ಲೋಕದರ್ಶನ ವರದಿ
ಶಿರಸಂಗಿ 14: ಸ್ಥಳೀಯ ಲಿಂಗರಾಜರ 158 ನೇ ಜಯಂತಿಯನ್ನು ಗ್ರಾಮದಲ್ಲಿ ಗುರುವಾರ ಅದ್ಧೂರಿಯಾಗಿ ಆಚರಿಸಲಾಯಿತು. ಲಿಂಗರಾಜ ಸ್ಮಾರಕ ಶಿಕ್ಷಣ ಸಮಿತಿ, ಲಿಂಗರಾಜ ಉತ್ಸವ ಸಮಿತಿ ಸೇರಿದಂತೆ ಗ್ರಾಮಸ್ಥರ ಆಶ್ರಯದಲ್ಲಿ ಜರುಗಿದ ಜಯಂತಿಯಲ್ಲಿ ಲಿಂಗರಾಜ ಪ್ರೌಢ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿಯವರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಲಿಂಗರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಲಿಂಗರಾಜ ಪ್ರೌಢಶಾಲೆಯಿಂದ ಕೋಟೆಯತನ ಲಿಂಗರಾಜರ ಭಾವಚಿತ್ರ ಮೆರವಣಿಗೆ ಜರುಗಿತು. ವಿಶ್ವಶಕ್ತಿ ಆದರ್ಶ ವಿದ್ಯಾಲಯದ ವಿದ್ಯಾಥರ್ಿನಿ ಕುಮಾರಿ ಲಕ್ಷ್ಮೀ ಸುಕಂದ ಲಿಂಗರಾಜರ ವೇಷ ಭೂಷಣಧರಿಸಿ ಜಯಂತಿಗೆ ಮೆರಗುತಂದಳು. ಶಿವಾಜಿ ಶಿಂಧೆ, ಮಾಬುಸುಭಾನಿ ಯಲಿಗಾರ, ಎಸ್.ಎಮ್. ಪಾಟೀಲ, ವಿ.ವಿ. ವೀರನಗೌಡ್ರ, ಕೆ.ಐ. ಕಲಾಲ, ಜಿ.ಟಿ. ಧಡೆಮ್ಮ,ನವರ, ಮಲ್ಲಿಕಾಜರ್ುನ ತೊರಣಗಟ್ಟಿ, ಪ್ರಭು ಅಣ್ಣಿಗೇರಿ, ಎಸ್.ಎಸ್. ಗುಳ್ಳ, ಎಮ್.ಎಸ್. ತೊರಗಲ್, ಕಾಂತೇಶ ಪಟ್ಟೇದ, ಬಿ.ಪಿ. ಗಾಣಗೇರ ಸೇರಿದಂತೆ ಮತ್ತಿತರು ಇದ್ದರು.