ಲೋಕದರ್ಶನವರದಿ
ರಾಣೆಬೆನ್ನೂರು: ಭಾರತ ಸರಕಾರದ ಅಂಚೆ ಜೀವ ವೀಮೆಯು ಬಹು ಪುರಾತನವಾದ ಹಾಗೂ ಭಾರತದ ಪ್ರಥಮ ವಿಮೆಯಾಗಿದೆ, ರಾಷ್ಟ್ರಪತಿಯವರ ಭದ್ರತೆ ಹೊಂದಿರುವ ಈ ಜೀವ ವಿಮೆಯು ಕಡಿಮೆ ಕಂತಿನ ಮತ್ತು ಹೆಚ್ಚು ಲಾಭ ನೀಡುವ ಈ ಯೋಜನೆಯನ್ನು ಎಲ್ಲ ಕೇಂದ್ರ, ರಾಜ್ಯ ಸರಕಾರಗಳ, ಅರೆ ಸಕರ್ಾರಿ ನೌಕರರು ಸೇರಿದಂತೆ ಇದೀಗ ವೃತ್ತಿಪರರಾದ ಇಂಜನೀಯರ, ವೈದ್ಯರು, ಚಾರ್ಟಡ್ ಅಕೌಂಟನವರು, ವಕೀಲರುಗಳು ಸಹ ಪಾಲಸಿ ಮಾಡಿಸಬಹುದು ಎಂದು ಧಾರವಾಡ ಅಂಚೆ ವಲಯದ ಅಭಿವೃದ್ದಿ ಅಧಿಕಾರಿ ಮಹಾದೇವ ಕಿತ್ತೂರ ಹೇಳಿದರು.
ಸ್ಥಳೀಯ ವಕೀಲರ ಸಂಘದಲ್ಲಿ ಏರ್ಪಡಿಸಿದ್ದ ಭಾರತೀಯ ಅಂಚೆ ಜೀವ ವಿಮೆ ಕುರಿತಾದ ಮಾಹಿತಿ ಮತ್ತು ಜಾಗೃತಿ ಕಾಯರ್ಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
19 ರಿಂದ 55 ವಯೋಮಾನದವರೆಲ್ಲರೂ ಈ ವಿಮೆ ಯೋಜನೆಯನ್ನು ಮಾಡಿಸಬಹುದು, ಅಜೀವ ವಿಮೆ, ನಿಗದಿತ ಅವಧಿಯ ವಿಮೆ, ಪರಿವರ್ತನೆಯ ಅಜೀವ ವಿಮೆ, ನಿರೀಕ್ಷಿತ ನಿಗದೀತ ಅವಧಿ ವಿಮೆ, ಯುಗಳ ವಿಮೆ, ಬಾಲ ವಿಮೆ ಯೋಜನೆಗಳನ್ನು ಜಾರಿಗೊಳಿಸಿದ್ದು, ಇವುಗಳಿಗೆ ಬೋನಸ್ ದರಗಳನ್ನು ಸಹ ನಿಗಧಿಪಡಿಸಲಾಗಿದೆ ಎಂದವರು ವಿವರಿಸಿದರು.
ಇತರ ಜೀವ ವಿಮೆ ಪಾಲಸಿಗಳಿಗೆ ಹೋಲಿಸಿದರೆ ಈ ಅಂಚೆ ಜೀವ ವಿಮೆಯು ಕಡಿಮೆ ಕಂತಿನ ಜೊತೆಗೆ ಅಧಿಕ ಲಾಭದ ಮೂಲಕ ಹೆಚ್ಚಿನ ಭದ್ರತೆ ಇದೆ.ಸುಲಭ ಕಂತು ಪಾವತಿ, ಸಾಲ ಸೌಲಭ್ಯ, ಸರಳ ಸೇವೆ, ಆದಾಯ ತೆರಿಗೆ ವಿನಾಯಿತಿ, ಜೀವ ವಿಮೆ ಸೌಲಭ್ಯಗಳು ದೊರೆಯಲಿವೆ, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಇಲಾಖೆಯನ್ನು ಸಂಪಕರ್ಿಸಬಹುದು ಎಂದು ಕಿತ್ತೂರ ವಿವರಿಸಿದರು.
ವಕೀಲರ ಸಂಘದ ಅಧ್ಯಕ್ಷ ಮಂಜುನಾಥ ಗೌಡಪ್ಪನವರ, ವಿಠಲ್ ಪುಠಾಣಿಕರ, ಸಂಜೀವರೆಡ್ಡಿ ಕೊಪ್ಪದ, ಹಾವೇರಿ ಅಂಚೆ ಎಸ್ಪಿ ರಮೇಶ ಪ್ರಭು, ಸ್ಥಳೀಯ ಅಂಚೆ ನಿರೀಕ್ಷಕ ಆನಂದ ವಂದಲ, ಶಾಂತಪ್ಪ ಮಡಿವಾಳರ ಸೇರಿದಂತೆ ವಕೀಲರುಗಳು, ಅಂಚೆ ಸಿಬ್ಬಂದಿಗಳು ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಅಂಚೆ ಜೀವ ವಿಮೆಯಯ ಕುರಿತು ಕರಪತ್ರಗಳನ್ನು ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.