ಲಾಕ್‌ಡೌನ್‌: ಪ್ರೇಕ್ಷಕರಿಲ್ಲದೆ ಕ್ರೀಡಾಂಗಣ ತೆರೆಯಲು ಅನುಮತಿ

ನವದೆಹಲಿ, ಮೇ 18,ಕೊರೊನಾ ವೈರಸ್‌ನ ಭೀತಿಯಿಂದ ದೇಶಾದ್ಯಂತ ಮೇ 31 ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದ್ದು, ಕ್ರೀಡಾ ಸಂಕೀರ್ಣ ಮತ್ತು ಕ್ರೀಡಾಂಗಣವನ್ನು ಪ್ರೇಕ್ಷಕರಿಲ್ಲದೆ ತೆರೆಯಲು ಅನುಮತಿ ನೀಡಲಾಗಿದೆ.
 ದೇಶಾದ್ಯಂತ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣ ಗಮನದಲ್ಲಿಟ್ಟುಕೊಂಡು, ಲಾಕ್ ಡೌನ್ ಅನ್ನು ಮೇ 31 ಕ್ಕೆ ವಿಸ್ತರಿಸಲು ಭಾರತ ಸರ್ಕಾರ ಭಾನುವಾರ ನಿರ್ಧರಿಸಿದೆ. ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ಕ್ರೀಡಾಂಗಣವನ್ನು ತೆರೆಯಲು ಅನುಮತಿ ನೀಡಲಾಗಿದೆ ಆದರೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವಾಲಯ ನಿರ್ದೇಶನ ನೀಡಿತು.ಹೆಚ್ಚಿನ ಪ್ರೇಕ್ಷಕರು ಸೇರುವ ಟೂರ್ನಿಗಳನ್ನು ಆಯೋಜಿಸಲು ನಿರ್ಭಂದ ಹೇರಲಾಗಿದೆ.

ಏತನ್ಮಧ್ಯೆ, ಜಿಮ್‌ಗಳು ಮತ್ತು ಈಜುಕೊಳಗಳನ್ನು ತೆರೆಯಲು ದೇಶಾದ್ಯಂತ ನಿಷೇಧ ಮುಂದುವರಿಸಲಾಗುವುದು.ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೆಲವೇ ದಿನಗಳಲ್ಲಿ ತರಬೇತಿ ಶಿಬಿರಗಳನ್ನು ನಡೆಲಾಗುವುದು ಎಂದು ಇತ್ತೀಚೆಗೆ ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಹೇಳಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ, ವಿವಿಧ ಕ್ರೀಡೆಗಳ ಫೆಡರೇಷನ್‌ಗಳು ತರಬೇತುದಾರರು ಮತ್ತು ಆಟಗಾರರಿಗಾಗಿ ವೆಬ್‌ನಾರ್‌ಗಳನ್ನು ಆಯೋಜಿಸಿದ್ದವು.ಅನೇಕ ಆಟಗಾರರು ಲಾಕ್‌ಡೌನ್ ಸಮಯದಲ್ಲಿ ತರಬೇತಿ ಶಿಬಿರಗಳಲ್ಲಿ ಉಳಿದರೆ, ಕೆಲವರು ತಮ್ಮ ಮನೆಗಳಲ್ಲಿ ಉಳಿದು ಕೊಂಡಿದ್ದಾರೆ. ಆಟಗಾರರು ಎಲ್ಲಿದ್ದರೂ ಫಿಟ್‌ನೆಸ್ ವ್ಯಾಯಾಮ ಮತ್ತು ಸಾಮಾಜಿಕ ದೂರವನ್ನು ಅನುಸರಿಸಿ ತರಬೇತಿ ನಡೆಸಿದ್ದಾರೆ.