ಬೀಚ್ನಲ್ಲಿ ಕಸ ಬಾಚಿ, ದೇಶಕ್ಕೆ ಸ್ಚಚ್ಛತೆಯ ಸಂದೇಶ ರವಾನಿಸಿದ ಪ್ರಧಾನಿ ...!

ಚೆನ್ನೈ, ಅ.12:      ಪ್ರಧಾನಿ ನರೇಂದ್ರ ಮೋದಿ ಅವರು  ತಾನು ಕೇವಲ ಮಾತುಗಳಲ್ಲಿ  ಮಾತ್ರ ಹೇಳುವುದಿಲ್ಲ ಅದನ್ನು  ಕೃತಿರೂಪದಲ್ಲಿ ಮಾಡಿತೋರಿಸುತ್ತೇನೆ ಎಂಬುದನ್ನು ಶನಿವಾರ ಬೆಳಗ್ಗೆ ಸಾಬೀತುಪಡಿಸಿದ್ದಾರೆ. ಸದಾ ಸ್ವಚ್ಛತೆಯ ಜಪ ಮಾಡುವ ಪ್ರಧಾನಿ ಮೋದಿ, ಸ್ವಯಂ ಸಫಾಯಿ ಕರ್ಮಚಾರಿಯಾಗಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ವೈರಲ್ ಆಗುತ್ತಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್,  ಪ್ರಧಾನಿ ನರೇಂದ್ರ ಮೋದಿ ನಡುವೆ ಎರಡನೇ ಅನೌಪಚಾರಿಕ ಶೃಂಗಸಭೆ ಮಾಮಲ್ಲಪುರಂನಲ್ಲಿ ಶುಕ್ರವಾರ ಆರಂಭಗೊಂಡಿತು.  ಈ ಹಿನ್ನೆಲೆಯಲ್ಲಿ  ಎರಡನೇ ದಿನ ಪ್ರಾರಂಭವಾಗುವ ಮುನ್ನ ಪ್ರಧಾನಿ ಮೋದಿ ದೇಶದ ಜನರಿಗೆ ಕ್ಲೀನ್ ಅಂಡ್ ಫಿಟ್  ಸಂದೇಶ ರವಾನಿಸಿದ್ದಾರೆ. ಮೋದಿ ಶನಿವಾರ ಬೆಳಿಗ್ಗೆ ಮಾಮಲ್ಲಪುರಂ ಸಮುದ್ರ ದಂಡೆಯಲ್ಲಿ ಬೆಳಗಿನ ಜಾಗಿಂಗ್ಗೆ ಹೋಗಿದ್ದರು. ಆ ಸಮಯದಲ್ಲಿ  ಸಾಮಾನ್ಯ ವ್ಯಕ್ತಿಯಂತೆ ಸುಮಾರು ಅರ್ಧ ತಾಸು ಸಂಚರಿಸಿ ಅಲ್ಲಿ ಬಿದ್ದಿದ್ದ  ಪ್ಲಾಸ್ಟಿಕ್ ಮತ್ತಿತರ  ಕಸವನ್ನು ಎತ್ತಿ ಚೀಲದಲ್ಲಿ ಹಾಕಿ ಸ್ವಚ್ಛತೆಯ ಕಾರ್ಯ ನಡೆಸಿ ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿರಬೇಕು ಎಂಬ ಕರೆಯನ್ನು ದೇಶದ ಜನತೆಗೆ ನೀಡಿದರು. ಈ ಕುರಿತ ಫೋಟೋ ಮತ್ತು ವೀಡಿಯೊಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ,.. ನಾನು ಮಹಾಬಲಿಪುರಂ ಬೀಚ್ನಲ್ಲಿ ಅರ್ಧ ತಾಸು  ಸಂಚರಿಸಿ ಅಲ್ಲಿ ನಾನು  ಸಂಗ್ರಹಿಸಿದ ಕಸವನ್ನು  ಹೋಟೆಲ್ ಸಿಬ್ಬಂದಿಯ  ಭಾಗವಾಗಿರುವ  ಜಯರಾಜ್ ಅವರಿಗೆ ಹಸ್ತಾಂತರಿಸಿದೆ ಎಂದು ತಿಳಿಸಿದೆ. ನಮ್ಮ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸಿಕೊಂಡು  "ನಾವು ಆರೋಗ್ಯವಾಗಿರುವಂತೆ ನೋಡಿಕೊಳ್ಳೋಣ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಪ್ರಧಾನ ಮಂತ್ರಿಯ ಟ್ವೀಟ್ಗೆ ಲಕ್ಷಾಂತರ ಮಂದಿ  ಮೆಚ್ಚುಗೆಗಳು ವ್ಯಕ್ತವಾಗಿವೆ. ನೀವು ಗ್ರೇಟ್  ಸರ್ .. ಕೇವಲ ಮಾತಿಗೆ ಸೀಮಿತವಾಗದೆ ಅದನ್ನು ಕೃತಿಯಲ್ಲಿ ಮಾಡಿ ತೋರಿಸಿದ್ದೀರಿ ಎಂದು ನೆಟ್ಟಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.