ಬೀಳಗಿ 14: ಗುರುವಿನ ಪುಣ್ಯ ಸ್ಮರಣೆ ಮಾಡುವುದರಿಂದ ಬದುಕು ಸಾರ್ಥಕವಾಗುತ್ತದೆ. ಪುಣ್ಯಸ್ಮರಣೆ ಹಿಂದೆ ಧರ್ಮ ಮತ್ತು ಆಧ್ಯಾತ್ಮದ ಬಲ ವಿರುತ್ತದೆ. ಲೌಖೀಕವಾಗಿರುವಂತ ಇಂದಿನ ಬದುಕಿನಲ್ಲಿ ಧರ್ಮ ಆಧ್ಯಾತ್ಮವನ್ನು ಕೇಳಲು ನಮಗೆ ಸಮಯ ಸಿಗುತ್ತಿಲ್ಲ ಎಂದು ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಕಲ್ಮಠದಲ್ಲಿ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳ 53ನೇ ಪುಣ್ಯ ಸ್ಮರಣೋತ್ಸವ, ನಮ್ಮೂರ ಉತ್ಸವ-2024 ದ ಪ್ರಯುಕ್ತ ಸೇವಾಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ನಾವುಗಳು ಸಂಸಾರವೆಂಬುವುದನ್ನು ದೊಡ್ಡ ಸಮಸ್ಯೆವೆಂದು ಪರಿಗಣಿಸಿದ್ದೇವೆ. ಈ ಸಂಸಾರವನ್ನು ಸಸಾರಗೊಳಿಸಬೇಕಾದ್ರೆ, ಇದರಲ್ಲಿರುವ ಶೂನ್ಯವನ್ನು ತೆಗೆದು ದೂರುಮಾಡಿದಾಗ ಸಂಸಾರ ಸಸಾರವಾಗುತ್ತದೆ. ಮಹಾತ್ಮರ ದಿವ್ಯ ಸಂದೇಶಗಳನ್ನು ಕೇಳುವುದರಿಂದ ಮತ್ತು ಧರ್ಮವನ್ನು ತಿಳಿದುಕೊಳ್ಳುವುದರಿಂದ ಪುಣ್ಯ ದೊರೆಯುತ್ತದೆ. ಹೆಂಡತಿ, ಮಕ್ಕಳು, ವಸ್ತು, ವಾಹನ ಇವುಗಳ ಮೇಲಿರುವಂತ ವ್ಯಾಮೋಹವನ್ನು ತೆಗೆದು ಹಾಕಬೇಕು. ಮೋಹ, ಲೋಬಗಳನ್ನು ತೊರೆದಾಗ ಜ್ಞಾನವೆಂಬುವುದು ಪ್ರಾಪ್ತಿಯಾಗುತ್ತದೆ. ಧರ್ಮದಿಂದ ಬದುಕಿ ಆಧ್ಯಾತ್ಮವನ್ನು ಅಳವಡಿಸಿಕೊಂಡಾಗ ಬದುಕು ಶಾಶ್ವತವಾಗುತ್ತದೆ ಎಂದರು.
ಬಿಲ್‌ಕೆರೂರ ಬಿಲ್ವಾಶ್ರಮದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಸಮಾಜಕ್ಕಾಗಿ ಬದುಕಿದವರ ಪುಣ್ಯಸ್ಮರಣೆ ಮಾಡುವುದು ಒಂದು ಕಾರ್ಯ. ಮಹಾತ್ಮರನ್ನು ಸ್ಮರಣೆ ಮಾಡುವುದರಿಂದ ತಿಳಿಯದೆ ಮಾಡಿದ ಪಾಪಗಳು ನಿವಾರಣೆಯಾಗುತ್ತದೆ. ಮನುಷ್ಯನಾದವನ್ನು ಪ್ರಪಂಚವೆಂಬ ಜೀವನದಲ್ಲಿ ತುಂಬಾ ಗಳಿಕೆ ಮಾಡಿರುತ್ತಾನೆ ಆದರೆ ಆತನಿಗೆ ನೆಮ್ಮದಿಯೇ ಇರುವುದಿಲ್ಲ. ಇತನಿಗೆ ಬದುಕಿನಲ್ಲಿ ಶಾಂತಿ, ನೆಮ್ಮದಿ ಸಿಗುಬೇಕಾದರೆ ಧರ್ಮದಿಂದ ಮಾತ್ರ ಸಾಧ್ಯ ಎಂದರು.
ಇಂದು ಯುವಕ-ಯುವತಿಯರು ಪ್ರವಚನಗಳನ್ನು ಆಲಿಸುವ ಹವ್ಯಾಸ ಬೆಳೆಸಿಕೊಳ್ಳಬೇಕಾಗಿದೆ. ವರಗಳಿಗೆ ಇಂದು ಕನ್ಯಾ ಸಿಗುತ್ತಿಲ್ಲ, ಮಹಿಳೆಯರು ಕನಿಷ್ಠವಾದರೂ ಮೂರು ಹೆಣ್ಣು ಮಕ್ಕಳನ್ನು ಹೆತ್ತು ಕನ್ಯಾ ಅಭಾವ ತಪ್ಪಿಸಬೇಕು. ನಮ್ಮ ಹೆಣ್ಣು ಮಕ್ಕಳಿಗೆ ಗೋವುಗಳ ಹೆಸರನ್ನು ನಾಮಕರಣ ಮಾಡಬೇಕು. ಗೋವುಗಳಿಂದ ತಯಾರಿಸಿದ ವಿಭೂತಿಯನ್ನು ನಿತ್ಯ ಧರಿಸುವುದರಿಂದ ಧರಿದ್ರತೆ ತೊಲಗುತ್ತದೆ.
-ಕೆರೂರ ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಶ್ರೀಗಳು,
ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯ ಶ್ರೀಗಳು, ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಶ್ರೀಗಳು, ಕಲ್ಮಠದ ಗುರುಪಾದ ಶಿವಾಚಾರ್ಯ ಶ್ರೀಗಳು, ಸಜ್ಜಲಗುಡ್ಡದ ದೊಡ್ಡಬಸವಾರ್ಯ ತಾತನವರು, ಹರ್ಲಾಪೂರ ಸದಾನಂದ ಶಾಸ್ತ್ರಿಗಳು, ನ್ಯಾಯವಾದಿ ಪ್ರಕಾಶ್ ವಸ್ತ್ರದ ಮಾತನಾಡಿದರು. ಶಿವಯೋಗಿ ದೇವರು, ಪಕೀರಯ್ಯ ಸ್ವಾಮಿಗಳು, ಪಪಂ ಸದಸ್ಯ ರಾಜು ಬೋರ್ಜಿ, ಗುರುರಾಜ್ ಲೂತಿ, ಶೇಖರ ಗೊಳಸಂಗಿ, ಕಾಶಿನಾಥ ಸೋಮನಕಟ್ಟಿ, ಪ್ರಮೀಳಾ ಘೋರ‌್ಪರ್ಡೆ ಇತರರು ಇದ್ದರು.