ಲೋಕದರ್ಶನ ವರದಿ
ಯಲಬುರ್ಗಾ: ಮುಸ್ಲಿಂ ಸಮಾಜದಲ್ಲಿ ಜನಿಸಿದ ಪ್ರತಿಯೊಬ್ಬರು ಸಹಿತ ಮೊಹಮ್ಮದ್ ಪೈಗಂಬರ್ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವ ಅವಶ್ಯಕತೆ ತುಂಬಾ ಇದೆ ಎಂದು ಸಮಾಜದ ಮುಖಂಡ ಮೌಲಾಹುಸೇನ ಬುಲ್ಡಿಯಾರ ಹೇಳಿದರು.
ಪಟ್ಟಣದಲ್ಲಿ ಮುಸ್ಲಿಂ ಸಮಾಜದಿಂದ ಏರ್ಪಡಿಸಿದ್ದ ಪ್ರವಾದಿ ಮೊಹಮ್ಮದ್ ಪೈಗಂಬರರವರ ಜಯಂತ್ಯೋತ್ಸವ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರವಾದಿಯವರು ಹೇಳಿದಂತೆ ಸತ್ಯ, ನಿಷ್ಠೆ, ಬದ್ದತೆ, ಸಹಜೀವನ, ಸಹಬಾಳ್ವೆಯನ್ನು ಮಾಡಲು ಮುಂದಾಗಬೇಕು ಹಾಗೂ ಯಾವುದೇ ಸಂದರ್ಭದಲ್ಲಿಯೂ ಸಹಿತ ಯಾವ ಧರ್ಮವನ್ನು ದ್ವೇಷಿಸುವಂತವರಾಗಬಾರದು ಎಲ್ಲಾ ಧರ್ಮಗಳು ಒಂದೆ ಎನ್ನುವ ಮನೋಭಾವನೆ ಎಲ್ಲರಲ್ಲಿಯೂ ಮೂಡಬೇಕು ಅದರಂತೆ ಸಮಾಜದಲ್ಲಿರುವ ಎಲ್ಲಾ ಜನಾಂಗದವರೊಂದಿಗೆ ಸಹಬಾಳ್ವೆ ಮಾಡಬೇಕು ಅದರಲ್ಲಿ ನಮ್ಮ ತಾಲೂಕಿನಲ್ಲಿ ಹಿಂದೂ ಮುಸ್ಲಿಂಮರು ಅತ್ಯಂತ ಹೊಂದಾಣಿಕೆಯಿಂದ ಜೀವನ ಸಾಗಿಸುತ್ತಿದ್ದೇವೆ ಇಲ್ಲಿ ಎಲ್ಲರೂ ಒಂದೆ ಎನ್ನುವ ಭಾವನೆ ಮೂಡಿದೆ ಅದು ಮುಂದಿನ ತಲೆಮಾರಿಗೂ ತಲುಪುವಂತೆ ಮಾಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮುಸ್ಲಿಂ ಸಮಾಜದ ಅದ್ಯಕ್ಷ ಮಾಬುಸಾಬ ಮಕಾಂದಾರ ಮಾತನಾಡಿ ನಮ್ಮ ಸಮಾಜ ಬಾಂದವರು ಅತ್ಯಂತ ಶಾಂತಿ ಪ್ರೀಯರು ನಾವೇಲ್ಲಾ ಭಾರತೀಯರು ಎನ್ನುವ ಹೆಮ್ಮೆ ನಮ್ಮಲ್ಲಿದೆ ಅದರಂತೆ ಉತ್ತಮ ಕಾರ್ಯಗಳನ್ನು ಮಾಡುವ ಮುಖಾಂತರ ನಾವು ಇತರರಿಗೆ ಮಾರ್ಗದರ್ಶನ ಮಾಡೋಣ ನಾವು ಕಷ್ಟ ಪಟ್ಟು ದುಡಿಮೆ ಮಾಡಿ ಬಂದ ಹಣದಲ್ಲಿ ಬಡತನದಿಂದ ಇರುವಂತಹ ಕುಟುಂಬಗಳಿಗೆ ಸಹಾಯ ಮಾಡೋಣ ಅದರಿಂದ ನಮ್ಮ ಧರ್ಮಕ್ಕೆ ಗೌರವ ನೀಡಿದಂತಾಗುತ್ತದೆ ಎಂದರು.
ಪಟ್ಟಣದ ಮಸಿದಿಯಿಂದ ಹೋರಟ ಪೈಗಂಬರರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಧರ್ಮಗುರು ಹಾಪಿಜ್ ಶಮೀದ್ ರಜಾಕ್, ಪಪಂ ಸದಸ್ಯ ರೀಯಾಜ್ ಖಾಜಿ, ಮುಖಂಡರಾದ ಅಖ್ತರಸಾಬ ಖಾಜಿ, ಇಮಾಮ್ ಸಂಕನೂರ, ಎಂ ಎಪ್ ನಧಾಪ್, ಮೈಬೂಸಾಬ ಕನಕಗಿರಿ, ಶ್ಯಾಮೀದಸಾಬ ಮುಲ್ಲಾ, ಮರ್ದನಸಾಬ ಮಲಕಸಮುದ್ರ, ಮೊಹಮ್ಮದ್ ಯೂಸುಪ್ ರಾಯಚೂರು, ಗೌಸುಸಾಬ ಕನಕಗಿರಿ, ಅಖ್ತರಸಾಬ ವಣಗೇರಿ, ಸೇರಿದಂತೆ ಇನ್ನಿತರರು ಹಾಜರಿದ್ದರು.