ಸೃಜನಶೀಲತೆಯಿಂದ ಬದುಕು ಸುಂದರ

ಬೆಳಗಾವಿ: ಓದೋಕೆ ಅದೇ ಸಮಯ, ಇದೇ ಸಮಯ ಎಂಬ ಕಟ್ಟುಪಾಡುಗಳೇನಿಲ್ಲ. ನಮ್ಮ ಜಾಗೃತ ಮನಸ್ಸು, ಮಿದುಳಿನ ಶಕ್ತಿಯ ಮೇಲೆ ಓದಿನ ಪ್ರಭಾವ ಉಂಟಾಗುತ್ತದೆ. ವಿದ್ಯಾಥರ್ಿಗಳು ಓದುವಾಗ ಏಕೆ, ಏನು, ಹೇಗೆ, ಯಾರು, ಯಾವಾಗ ಎಂಬಿತ್ಯಾದಿ ಪ್ರಶ್ನೆಗಳನ್ನು ಹಾಕಿಕೊಂಡಾಗ ಬದುಕಿನ ಲೋಕವನ್ನು ಅರಿಯಲು ಸಾಧ್ಯವಾಗುತ್ತದೆೆ ಎಂದು ಸಾಹಿತಿ, ಆಂಗ್ಲ ಉಪನ್ಯಾಸಕಿ ಜಯಶ್ರೀ ಅಬ್ಬಿಗೇರಿ ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.

ಅವರು ಇಂದು ನಗರದ ಕೆ.ಎಲ್.ಇ. ಜಿ.ಎ. ಪ್ರೌಢಶಾಲೆಯ ವಾಷರ್ಿಕ ಸ್ನೇಹಸಮ್ಮೇಳನ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾಥರ್ೀಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ, ವಿದ್ಯಾಥರ್ಿಗಳು ತಮ್ಮ ಗುರಿಯನ್ನು ದೃಢಪಡಿಸಿಕೊಂಡು ಸೃಜನಶೀಲರಾಗಿ ಓದಿನತ್ತ ಕಾರ್ಯಮಗ್ನರಾಗಬೇಕು. ತಮ್ಮ ದೃಷ್ಟಿ, ಮನೋಭಾವ, ಹವ್ಯಾಸ ಬದಲಾಯಿಸಿಕೊಂಡರೆ ಯಶಸ್ಸು ಸಾಧ್ಯ ಎಂದರು.

ವಿದ್ಯಾಥರ್ಿಗಳು ಕಲಿಕೆಯಲ್ಲಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸತತವಾಗಿ ಶ್ರಮಿಸಬೇಕಾಗಿದೆ. ಮೊಬೈಲ್ನಲ್ಲಿ ಸಮಯ ವ್ಯರ್ಥ ಮಾಡದೆ ಪದಬಂಧ, ಸುಡೊಕು ಹಾಗೂ ಟ್ರಿಕ್ಕಿ ಪ್ರಶ್ನೆಗಳನ್ನು ಉತ್ತರಿಸುವುದರ ಮೂಲಕ ಮೆದುಳಿಗೆ ಕಸರತ್ತು ನೀಡಿ ಸೃಜನಶೀಲತೆಯನ್ನು ಬೆಳೆಸಿಕೊಂಡು ಬದುಕು ಸುಂದರವಾಗಿಸಿಕೊಳ್ಳಬೇಕು. ಯಶಸ್ಸಿಗೆ ಎಸ್.ಎಸ್.ಎಲ್.ಸಿ ಒಂದು ಅಂತಿಮ ಘಟ್ಟ. ಅದು ಭವಿಷ್ಯದ ಜವಾಬ್ದಾರಿಗೆ ರೋಚಕ ತಿರುವು. ಆದ್ದರಿಂದ ವಿದ್ಯಾಥರ್ಿಗಳು ಪಠ್ಯದ ಅಂಶಗಳನ್ನು ಮನನ ಮಾಡಿಕೊಳ್ಳಬೇಕು. ಪರೀಕ್ಷೆಯ ಫಲಿತಾಂಶ ದಾಖಲೆ ಮಾತ್ರ; ಆದರೆ ಜೀವನ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮುಖ್ಯ. ಸಾಹಿತ್ಯಿಕ ಓದು-ಅಭ್ಯಾಸದಿಂದ ತಮ್ಮ ಅಮೂಲ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಕಲಿತ ಶಾಲೆ, ಗುರು-ಹಿರಿಯರು-ಹೆತ್ತವರನ್ನು ಗೌರವಿಸಬೇಕೆಂದರು.

ವಿಶ್ವನಾಥ ವಿಜಾಪೂರೆ, ಶ್ರೇಯಾ ಬಳಿಗಾರ ಆದರ್ಶ ವಿದ್ಯಾಥರ್ಿಗಳಾಗಿ ಆಯ್ಕೆಯಾದರು. ಶಿಕ್ಷಕ ಶಿವರಾಯ ಏಳುಕೋಟಿ ನೇತೃತ್ವದ 10 ನೆಯ ಡ ವರ್ಗಕ್ಕೆ ಅತ್ಯುತ್ತಮ ವರ್ಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿಗಳಿಗೆ ನಗದು, ಪಾರಿತೋಷಕಗಳನ್ನು ನೀಡಿ ಸನ್ಮಾನಿಲಾಯಿತು.  

ಅಧ್ಯಕ್ಷತೆಯನ್ನು ಉಪ ಪ್ರಾಚಾರ್ಯ ಸಿದ್ಧರಾಮ ಗದಗ ವಹಿಸಿದ್ದರು. ವಿದ್ಯಾಥರ್ಿ ಪ್ರತಿನಿಧಿಗಳಾದ ಸುಮಿತ ಗುರವ, ಶ್ರೇಯಾ ಅಕ್ಕೆಣ್ಣವರ ವೇದಿಕೆ ಮೇಲೆ ಉಪಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಚನ್ನಬಸಪ್ಪ ಪಾಗಾದ ನಿರೂಪಿಸಿದರು. ಅಲ್ಕಾ ಪಾಟೀಲ, ರಾಮಚಂದ್ರ ಮಗದುಮ್ಮ ಪರಿಚಯಿಸಿದರು. ಕಾವೇರಿ ಪಟ್ಟಣ ವಂದಿಸಿದರು.