿದೆ. 

ಇಲ್ಲಿ ಬಡವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಸಾವಿನ ಪ್ರಮಾಣ ದಿನೇ ದಿನೇ ಏರಿಕೆ ಆದರೂ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ದಿನೇಶ ಗುಂಡೂರಾವ್  ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ ಖಾನ್ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸವು ಮಾಡಿಲ್ಲ ಇವರಿಗೆಲ್ಲ ಅಧಿಕಾರದ ಮಧ ಏರಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲೆ ಕುಳಿತುಕೊಂಡು ಆಟ ವಾಡುತ್ತಿದ್ದಾರೆ ಜಮೀರ್ ಆಹ್ಮದ್ ಖಾನ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಏನೂ ಪ್ರಯೋಜನವಿಲ್ಲ. ಆ ಮನುಷ್ಯ ಬಾಣಂತಿಯರ ಸಾವುಗಳು ಸಂಭವಿಸಿದರು ಇಲ್ಲಿಯ ತನಕ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಅವರಿಗೆ ಬಡವರ ಆರೋಗ್ಯ ಮುಖ್ಯವಲ್ಲ, ಬಳ್ಳಾರಿಗೆ ಭೇಟಿ ನೀಡಿ ಆಸ್ಪತ್ರೆಗೆ ಬಂದು ಬಾಣಂತಿಯರ ಯೋಗಕ್ಷೇಮ ವಿಚಾರಿಸುವಷ್ಟು ಸಮಯವಿಲ್ಲ ಎಂದು ಸಚಿವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಮೃತ ಬಾಣಂತಿಯರ ಕುಟುಂಬಕ್ಕೆ ಸರಕಾರ ಇಪ್ಪತೈದು ಲಕ್ಷ ರೂ ಪರಿಹಾರ ನೀಡಬೇಕು ಸರ್ಕಾರಿ ಉದ್ಯೋಗ ನೀಡಬೇಕು ಎಂದು ಅವರು  ಒತ್ತಾಯಿಸಿದರು.  

ಈ ಕುರಿತು ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾದ ಸುರೇಶಬಾಬು ರವರ ಜೆಡಿಎಸ್ ಪಕ್ಷದ ನಿಯೋಗ ಬಳ್ಳಾರಿ ಜಿಲ್ಲೆಯಲ್ಲಿನ ಬಾಣಂತಿಯರ ಸಾವಿನ ಘಟನೆ ಕುರಿತು ಬಳ್ಳಾರಿ ಜಿಲ್ಲೆಗೆ ಭೇಟಿ ಮಾಹಿತಿಯನ್ನು ಸಂಗ್ರಹಿಸಿದ್ದು  ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸದನದಲ್ಲಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.ಈ ವೇಳೆ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜುನಾಯಕ ಮಾತನಾಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಾಣಂತಿ ರೋಜಾ ಮನೆಗೆ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಎನ್‌.ಗಣೇಶ ಅವರು ಸೌಜನ್ಯದ ಭೇಟಿ ನೀಡಿಲ್ಲ ಕುಟುಂಬಕ್ಕೆ ಸಾಂತ್ವಾನ ಹೇಳುವ ಕೆಲಸ ಮಾಡಿಲ್ಲ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೇಸ್ ರಾಜ್ಯ ಸರ್ಕಾರದ ಅರೋಗ್ಯ ಸಚಿವ ದಿನೇಶ ಗುಂಡೂರಾವ್ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮೇಘರಾಜ,ಬಳ್ಳಾರಿ ನಗರ ಘಟಕ ಅಧ್ಯಕ್ಷ ವಂಡ್ರಿ ಹೊನ್ನುರಸ್ವಾಮಿ,ಯುವಘಟಕದ ಅಧ್ಯಕ್ಷ ಮುತ್ತುರಾಜ,ಪಕ್ಷದ ಮುಖಂಡರಾದ ಜೆ.ವೀರಭದ್ರ,ಆಶಾ ಕಾರ್ಯಕರ್ತೆ ಬಸಮ್ಮ ಹಾಗೂ ಕುಟುಂಬದವರು ಉಪಸ್ಥಿತರಿದ್ದರು.