ಧಾರವಾಡ 21 ; ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 11-ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 8,75,479 ಪುರುಷ, 8,49,750 ಮಹಿಳೆಯರು ಮತ್ತು 106 ತೃತೀಯ ಲಿಂಗಿಗಳು ಸೇರಿ ಒಟ್ಟು 17,25,335 ಮತದಾರರಿದ್ದಾರೆ. 1872 ಮತಗಟ್ಟೆಗಳಿವೆ. ಈ ಮತಗಟ್ಟೆಗಳಲ್ಲಿ 2208 ಕಂಟ್ರೋಲ್ ಯುನಿಟ್,2820 ವಿವಿಪ್ಯಾಟ್ ಹಾಗೂ 4408 ಮತಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಚುನಾವಣೆಗೆ ನಿಯೋಜಿಸಲ್ಪಟ್ಟಿರುವ ಎಲ್ಲ 10,109 ಸಿಬ್ಬಂದಿಗಳು ಹಾಗೂ 3268 ಸ್ವಯಂ ಸೇವಕರು ಹಾಗೂ 1872 ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.ಜಿಲ್ಲೆಯಲ್ಲಿ ಚುನಾವಣೆಯನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದರು.
19 ಅಭ್ಯಥರ್ಿಗಳು ಕಣದಲ್ಲಿ : ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಒಟ್ಟು 19 ಅಭ್ಯಥರ್ಿಗಳು ಕಣದಲ್ಲಿರುವರು. ರಾಷ್ಟ್ರೀಯ ಪಕ್ಷಗಳಿಂದ-3, ನೋಂದಾಯಿತ ಪಕ್ಷಗಳಿಂದ-6 ಹಾಗೂ ಪಕ್ಷೇತರ ಅಭ್ಯಥರ್ಿಗಳು-10 ಜನ ಕಣದಲ್ಲಿದ್ದಾರೆ.
ಮತಯಂತ್ರಗಳ ಹಂಚಿಕೆ : ಶೇ. 18 ರಿಸರ್ವ ಒಳಗೊಂಡಂತೆ ಮತದಾನಕ್ಕೆ ಅವಶ್ಯವಿರುವ 4408 ಮತಯಂತ್ರಗಳು, ಶೇ.18 ರಿಸರ್ವ ಒಳಗೊಂಡಂತೆ 2208 ಕಂಟ್ರೋಲ್ ಯುನಿಟ್, ಹಾಗೂ ಶೇ.28 ರಿಸರ್ವ ಒಳಗೊಂಡಂತೆ 2820 ವಿ.ವಿ.ಪ್ಯಾಟ್ ವಿದ್ಯುನ್ಮಾನ ಮತಯಂತ್ರಗಳನ್ನು ಪ್ರಥಮ ಹಂತದ ರ್ಯಾಂಡಮೈಸೇಷನ್ ಮೂಲಕ ಎಲ್ಲ ವಿಧಾನಸಭಾ ಮತಕ್ಷೇತ್ರಗಳಿಗೆ ಮರುಹಂಚಿಕೆ ಮಾಡಲಾಗಿರುತ್ತದೆ. ಹೆಚ್ಚುವರಿಯಾಗಿ ಅವಶ್ಯವಿರುವ 2247 ವಿದ್ಯುನ್ಮಾನ ಮತಯಂತ್ರಗಳನ್ನು ಮುಖ್ಯ ಚುನಾವಣಾ ಆಯೋಗದಿಂದ ಹಂಚಿಕೆ ಮಾಡಲಾಗಿದೆ.
ಮತದಾರರ ಸಹಾಯವಾಣಿ ಮತ್ತು ಸಿವಿಜಿಲ್ ನಿರ್ವಹಣೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ : ಮತದಾರರ ಸಹಾಯವಾಣಿ 1950 ಅಥವಾ 0836-1950 ಸಂಖ್ಯೆಗೆ ಒಟ್ಟು 1231 ಕರೆಗಳು ಸ್ವೀಕೃತವಾಗಿವೆ. ಇವುಗಳಲ್ಲಿ ಮತದಾರರ ಯಾದಿಗೆ ಸಂಬಂಧಿಸಿದ 08 ದೂರುಗಳು ಹಾಗೂ ಉಳಿದ 1223 ಕರೆಗಳು ಮತದಾರರ ಯಾದಿ ಹಾಗೂ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದ ಕರೆಗಳು ಸ್ವೀಕೃತವಾಗಿರುತ್ತವೆ. ಸಿವಿಜಿಲ್ (ಛಿಗಿರಟ ಂಠಿಠಿ) ದೂರು ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 218 ದೂರುಗಳು ಸ್ವೀಕೃತವಾಗಿದ್ದು, ಎಲ್ಲಾ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ. ತುತರ್ು ದೂರು ನಿರ್ವಹಣೆಯಲ್ಲಿ ಧಾರವಾಡ ಜಿಲ್ಲೆಯು ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿರುತ್ತದೆ.
33144 ಹೊಸಯುವ ಮತದಾರರು : 18-19 ವರ್ಷ ವಯೋಮಾನದ 19549 ಪುರುಷ ಹಾಗೂ 13595 ಮಹಿಳೆಯರು ಸೇರಿ ಒಟ್ಟು 33144 ನವ ಭಾರತೀಯ ಪ್ರಜೆಗಳು ಇದೇ ಮೊದಲಬಾರಿಗೆ ಜಿಲ್ಲೆಯಲ್ಲಿ ಮತದಾನ ಮಾಡಲಿರುವರು.
ಸೇವಾ ಮತದಾರರು ; ವಿವಿಧ ಸೇನಾ ಹಾಗೂ ಅರೆಸೇನಾ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2051 ಪುರುಷ ಮತ್ತು 54 ಮಹಿಳೆಯರು ಸೇರಿ ಒಟ್ಟಾರೆ 2105 ಸೇವಾ ಮತದಾರರು ಇದ್ದಾರೆ.
3334 ಪೊಲೀಸ್ ಸಿಬ್ಬಂದಿ ನಿಯೋಜನೆ : 23.04.2019ರ ಮತದಾನದ ದಿನದಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಒಟ್ಟಾರೆ 3334 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳು : ಒಟ್ಟು 391 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮತಗಟ್ಟೆಗಳ ಪೈಕಿ 208 ಮತಗಟ್ಟೆಗಳಿಗೆ ಮೈಕ್ರೋ ಆಬ್ಸರ್ವರ್ಸ್ಗಳನ್ನು, 102 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್, 64 ಮತಗಟ್ಟೆಗಳಿಗೆ ಸಿ.ಎ.ಪಿ.ಎಫ್ ಪೊಲೀಸ್ ಫೋಸರ್್ ಮತ್ತು 17 ಮತಗಟ್ಟೆಗಳಿಗೆ ವಿಡಿಯೋಗ್ರಾಫಿ ವ್ಯವಸ್ಥೆ ಕಲ್ಪಿಸಿ ನಿಗಾ ವಹಿಸಲು ಕ್ರಮ ಜರುಗಿಸಲಾಗಿರುತ್ತದೆ.
ಮಾದರಿ ಮತಗಟ್ಟೆ : 83-ಶಿಗ್ಗಾಂವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ 99-ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆ, ಹೊಸಕಟ್ಟಡದಲಿ ಮಾದರಿ ಮತಗಟ್ಟೆ ಸ್ಥಾಪಿಸಲಾಗುತ್ತಿದೆ.
ಮತದಾರರ ಚೀಟಿ,ಮಾರ್ಗದಶರ್ಿ ಪುಸ್ತಕ ಹಂಚಿಕೆ : ಒಟ್ಟು 17,25,335 ಮತದಾರರಿಗೆ ವೋಟರ್ಸ್ ಸ್ಲಿಪ್ (ಗಿಠಣಜಡಿ ಖಟಠಿ) ಹಂಚಿಕೆ ಕಾರ್ಯ ಪ್ರಗತಿಯಲ್ಲಿರುತ್ತದೆ. ಪ್ರತಿಶತ 98 ರಷ್ಟು ಹಂಚಿಕೆ ಕಾರ್ಯ ಪೂರ್ಣಗೊಂಡಿರುತ್ತದೆ. ಜಿಲ್ಲೆಯಲ್ಲಿರುವ ಒಟ್ಟು 3,82,700 ಕುಟುಂಬಗಳಿಗೆ, ಪ್ರತಿ ಕುಟುಂಬಕ್ಕೆ ಒಂದರಂತೆ ಮತದಾರರ ಮಾರ್ಗದಶರ್ಿ ಪುಸ್ತಕ ಹಂಚಿಕೆ ಕಾರ್ಯ ಪ್ರಗತಿಯಲ್ಲಿರುತ್ತದೆ. ಹೊಸದಾಗಿ ನೋಂದಾಯಿತರಾದ ಒಟ್ಟು 42,172 ಮತದಾರರಿಗೆ ಗುರುತಿನ ಚೀಟಿಯನ್ನು ಹಂಚಿಕೆ ಮಾಡಲಾಗಿರುತ್ತದೆ.
ಮತಗಟ್ಟೆ ಸಿಬ್ಬಂದಿಗೆ ವಾಹನ ಹಾಗೂ ಮಾರ್ಗಗಳು ; ಮಸ್ಟರಿಂಗ್ ಸ್ಥಳದಿಂದ ಎಲ್ಲ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳನ್ನು ಕರೆದೊಯ್ಯಲು 363 ಮಾರ್ಗಗಳನ್ನು ಗುರುತಿಸಲಾಗಿದೆ. 167 ಜೀಪು,180 ಸಾರಿಗೆ ಬಸ್ಗಳು, 184 ಖಾಸಗಿ ಮ್ಯಾಕ್ಸಿಕ್ಯಾಬ್ಗಳು ಹಾಗೂ 21 ಇತರೆ ವಾಹನಗಳು ಸೇರಿ ಒಟ್ಟು 552 ವಾಹನಗಳನ್ನು ನಿಯೋಜಿಸಲಾಗಿದೆ. ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ.
ಮತದಾನದ ಹಿಂದಿನ ದಿನ ಹಾಗೂ ಮತದಾನದ ದಿನದಂದು ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.ಮತದಾರರ ಸಹಾಯ ಕೇಂದ್ರ ( ಗಿಠಣಜಡಿ ಂಣಚಿಟಿಣ ಃಠಠಣ) ತೆರೆಯಲಾಗುತ್ತಿದೆ. ಈ ಬೂತ್ಗಳಲ್ಲಿ ಎಲ್ಲ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಯಾದಿಯೊಂದಿಗೆ ಹಾಜರಿರುತ್ತಾರೆ.
ಕೃಷಿ ವಿಶ್ವವಿದ್ಯಾಲಯದಲ್ಲಿ ಭದ್ರತಾ ಕೊಠಡಿ : ಮತದಾನದ ನಂತರ ಎಲ್ಲ ಮತಯಂತ್ರಗಳನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಿಮರ್ಿಸಲಾಗಿರುವ ಜಿಲ್ಲಾ ಭದ್ರತಾ ಕೊಠಡಿಗೆ ಅಂದೇ ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ತಂದು ಭದ್ರತಾ ಕೊಠಡಿಯಲ್ಲಿರಿಸಿ ಭದ್ರಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ,ಎನ್ಐಸಿ ಜಿಲ್ಲಾ ಅಧಿಕಾರಿ ಮೀನಾಕುಮಾರಿ,ಜಿಲ್ಲಾ ವಿವಿಧ ಸಮಿತಿಗಳ ವರದಿ ನೋಡಲ್ ಅಧಿಕಾರಿ ಕವಿತಾ ಮತ್ತಿತರರು ಉಪಸ್ಥಿತರಿದ್ದರು.