ಮಾಸ್ಕೋ 17: ರಷ್ಯಾದ ಪರಮಾಣು, ಜೈವಿಕ ಮತ್ತು ರಾಸಾಯನಿಕ ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್ ಅವರು ಇಂದು ಬೆಳಿಗ್ಗೆ ವಸತಿ ಅಪಾರ್ಟ್ಮೆಂಟ್ ಬ್ಲಾಕ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟಗೊಂಡು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತನಿಖಾ ಸಮಿತಿ ಮಾಹಿತಿ ನೀಡಿದೆ.
ಇಗೊರ್ ಕಿರಿಲ್ಲೋವ್ ಅವರ ಸಹಾಯಕ ಕೂಡ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮಿತಿಯ ವಕ್ತಾರ ಸ್ವೆಟ್ಲಾನಾ ಪೆಟ್ರೆಂಕೊ ಅವರು ರಷ್ಯಾದ ತನಿಖಾ ಅಧಿಕಾರಿಗಳು ಇಬ್ಬರ ಸಾವಿಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿದ್ದಾರೆ.
ತನಿಖಾಧಿಕಾರಿಗಳು, ಫೋರೆನ್ಸಿಕ್ ತಜ್ಞರು ಮತ್ತು ಕಾರ್ಯಾಚರಣೆಯ ಸೇವೆಗಳು ಘಟನಾ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ, ಈ ಕೃತ್ಯದ ಸುತ್ತಲಿನ ಎಲ್ಲಾ ಘಟನಾವಳಿಗಳನ್ನು ತಿಳಿಯಲು ತನಿಖೆ ಮತ್ತು ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಪೆಟ್ರೆಂಕೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.