ನೇರ ಫೋನ್‌-ಇನ್ ಪ್ರಸಾರ ಕಾರ್ಯಕ್ರಮ: ರಕ್ತ ಕ್ಯಾನ್ಸರ್ ಕುರಿತು ಜನಜಾಗೃತಿ

Live phone-in broadcast program: Public awareness about blood cancer

ಬೆಳಗಾವಿ 14: ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ಸಮುದಾಯ ಬಾನುಲಿ ಕೇಂದ್ರ ಬೆಳಗಾವಿ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ನೇರ ಫೋನ್‌-ಇನ್ ಪ್ರಸಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.  

ಗುರುವಾರ ದಿ.  13ನೇ ಮಾರ್ಚ್‌ 2025 ರಂದು ಸಂಜೆ 5 ರಿಂದ 6ಗಂಟೆ ವರೆಗೆ ನಡೆದ ಕಾರ್ಯಕ್ರಮದಲ್ಲಿ ರಕ್ತ ಕ್ಯಾನ್ಸರ್ ಕುರಿತು ಪ್ರಶ್ನೋತ್ತರ ಮೂಲಕ ಜನಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಕೆಎಲ್‌ಇ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಮತ್ತು  ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ತಜ್ಞ ವೈದ್ಯ ಡಾ. ರೋಹನ ಭೀಶೆ ಅವರು ಭಾಗವಹಿಸಿ ರಕ್ತ ಕ್ಯಾನ್ಸರ ವಿಧಗಳು, ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ  ಕುರಿತು ಜಾಗೃತಿ ಮೂಡಿಸಿದರು.  

ರಕ್ತ ಕ್ಯಾನ್ಸರ್ ಕಂಡುಬಂದರೆ ಮನುಷ್ಯನ ದೇಹದಲ್ಲಿ ಯಾವೆಲ್ಲಾ ಸಮಸ್ಯೆಗಳು ಕಾಡುತ್ತವೆ ಎಂಬುದರ ಕುರಿತು ತಿಳಿಸಿದರು ಮತ್ತು ನೂತನ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆಗಳು ಮತ್ತು ಸೇವೆಗಳ ಕುರಿತು ಕೇಳುಗರಿಗೆ ತಿಳಿಸಿದರು ಮತ್ತು ಕೇಳುಗರ ರಕ್ತ ಕ್ಯಾನ್ಸರ್ ಸಂಭಂದಿತ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ. ಎಸ್ ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.