ಕಲಿಕೆಗೆ ಲಾಕ್ ಡೌನ್ ಅಡ್ಡಿಯಲ್ಲ: ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ

ಬೆಂಗಳೂರು, ಮಾ.31, ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಣೆ ಪರಿಣಾಮ ಕಲಿಕೆಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಕೆಲವು ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ತರಗತಿಗಳನ್ನು ತಗೆದುಕೊಳ್ಳುತ್ತಿರುವ ವಿಷಯ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.ಅತಿದೊಡ್ಡ ಕಲಿಕಾ ವೇದಿಕೆಯಾ ಬ್ರೈನ್ಲಿ ಸಂಸ್ಥೆಯು ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸಮೀಕ್ಷೆಯನ್ನು ಕೈಗೊಂಡಿತ್ತು. ಈ ಸಮೀಕ್ಷೆಯ ಪ್ರಕಾರ ಶೇಕಡ 57 ರಷ್ಟು ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಕಲಿಕೆ ಪ್ರಾರಂಭಿಸಿದ್ದಾರೆ. ಇದರಲ್ಲಿ ಶೇಕಡ 53.7 ರಷ್ಟು ವಿದ್ಯಾರ್ಥಿಗಳು ಈ ಆನ್‌ಲೈನ್ ಕ್ಲಾಸ್ ಬಗ್ಗೆ ವೆಚ್ಚುಗೆ ವೆಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಈ ವೇಳೆಯಲ್ಲಿ ತಮಗೆ ಆನ್ಲೈನ್ ಮೂಲಕವೇ ಹೋಮ್ ವರ್ಕ್ ನೀಡಲಾಗುತ್ತಿದೆ ಎಂದು 59.4 ರಷ್ಟು ವಿದ್ಯಾರ್ಥಿಗಳು ಹೇಳಿದರು.
ವಿದ್ಯಾರ್ಥಿಗಳ ನಿರಂತರ ಮತ್ತು ತಡೆರಹಿತ ಶಿಕ್ಷಣವನ್ನು ಒದಗಿಸಲು ಶಾಲೆಗಳು ಶ್ರಮಿಸುತ್ತಿವೆ. ಶೇಕಡ 46.9 ಜನತೆ ಕೂಡ ತಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ಆನ್‌ ಲೈನ್ ಪಾಠಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಶೇಕಡ 46.9 ವಿದ್ಯಾರ್ಥಿಗಳು ಮನೆಯಲ್ಲಿ ಬೇಸರಗೊಂಡಿದ್ದಾರೆ ಮತ್ತು ಶೇಕಡ 45.4 ಜನರು ತಮ್ಮ ಹೆಚ್ಚುವರಿ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯಲು ಬಯಸುತ್ತಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.“ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಇಡೀ ಶಿಕ್ಷಣ ಉದ್ಯಮದ ಪ್ರಯತ್ನ ಮೆಚ್ಚುವಂಥವುದು. ನಮ್ಮ ಕಡೆಯಿಂದ ಮಾಹಿತಿಯನ್ನು ಹುಡುಕುವ ವಿದ್ಯಾರ್ಥಿಗಳಿಗೆ ಅಥವಾ ಅವರ ಅಧ್ಯಯನ ಮತ್ತು ಹೋಂವರ್ಕ್ ಸಮಸ್ಯೆಗಳಿಗೆ ಸಹಾಯ ಒದಗಿಸುತ್ತದೆ” ಎಂದು ಬ್ರೈನ್ಲಿ ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಸಿಇಒ ಮೈಕಲ್ ಬೊರ್ಕೊವ್ಸ್ಕಿ ತಿಳಿಸಿದ್ದಾರೆ.