ಕಳಪೆ ಬೀಜ, ರಸಗೊಬ್ಬರ ಮಾರಾಟ ಮಾಡಿದರೆ ಲೈಸನ್ಸ್ ರದ್ದು

ಹಾವೇರಿ:10:  ಮುಂಗಾರು ಬಿತ್ತನೆಗೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ದಾಸ್ತಾನುಮಾಡಿಕೊಳ್ಳಬೇಕು. ಕಳಪೆ ಬೀಜ, ಗೊಬ್ಬರ ಮಾರಾಟ ಮಾಡಿದರೆ ಲೈಸನ್ಸ್ ರದ್ದುಪಡಿಸಬೇಕು. ಹೊರ ರಾಜ್ಯ, ಹೊರ ಜಿಲ್ಲೆಗಳಿಗೆ ಕೃಷಿ ಪರಿಕರಗಳು, ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಗ್ರೀನ್ ಪಾಸ್ ನೀಡಬೇಕು. ಕೋವಿಡ್ ನೆಪಹೇಳಿ ಯಾವುದೇ ನಿರ್ಭಂಧ ವಿಧಿಸಬಾರದು ಎಂದು ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ತಾಕೀತು ಮಾಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮುಂಗಾರು ಹಂಗಾಮಿನ ಕೃಷಿ ಬಿತ್ತನೆ ಪೂರ್ವ ಸಿದ್ಧತೆ ಕುರಿತು ಅಧಿಕಾರಿಗಳ ಹಾಗೂ ಕೃಷಿ ಬೀಜ, ಗೊಬ್ಬರ, ಉಪಕರಣಗಳ ವಿತರಕರು,ಕೃಷಿ ಉತ್ಪನ್ನ ಮಾರಾಟಗಾರರ ಸಭೆ ನಡೆಸಿದರು.

ಮುಂದಿನ ವಾರದಿಂದ ಮುಂಗಾರು ಆರಂಭವಾಗಲಿದೆ. ಕೃಷಿ ಬಿತ್ತನೆ, ಕೋಯ್ಲು, ಕೃಷಿ ತೋಟಗಾರಿಕೆ ಉತ್ಪನ್ನಗಳ ಮಾರಾಟ, ಕೃಷಿ ಉಪಕರಣಗಳ ದುರಸ್ತಿ, ಮಾರಾಟ, ಕೃಷಿಗೆ ಬೇಕಾದ ಇಂಧನ ಹಾಗೂ ಪೈಪ್ಗಳು ಸೇರಿದಂತೆ ಯಾವುದೇ ನಿರ್ಭಂಧ ಹೇರಬಾರದು. ಮುಕ್ತವಾದ ಅವಕಾಶಗಳನ್ನು ಕಲ್ಪಿಸಬೇಕು. ಕೃಷಿ ಚಟುವಟಿಕೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಕೃಷಿ ಚಟುವಟಿಕೆಯ ಸಂದರ್ಭದಲ್ಲಿ ಕೃಷಿ ತೋಟಗಾರಿಕೆ ಅಧಿಕಾರಿಗಳು ಈ ಕುರಿತಂತೆ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.

ಕಳಪೆ ಬಿತ್ತನೆ ಬೀಜ, ಗೊಬ್ಬರ ಮಾರಾಟವಾಗದಂತೆ ಎಚ್ಚರವಹಿಸಬೇಕು. ಕೃಷಿ ವಿಜಿಲೆನ್ಸಿ ಅಧಿಕಾರಿಗಳು ಅನಿರೀಕ್ಷಿತವಾಗಿ ಅಂಗಡಿಗಳ ತಪಾಸಣೆ ಮಾಡಬೇಕು. ಒಂದೊಮ್ಮೆ ಕಳಪೆ ಎಂದು ಕಂಡುಬಂದರೆ ಯಾವುದೇ ಮುಲಾಜು ಇಲ್ಲದೆ ಕಠಿಣ ಕ್ರಮಕೈಗೊಳ್ಳಬೇಕು. ಕಳಪೆ ಬೀಜ, ಗೊಬ್ಬರದಿಂದ ರೈತ ಆತ್ಮಹತ್ಯೆಮಾಡಿಕೊಂಡರೆ ಅದು ಕೊಲೆ ಮಾಡಿದಂತೆ. ಇದನ್ನು ಎಚ್ಚರಿಕೆಯಿಂದ ಗಮನಿಸಿ ಕಠಿಣ ಕ್ರಮಕೈಗೊಳ್ಳಿ. ಪರಿಸ್ಥಿತಿಯ ದುರ್ಬಲ ಪಡೆದುಕೊಂಡು ಎಂ.ಆರ್.ಪಿ. ದರಕ್ಕಿಂತ ಹೆಚ್ಚು ದರದಲ್ಲಿ ಬೀಜಗೊಬ್ಬರ ಮಾರಾಟ ಮಾಡಿದರೆ ಅಂಗಡಿಯ ಪರವಾನಿಗೆ ರದ್ದುಪಡಿಸುವಂತೆ ಸೂಚನೆ ನೀಡಿದರು.

ಗೊಬ್ಬರ ಬೀಜಕ್ಕಾಗಿ ರೈತರು ಅಂಗಡಿ ಮುಂದೆ ಸಾಲು ನಿಲ್ಲಬಾರದು. ಸಂಕಷ್ಟದ ಸಂದರ್ಭದಲ್ಲಿ ಬೀಜ ಗೊಬ್ಬರಕ್ಕೆ ರೈತರು ಸಮಸ್ಯೆ ಎದುರಿಸಬಾರದು. ರೈತರ ಬೇಡಿಕೆಯ ಬೀಜ ಗೊಬ್ಬರಗಳನ್ನು ಇಂದಿನಿಂದಲೇ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿಕೊಳ್ಳಬೇಕು. ಬೀಜ, ಗೊಬ್ಬರ, ಹಳೆಯ ದಾಸ್ತಾನು ತರಿಸಿಕೊಳ್ಳಬಾರದು. ಇತ್ತೀಚಿನ ಉತ್ಪಾದನೆಯ ಹೊಸ ದಾಸ್ತಾನನ್ನು ತರಿಸಿ ರೈತರಿಗೆ ವಿತರಿಸುವಂತೆ ಸೂಚನೆ ನೀಡಿದರು.

ಎ.ಪಿ.ಎಂ.ಸಿ. ಮಾರುಕಟ್ಟೆಗಳನ್ನು ತೆರೆದಿಡಬೇಕು. ಬೀಜ, ಗೊಬ್ಬರ, ಔಷಧ ಅಂಗಡಿ ತೆರೆಯಲು ಸಮುಯ ನಿಗಧಿಮಾಡಬಾರದು.  ರೈತರ ಕೊಳವೆಬಾವಿ ಕೊರೆಸಲು ಲಾರಿಗಳಿಗೆ ಅನುಮತಿ ನೀಡಬೇಕು ಎಂದು ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ರೈತರು  ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಜಿಲ್ಲೆಯ ಮಾವಿನ ಹಣ್ಣನ್ನು ಸಾಗಾಣಿಕೆ ಮಾಡಲಾಗುತ್ತದೆ. ಆ ರಾಜ್ಯದ ಮಾವು ಪ್ರೊಸೆಸಿಂಗ್ ಯುನಿಟ್ಗಳನ್ನು ಆರಂಭಿಸುವಂತೆ ಈ ಎರಡು ರಾಜ್ಯಗಳ ಸಕರ್ಾರದೊಂದಿಗೆ ಮಾತುಕತೆ ನಡೆಸಲು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು ತಕ್ಷಣ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. 

 ಸಭೆಯಲ್ಲಿ ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸನಗೌಡ ದೇಸಾಯಿ ಅವರು ಬೆಳೆವಿಮೆ, ಬೆಳೆ ಪರಿಹಾರ, ಬಿತ್ತನೆ ಬೀಜ ಗೊಬ್ಬರಗಳ ದಾಸ್ತಾನುಗಳು, ಕೃಷಿಗೆ ನರೇಗಾ ನೆರವು, ಕೃಷಿ ಉತ್ಪನ್ನಗಳ ಮಾರಾಟ ಕುರಿತಂತೆ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದು ಅಧಿಕಾರಿಗಳು ಈ ಸಮಸ್ಯೆಗಳೀಗೆ ತ್ವರಿತವಾಗಿ ಸ್ಪಂದಿಸಲು ಸೂಚಿಸಿದರು.

 ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿದರ್ೆಶಕ ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿದರ್ೆಶಕ ಪ್ರದೀಪ್, ರೇಷ್ಮೆ ಇಲಾಖೆ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಕೋವಿಡ್ ಹಿನ್ನೆಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಮುಂಗಾರು ಬಿತ್ತನೆಯ ಸಿದ್ಧತೆ ಕುರಿತಂತೆ ಸಭೆಗೆ ಮಾಹಿತಿ ನೀಡಿದರು.

ಜಿ.ಪಂ.ಉಪಾಧ್ಯಕ್ಷೆ ಶ್ರೀಮತಿ ಗಿರಿಜವ್ವ ಬ್ಯಾಲದಹಳ್ಳಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಪೊಲೀಸ್ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ, ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ಪಂಚಾಯತ್ ಸದಸ್ಯರಾದ ವಿರುಪಾಕ್ಷಪ್ಪ ಕಡ್ಲಿ, ಶ್ರೀಮತಿ  ಚವ್ಹಾಣ ಇತರರು ಉಪಸ್ಥಿತರಿದ್ದರು.