ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ MLA Ashok Managuli launches road construction work

ಲೋಕದರ್ಶನ ವರದಿ 

ಸಿಂದಗಿ 23 :   ರೇಣುಕಾ ನಗರದ ಜನತೆಯ ಬಹುದಿನಗಳ ಬೇಡಿಕೆಗಳೊಂದಾದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ರೂ 50 ಲಕ್ಷಗಳ ಕಾಮಗಾರಿಗೆ ಚಾಲನೆ ನೀಡಿಲಾಗಿದೆ ಅಲ್ಲದೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಮಸ್ಯೆ ಸೇರಿದ ಞಂತೆ ಮೂಲಭೂತ ಸೌಕರ್ಯಗಳನನು ಒದಗಿಸುವ ನಿಟ್ಟಿನಲ್ಲಿ ಮೂಂದೆ ಇನ್ನೂ ರೂ 50 ಲಕ್ಷ ನೀಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು. ನಗರದ ರೇಣುಕಾ ನಗರದ ಗೊಲ್ಲರ ಓಣಿಯಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ರೂ 50 ಲಕ್ಷಗಳ ಆಂತರಿಕ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ, ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರವಿ ಶಿರಗುಪ್ಪಿ, ಜೆಇ ಅಜರ ನಾಟೀಕಾರ, ಪುರಸಭೆ ಮಾಜಿ ಉಪಾಧ್ಯಕ್ಷರಾದ ರಾಜಣ್ಣಿ ನಾರಾಯಣಕರ, ಸಂದೀಪ ಚೌರ, ಎಂ.ಎ.ಖತೀಬ, ಕೆಡಿಪಿ ಸದಸ್ಯೆ ಮಹಾನಂದಾ ಬಮ್ಮಣ್ಣಿ, ಜಯಶ್ರೀ ಹದನೂರ, ಸುನಂದಾ ಯಂಪೂರೆ, ಮೋಶಿನ ಬಿಳಗಿ, ಅಂಬ್ರಿಶ ಚೌಗಲೆ, ಗುತ್ತಿಗೆದಾರ ನಾರಾಯಣ ಕುಲಕಣೀರ್, ಪ್ರತಿಭಾ ಚಳ್ಳಗಿ, ಶಶಿಕಲಾ ಅಂಗಡಿ, ರಾಜು ಮೋರಟಗಿ, ರಾಮು ಮೋರಟಗಿ, ಯಂಕಪ್ಪ ಯಾದವ, ಶಾಂತೂ ರಾಣಾಗೋಳ, ಜಿಲಾನಿ ನಾಟೀಕಾರ ಸೇರಿದಂತೆ ಅನೇಕರಿದ್ದರು.