ಕಲಬುರಗಿ, ಮೇ 17, ಕೊರೊನಾ ಹಾಟ್ ಸ್ಪಾಟ್ ಸೂರ್ಯ ನಗರಿ ಕಲಬುರಗಿಯಲ್ಲಿ ಲಾಕ್‌ಡೌನ್ 4.0 ಸಡಿಲಿಕೆಯಿಂದ ಎನ್‌ಈಕೆಆರ್‌ಟಿಸಿ ಬಸ್ಸುಗಳು ಸಂಚರಿಸಲಿವೆ.ಜಿಲ್ಲೆಯಲ್ಲಿ ಬಸ್ಸುಗಳ ಸಂಚಾರ ಆರಂಭವಾಗಲಿದೆ ಎಂದು ಸಂಸ್ಥೆಯ ಎನ್‌ಈಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಜಹೀರಾ ನಸೀಂ ಕಲಬುರಗಿಯಲ್ಲಿ ಮಾಹಿತಿ ನೀಡಿದ್ದಾರೆ. ಲಾಕ್‌ಡೌನ್ ಸಡಿಲಿಕೆಯಿಂದ ಸಂಸ್ಥೆಯ 4888 ಬಸ್ಸುಗಳು ರಸ್ತೆಗಿಳಿಯಲಿವೆ. ಇನ್ನು, ಲಾಕ್‌ಡೌನ್‌ನಿಂದ ಎನ್‌ಈಕೆಆರ್‌ಟಿಸಿ ಸಾರಿಗೆ ಸಂಸ್ಥೆಗೆ 313 ಕ್ಕೂ ಅಧಿಕ ಕೋಟಿ ರೂ. ನಷ್ಟ ಕಂಡಿದ್ದು, ಸಂಸ್ಥೆ, ಸಿಬ್ಬಂದಿಗಳ ವೇತನಕ್ಕಾಗಿ ಸರ್ಕಾರದ ಮೊರೆ ಹೋಗಿವೆ. ಸರ್ಕಾರದ ನಿರ್ದೇಶನ ನಂತರ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳನ್ನೊಳಗೊಂಡಿರುವ ಎನ್‌ಈಕೆಆರ್‌ಟಿಸಿ ಸಾರಿಗೆ ಸಂಸ್ಥೆ ಬಸ್ಸುಗಳ ಸಂಚಾರ ಆರಂಭವಾಗಲಿವೆ.ಇನ್ನು, ಬಸ್ಸುಗಳ ಓಡಾಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಚಾಲಕ ಹಾಗೂ ನಿರ್ವಾಹಕರಿಗೆ ಮಾಸ್ಕ್ ಮತ್ತು ಸ್ಯಾನಿಟರಿ ವಿತರಣೆ ಮಾಡಲಾಗಿದೆ.