ಲೋಕದರ್ಶನ ವರದಿ
ಯಲ್ಲಾಪುರ: ಹೈನುಗಾರಿಕೆ ಒಂದು ಉದ್ಯಮವಾಗಿ ಬೆಳೆದಾಗ ಹೆಚ್ಚಿನ ಹಾಲು
ಉತ್ಪಾದನೆಯೇ ಹೈನುಗಾರ ರೈತರ ಉದ್ದೇಶವಾಗಿತ್ತು. ಡೈರಿಯಲ್ಲಿ ಕಡಿಮೆ ಎಸ್.ಎನ್.ಎಫ್ ಸಮಸ್ಯೆ ಎದುರಾಗತೊಡಗಿದಾಗ
ಗುಣಮಟ್ಟದ ಹಾಲು ಉತ್ಪಾದನೆಗೆ ಅಗತ್ಯ ಕ್ರಮಗಳತ್ತ ಚಿಂತನೆ ನಡೆಸುತ್ತಿದ್ದಾರೆ ಎಂದು ಧಾರವಾಡ ಹಾಲು
ಒಕ್ಕೂಟದ ನಿದರ್ೇಶಕ ಪ್ರಶಾಂತ ಸಭಾಹಿತ ಹೇಳಿದರು.
ಅವರು ಮಾಗೋಡ ಕಾಲೋನಿಯಲ್ಲಿ ಪಶುಸಂಗೋಪನಾ ಇಲಾಖೆ ಹಾಗೂ
ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನುವಾರು ಪ್ರದರ್ಶನ ಹಾಗೂ ಬರಡು ಜಾನುವಾರು ಚಿಕಿತ್ಸಾ
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ರಾಸಾಯನಿಕ ಬೆರೆಸಿ, ಹಾಲಿನ ಗುಣಮಟ್ಟ ಕೆಡಸಿ ಗ್ರಾಹಕರಿಗೆ
ಮಾರುವ ಹಾಲಿನ ಕಂಪನಿಗಳನ್ನು ನಿಷೇಧಸುವ ಕ್ರಮವನ್ನು ಸಕರ್ಾರ ಕೈಗೊಳ್ಳಬೇಕೆಂದರು. ಮಿಶ್ರತಳಿಯ ದನಗಳ
ಸಾಕುವುದರಿಂದ ಗುಣಮಟ್ಟದ ಹಾಲು ಉತ್ಪಾದನೆ ಸಾಧ್ಯ. ರೈತರು ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ
ನೀಡಬೇಕು, ಜೊತೆಗೆ ಗ್ರಾಹಕರೂ ಗುಣಮಟ್ಟದ ಹಾಲು ಖರೀದಿಸಲು ಮುಂದಾಗಬೇಕು ಎಂದರು.
ಗ್ರಾ.ಪಂ ಉಪಾಧ್ಯಕ್ಷ ಎಂ.ಎನ್.ಭಟ್ಟ ಮಾತನಾಡಿ, ಕೃಷಿಕರು
ಉಪಕಸುಬಾಗಿ ಹೈನುಗಾರಿಕೆಯನ್ನು ಬೆಳೆಸಿಕೊಳ್ಳುತ?ತಿರುವುದು ಒಳ್ಳೆಯ ಬೆಳವಣಿಗೆ. ಹೈನುಗಾರಿಕೆ ರೈತರ
ಆಥರ್ಿಕ ಸಬಲೀಕರಣಕ್ಕೆ ನೆರವಾಗುವಂತಾಗಲು ಮತ್ತಷ್ಟು ಯೋಜನೆಗಳು ಇಲಾಖೆ ಹಾಗೂ ಹಾಲು ಒಕ್ಕೂಟದಿಂದ ಬರಬೇಕು.
ಜಾನುವಾರು ಪ್ರದರ್ಶನ, ತರಬೇತಿಗಳನ್ನು ಆಗಾಗ ಹಮ್ಮಿಕೊಳ್ಳುವ ಮೂಲಕ ರೈತರಿಗೆ ಮತ್ತಷ್ಟು ಪ್ರೋತ್ಸಾಹ
ನೀಡುವ ಕಾರ್ಯ ಇಲಾಖೆಯಿಂದ ಆಗಬೇಕು ಎಂದರು.
ನಂದೊಳ್ಳಿ ಗ್ರಾ.ಪಂ ಅಧ್ಯಕ್ಷೆ ನಾಗಶ್ರೀ ಭಾಗ್ವತ ಅಧ್ಯಕ್ಷತೆ
ವಹಿಸಿದ್ದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವರಾಮ ಭಟ್ಟ, ಗ್ರಾ.ಪಂ ಸದಸ್ಯ ಕೃಷ್ಣ ಹೆಗಡೆ, ಗ್ರಾಮ ಅರಣ್ಯ
ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ಟ ಕಿರಕುಂಭತ್ತಿ ಮಾತನಾಡಿದರು. ಮಾಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ
ಅಧ್ಯಕ್ಷ ನರಸಿಂಹ ಭಟ್ಟ, ಉಪಾಧ್ಯಕ್ಷ ವೆಂಕಟ್ರಮಣ ಭಟ್ಟ ಗುತರ್ೆಗದ್ದೆ, ವೆಂಕಟ್ರಮಣ ಭಟ್ಟ ಕಿರಕುಂಭತ್ತಿ,
ಸಹಾಯಕ ಪಶುಸಂಗೋಪನಾ ನಿದರ್ೇಶಕ ಡಾ.ನಾರಾಯಣ ಹೆಗಡೆ, ಡಾ.ಸುಬ್ರಾಯ ಭಟ್ಟ, ಡಾ.ಶ್ರೀನಿವಾಸ ಪಾಟೀಲ,
ಉಪಸ್ಥಿತರಿದ್ದರು.
ಬರಡು ಜಾನುವಾರುಗಳಿಗೆ ಇಲಾಖೆಯ ವೈದ್ಯರು ಚಿಕಿತ್ಸೆ ನೀಡಿದರು.
ಎರಡು ದಿವಸಗಳ ಕಾಲ ನಡೆದ ಶಿಬಿರದಲ್ಲಿ ಹೈನುಗಾರಿಕೆ ಕುರಿತಂತೆ ವಿವಿಧ ವಿಷಯಗಳ ಕುರಿತು ರೈತರಿಗೆ
ತರಬೇತಿ ನೀಡಲಾಯಿತು. ಮಿಶ್ರತಳಿಯ ಜಾನುವಾರುಗಳ ಪ್ರದರ್ಶನದಲ್ಲಿ ಜಾನುವಾರು ಪ್ರದಶರ್ಿಸಿದ ಹೈನುಗಾರರಿಗೆ
ಬಹುಮಾನ ವಿತರಿಸಲಾಯಿತು. ಕರುಗಳ ವಿಭಾಗದಲ್ಲಿ ಶಿವಪ್ರಕಾಶ ಹೆಬ್ಬಾರ್ ಪ್ರಥಮ, ಎನ್.ಟಿ.ಹೆಗಡೆ ದ್ವಿತೀಯ, ನಾರಾಯಣ ಹೆಗಡೆ ತೃತೀಯ, ಎಮ್ಮೆಗಳ
ವಿಭಾಗದಲ್ಲಿ ಫ್ರಾನ್ಸಿಸ್ ಫನರ್ಾಂಡೀಸ್ ಪ್ರಥಮ, ಎಂ.ಗೋಪಾಲಕೃಷ್ಣ ದ್ವಿತೀಯ, ದತ್ತಾತ್ರೇಯ ಹೆಗಡೆ
ತೃತೀಯ, ಜೆಸರ್ಿ ವಿಭಾಗದಲ್ಲಿ ಶ್ರೀಧರ ಹೆಗಡೆ ಪ್ರಥಮ, ಬಿ.ಎಸ್.ಗಂಗಾಧರ ದ್ವಿತೀಯ, ಮಹೇಶ ಪಟಗಾರ ತೃತೀಯ
ಹಾಗೂ ಎಚ್.ಎಫ್ ವಿಭಾಗದಲ್ಲಿ ನಾಗೇಶ ಹೆಗಡೆ ಪ್ರಥಮ, ನರಸಿಂಹ ಭಟ್ಟ ಮೇಲಿನಕುಂಕಿ ದ್ವಿತೀಯ, ಗಣಪತಿ
ಪಟಗಾರ ತೃತೀಯ ಬಹುಮಾನ ಪಡೆದರು. ಮಹಾಬಲೇಶ್ವರ ಭಟ್ಟ ಕರಡಿಪಾಲ ಅವರ ಹಸು ಚಾಂಪಿಯನ್ ಪ್ರಶಸ್ತಿ ಪಡೆಯಿತು.