ಲಿಂಗೈಕ್ಯ ವಿರಕ್ತ ಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ: ಬೃಹತ್ ಬೈಕ್ ರ್ಯಾಲಿ
Lingayikya Virakta Swami statue installation program: Huge bike rally
ತಾಳಿಕೋಟಿ 29: ಪಟ್ಟಣದ ಆರಾಧ್ಯ ದೈವ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಲಿಂಗೈಕ್ಯ ಶ್ರೀ ವಿರಕ್ತ ಮಹಾಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ರವಿವಾರ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಯಿತು.
ಪಟ್ಟಣದ ಕೌಟಿಲ್ಯ ಅಕಾಡೆಮಿ ಅಧ್ಯಕ್ಷ ರಾಜಶೇಖರ ಸಜ್ಜನ ಅವರ ಕುಟುಂಬ ಸದಸ್ಯರು ಭಕ್ತಿಯಿಂದ ಕೊಡಮಾಡಿದ 4 ಅಡಿ ಎತ್ತರದ ಲಿಂಗೈಕ್ಯ ಶ್ರೀ ವಿರಕ್ತ ಶ್ರೀಗಳ ಮೂರ್ತಿಯ ಭವ್ಯ ಮೆರವಣಿಗೆಯ ಬೃಹತ್ ಬೈಕ್ ರ್ಯಾಲಿಗೆ ಪೂಜ್ಯ ಸಿದ್ದಲಿಂಗ ದೇವರು ಶ್ರೀ ಬಸವೇಶ್ವರ ವೃತ್ತದಲ್ಲಿ ಚಾಲನೆ ನೀಡಿದರು. ಅಲ್ಲಿಂದ ನೂರಾರು ಬೈಕ್ ಸವಾರರು ಓಂ ನಮಃ ಶಿವಾಯ ಶ್ರೀ ಖಾಸ್ಗತೇಶ್ವರ ಹಾಗೂ ಶ್ರೀ ವಿರಕ್ತ ಮಹಾ ಸ್ವಾಮಿಗಳ ಹೆಸರಲ್ಲಿ ಜಯ ಘೋಷಗಳನ್ನು ನಾಲ್ಕೂ ದಿಕ್ಕಿನಲ್ಲಿ ಮೊಳಗಿಸಿ ಆರಂಭಿಸಿದ ರ್ಯಾಲಿಯು ಬಸ್ ನಿಲ್ದಾಣ ಮಾರ್ಗವಾಗಿ ಮಹಾರಾಣಾ ಪ್ರತಾಪ್ ಸಿಂಹ ವೃತ್ತ ಶಿವಾಜಿ ವೃತ್ತ ಕತ್ರಿ ಬಜಾರ್ ರಸ್ತೆಯಿಂದ ಶ್ರೀ ಖಾಸ್ಗತೇಶ್ವರ ಮಠಕ್ಕೆ ತಲುಪಿತು ಅಲ್ಲಿ ಸಕಲ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗಣ್ಯರಾದ ಪ್ರಭುಗೌಡ ಮದರಕಲ್ಲ,ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ಪರ್ಪ ಸಂಗಪ್ಪ ಸಜ್ಜನ, ಕಾಶಿನಾಥ ಸಜ್ಜನ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಡಿ. ವಿ.ಪಾಟೀಲ, ಜೈಸಿಂಗ್ ಮೂಲಿಮನಿ, ಮಹಾಂತೇಶ ಮುರಾಳ, ರಾಜು ಸಜ್ಜನ, ಇಬ್ರಾಹಿಂ ಮನ್ಸೂರ, ಅಶೋಕ ಚಿನಗುಡಿ, ತಿಪ್ಪಣ್ಣ ಸಜ್ಜನ,ರವಿಕಾಂತ ಚಂದುಕರ್, ರಾಜು ಅಲ್ಲಾಪೂರ, ನದೀಮ ಕಡು ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 