ವಿಕಲಚೇತನ ಯುವತಿಯಿಂದ ಕೂಲಿ ಕಾರ್ಮಿಕರ ಮಕ್ಕಳಿಗೆ ಅಕ್ಷರಾಭ್ಯಾಸ

ಲೋಕದರ್ಶನವರದಿ

ಬ್ಯಾಡಗಿ02: ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸಮಸ್ಯೆ ಉಂಟಾಗದಂತೆ ತಡೆಯಲು ನರೇಗಾ ಯೋಜನೆಯ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಇದೇ ಸಂದರ್ಭದಲ್ಲಿ ಕೂಲಿ ಕಾಮರ್ಿಕರ ಮಕ್ಕಳಿಗೂ ಸಹ ಶೈಕ್ಷಣಿಕ ತೊಂದರೆ ಆಗದಿರಲಿ ಎನ್ನುವ ಸದುದ್ದೇಶದಿಂದ ಸ್ವಯಂ ಪ್ರೇರಣೆಯಿಂದ ವಿಕಲಚೇತನ ಯುವತಿಯೊಬ್ಬರು ಕೂಲಿ ಕಾಮರ್ಿಕರ ಮಕ್ಕಳಿಗೆ ಅಕ್ಷರಾಭ್ಯಾಸ ನೀಡಲು  ಮುಂದಾಗಿದ್ದು, ಈ ವಿನೂತನ ಪ್ರಯತ್ನಕ್ಕೆ ಕೈಗೂಡಿಸಿರುವ ಗ್ರಾಮ ಪಂಚಾಯತಿ ಕಾರ್ಯ ಶ್ಲಾಘನೀಯವಾಗಿದ್ದು, ಪ್ರಶಂಸೆಗೆ ಪಾತ್ರವಾಗಿದೆ. 

  ತಾಲೂಕಿನ ಹೆಡಿಗ್ಗೊಂಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾಮರ್ಿಕರ ಮಕ್ಕಳಿಗೆ ಶೈಕ್ಷಣಿಕ ಅಭ್ಯಾಸಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದ ಯುವತಿಯು ಅಕ್ಷರದ ಅರಿವು ಮೂಡಿಸುವ ನಿಟ್ಟಿನಲ್ಲಿ ಪಿಡಿಓ ರಮೇಶ ಅವರ ಸಹಕಾರದೊಂದಿಗೆ ಗ್ರಾಮದ ಗೂಳಿಕಟ್ಟಿ ಕೆರೆಯಲ್ಲಿ ಕೆಲಸ ಮಾಡುತ್ತಿರುವ ಸ್ಥಳಕ್ಕೆ ಆಗಮಿಸಿ ಅಲ್ಲಿ ಕೂಲಿ ಕೆಲಸ ಮಾಡುವ ಕಾಮರ್ಿಕರ ಸಣ್ಣ,ಸಣ್ಣ, ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಇದಕ್ಕೆ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಸೇರಿದಂತೆ ಸಿಬ್ಬಂದಿ ವರ್ಗ ಕೂಡ ನೆರವಾಗಿದ್ದಾರೆ. 

    ಈ ಬಗ್ಗೆ ಸುದ್ದಿಗಾರೊಂದಿಗೆ ಮಾತನಾಡಿದ ಪಿಡಿಓ ರಮೇಶ ಹುಲುಸೋಗಿ, ಉದ್ಯೋಗವನ್ನು ಅರಸಿ ಬಂದಿರುವ ಸುಮಾರು 250 ಕ್ಕೂ ಹೆಚ್ಚು ಕೂಲಿ ಕಾಮರ್ಿಕರು ತಮ್ಮ ಕೆಲಸದ ಅವಧಿಯಲ್ಲಿ ಮಕ್ಕಳನ್ನು ಜೊತೆಗೆ ಕರೆ ತಂದು ಬಿಡುವುದನ್ನು ನೋಡಿದ ತಮಗೆ ಮಕ್ಕಳಿಗೆ ಅವರ ಪಾಲಕರ ಕೆಲಸ ಮುಗಿಯುವವರೆಗೂ ಆಟದೊಂದಿಗೆ ಪಾಠವನ್ನು ಕಲಿಸುವ ಯೋಚನೆಯು ಮೂಡಿ ಬಂದಿದ್ದು, ಅದನ್ನು ಗ್ರಾ ಪಂ. ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಚಚರ್ಿಸಿ ಕಾರ್ಯರೂಪಕ್ಕೆ ತಂದಿದ್ದರಿಂದ ಮಕ್ಕಳು ಕೂಡ ಅಕ್ಷರಾಭ್ಯಾಸಕ್ಕೆ ಹೊಂದಿಕೊಂಡು ಕಲಿಯುವಂತಾಗಿದೆ. 

    ಕೂಲಿ ಕಾಮರ್ಿಕರ ಚಿಕ್ಕ ಮಕ್ಕಳಿಗೆ ಪಾಠವನ್ನು ಮಾಡುತ್ತಿರುವ ವಿಕಲಚೇತನೆಯಾದ ಕು. ಮುತ್ತವ್ವ ದೇಸೂರ ಅವರಿಗೂ ಸಹ ನರೇಗಾ ಯೋಜನೆಯ ಅನ್ವಯ ಕೂಲಿಯನ್ನು ಪಾವತಿಸಲಾಗುವುದು. ಅಲ್ಲದೇ ಇನ್ನೋರ್ವ ವಿಕಲಚೇತನರೊಬ್ಬರು ಕೂಲಿ ಕಾಮರ್ಿಕರ ಹಾಜರಾತಿ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. 

   ಈ ಸಂದರ್ಭದಲ್ಲಿ ಮಾತನಾಡಿದ ವಿಕಲ ಚೇತನೆಯಾದ ಕು. ಮುತ್ತವ್ವ ದೇಸೂರ, ಚಿಕ್ಕ ಮಕ್ಕಳಿಗೆ ಅಕ್ಷರ ಅರಿವಿನ ಜೊತೆಗೆ ಕಲಿಕೆಯನ್ನು ಪ್ರಾರಂಭಿಸಿದ್ದು, ಮಕ್ಕಳೂ ಸಹ ಖುಷಿಯಿಂದ ಸ್ಪಂದಿಸುತ್ತಿರುವುದು ಸಂತಸ ಮೂಡಿಸಿದೆ. ಮೂನರ್ಾಲ್ಕು ವರ್ಷದಿಂದ ಏಳೆಂಟು ವರ್ಷದ ಮಕ್ಕಳಿಗೆ ತಾವು ಕಲಿಕೆಯನ್ನು ಶುರು ಮಾಡಿದ್ದು, ವಿಕಲಚೇತನ ಬಾಲಕನೂ ಸೇರಿ 16 ಮಕ್ಕಳು ಕಲಿಕೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.