ಬೆಳಗಾವಿ : ಮುಂಬಯಿ ಕನರ್ಾಟಕದ ಪ್ರತಿಷ್ಠಿತ ಯೋಜನೆಯಾದ ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕಾಗಿ ಅವಶ್ಯಕವಿರುವ 500 ಹೆಕ್ಟೇರ್ ಅರಣ್ಯ ಪ್ರದೇಶದ ಸಂಬಂಧ ಹೊಸ ಪ್ರಸ್ತಾವನೆಯನ್ನು ಆನ್ಲೈನ್ ಮೂಲಕವೇ ಸಲ್ಲಿಸುವಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ಜುಲೈ 3ರಂದು ಕನರ್ಾಟಕಕ್ಕೆ ಬರೆದಿರುವ ಪತ್ರವು ಸಾಕಷ್ಟು ಸುದ್ದಿ ಮಾಡಿದೆ.
2003ರಲ್ಲಿ ರಾಜ್ಯವು ಸಲ್ಲಿಸಿದ್ದ ಪ್ರಸ್ತಾವನೆಯು ಸದ್ಯ ಅಪ್ರಸ್ತುತ. 2014ರಲ್ಲಿ ಅರಣ್ಯ ಕಾಯ್ದೆಗೆ ಸಾಕಷ್ಟು ತಿದ್ದುಪಡಿಯಾಗಿವೆ. ಕಳಸಾ ಬಂಡೂರಿ ಪ್ರದೇಶದಲ್ಲಿಯ ಅರಣ್ಯದ ಸ್ವರೂಪದಲ್ಲೂ ಸಾಕಷ್ಟು ಬದಲಾವಣೆಯಾಗಿವೆ. ಈ ಹಿನ್ನೆಲೆಯಲ್ಲಿ ಹೊಸ ಪ್ರಸ್ತಾವನೆಯೇ ಸೂಕ್ತ. ಕಳಸಾ ಬಂಡೂರಿ ಯೋಜನಾ ಪ್ರದೇಶದಲ್ಲಿ, ಯೋಜನಾ ಅನುಷ್ಠಾನದಿಂದಾಗಿ, ಸುಮಾರು 500 ಹೆಕ್ಟೇರ್ ಅರಣ್ಯ ಮುಳುಗಡೆಯಾಗಲಿದ್ದು ಇದಕ್ಕೆ ಪಯರ್ಾಯವಾಗಿ ಬೆಳಗಾವಿ ಜಿಲ್ಲೆಯಲ್ಲಿಯ ಕಂದಾಯ ಭೂಮಿಯನ್ನಾದರೂ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಇಲ್ಲವೇ ಅರಣ್ಯ ಭೂಮಿಯ ಮೌಲ್ಯವನ್ನು ಕೇಂದ್ರಕ್ಕೆ ಪಾವತಿಸಬೇಕು.
ಕುಡಿಯುವ ನೀರಿನ ಯೋಜನೆಯಾಗಿದ್ದರಿಂದ ಪರಿಸರ ಇಲಾಖೆಯ ಅನುಮತಿ ಅವಶ್ಯವಿಲ್ಲ. ಆದರೆ ಅರಣ್ಯ ಹಾಗೂ ವನ್ಯಜೀವಿ ಇಲಾಖೆಗಳ ಅನುಮತಿ ಅವಶ್ಯವೆಂದು ಕೇಂದ್ರ ಸರಕಾರ ಕಳೆದ ವರ್ಷವೇ ಸ್ಪಷ್ಟಪಡಿಸಿದೆ. ನ್ಯಾ.ಮೂ. ಜೆ.ಎಂ.ಪಾಂಚಾಲ ನೇತೃತ್ವದ ನ್ಯಾಯಮಂಡಳಿಯು ತೀಪರ್ು ನೀಡಿ ಮುಂದಿನ ಅಗಷ್ಟ 14ಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತವೆ. ಮಹಾದಾಯಿ ನದಿಯಲ್ಲಿಯ ಒಟ್ಟು 188 ಟಿಎಮ್ಸಿ ನೀರಿನ ಪೈಕಿ ಕನರ್ಾಟಕಕ್ಕೆ 13.42, ಗೋವೆಗೆ 24 ಮತ್ತು ಮಹಾರಾಷ್ಟ್ರಕ್ಕೆ 1.33 ಟಿಎಮ್ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಕಳಸಾ ನಾಲೆಯಿಂದ ಹಂಚಿಕೆ ಮಾಡಲಾದ 1.72 ಟಿಎಮ್ಸಿ ನೀರನ್ನು ಸದ್ಯ ಕನರ್ಾಟಕ ಬಳಸಿಕೊಳ್ಳಬಹುದಾಗಿದೆ.
ಬಂಡೂರಿ ನಾಲೆಯಿಂದ ಹಂಚಿಕೆಯಾದ 2.18 ಟಿಎಮ್ಸಿ ನೀರಿನ ಬಳಕೆ ಇನ್ನೂ ದೂರದ ಮಾತು. ಕಳಸಾ ನಾಲೆಯ 1.72 ಟಿಎಮ್ಸಿ ನೀರನ್ನು ಸದ್ಯ ಬಳಸಿಕೊಳ್ಳಬೇಕಾದರೆ ಮೊದಲು ಕೇಂದ್ರವು, ನ್ಯಾಯಮಂಡಳಿಯ ಆದೇಶದಂತೆ, "ಮಹಾದಾಯಿ ಜಲ ನಿರ್ವಹಣೆ ಪ್ರಾಧಿಕಾರ" ರಚಿಸಬೇಕಾಗುತ್ತದೆ. ರಾಜ್ಯ ಸರಕಾರವು ಕಳಸಾ ಬಂಡೂರಿ ತಿರುವು ಯೋಜನೆಯ ಪರಿಷೃತ" ಸಮಗ್ರ ಯೋಜನಾ ವರದಿ" (ಡಿಪಿಆರ್)ಯನ್ನು ಪ್ರಾಧಿಕಾರದಿಂದ ಅಥವಾ ಕೇಂದ್ರ ಸರಕಾರಕ್ಕೆ ಸಲ್ಲಿಸಿ ಒಪ್ಪಿಗೆ ಪಡೆಯಬೇಕೆಂದು ನ್ಯಾಯಮಂಡಳಿಯು ತನ್ನ ತೀಪರ್ಿನ 2704ನೇ ಪುಟದಲ್ಲಿ ಸ್ಪಷ್ಟಪಡಿಸಿದೆ.
ರಾಜ್ಯ ಸರಕಾರವು ಕಳೆದ ಜೂನ್ ತಿಂಗಳಲ್ಲಿ 1600 ಕೋಟಿ ರೂ.ಗಳ ಪರಿಷ್ಕೃತ ಡಿಪಿಆರ್ನ್ನು ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯುಸಿ) ಸಲ್ಲಿಸಿದೆ. ಅನುಮತಿಗಾಗಿ ಕಾಯುತ್ತಿದೆ. ಈ ಮಧ್ಯೆ ಜಲಸಂಪನ್ಮೂಲ ಖಾತೆಯ ಸಚಿವ ರಮೇಶ ಜಾರಕಿಹೊಳಿಯವರ ಸತತ ಪ್ರಯತ್ನದಿಂದಾಗಿ ತಿರುವು ಯೋಜನೆಗೆ 500 ಕೋಟಿ ರೂ. ಮಂಜೂರಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಎರಡು ಗೋಡೆಗಳನ್ನು 2015ರಲ್ಲಿಯೇ ನಿಮರ್ಿಸಲಾಗಿದೆ. 18 ಮತ್ತು 8 ಮೀಟರ್ ಎತ್ತರದ ಈ ಗೋಡೆಗಳನ್ನು ಒಡೆದು ಡೆಲ್ಟಾ ರೆಸಾರ್ಟ ಮತ್ತು ಚೋಲರ್ಾ ಬಳಿ ಎರಡು ಬಂಡ್ ಕಟ್ಟಿದರೆ ಕಳಸಾ ನಾಲೆಯ ಒಂದೂವರೆ ಟಿಎಮ್ಸಿ ನೀರು ಮಲಪ್ರಭೆಯ ಒಡಲನ್ನು ಸೇರುತ್ತದೆ. ಆದರೆ ಕೇಂದ್ರವು ರಚಿಸುವ "ಮಹಾದಾಯಿ ಜಲ ನಿರ್ವಹಣಾ ಪ್ರಾಧಿಕಾರ" ದಿಂದ ಅನುಮತಿ ಬೇಕೇ ಬೇಕು. ಆದ್ದರಿಂದ ಈ ಪ್ರಾಧಿಕಾರದ ರಚನೆಗೆ ರಾಜ್ಯ ಸರಕಾರವು ಕೇಂದ್ರದ ಬೆನ್ನು ಬೀಳಬೇಕು.
ಪಾಂಚಾಲ ನ್ಯಾಯ ಮಂಡಳಿಯ ತೀಪರ್ಿನಿಂದ ತಮಗೆ ಅನ್ಯಾಯವಾಗಿದೆಯೆಂದು ಕನರ್ಾಟಕ, ಗೋವೆ ಮತ್ತು ಮಹಾರಾಷ್ಟ್ರ ರಾಜ್ಯಗಳು ಸವರ್ೊನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿವೆ. ವಾಸ್ತವವಾಗಿ ಕನರ್ಾಟಕ ಕೇಳಿದ್ದು, 36 ಟಿಎಮ್ಸಿ. ಆದರೆ ಸಿಕ್ಕಿದ್ದು 13.42. ಗೋವೆಯು 9 ಟಿಎಮ್ಸಿಯನ್ನು ಬಳಸಿಕೊಳ್ಳುತ್ತಿತ್ತು. ಆ ರಾಜ್ಯಕ್ಕೆ ಮತ್ತೆ 24 ಟಿಎಮ್ಸಿ ಲಭಿಸಿದೆ. ಮಹಾರಾಷ್ಟಕ್ಕೆ 1.33 ಟಿಎಮ್ಸಿ ಹಂಚಿಕೆ ಮಾಡಲಾಗಿದೆ. ಮಹಾದಾಯಿ ನದಿಯಲ್ಲಿಯ ಒಟ್ಟು 188 ಟಿಎಮ್ಸಿ ಪೈಕಿ ಇನ್ನೂ ಸುಮಾರು 148 ಟಿಎಮ್ಸಿ ಹಂಚಿಕೆಯಾಗಬೇಕಾಗಿದೆ.
ಸಚಿವ ರಮೇಶ ಜಾರಕಿಹೊಳಿ ಅವರು ಖಾತೆಯನ್ನು ವಹಿಸಿಕೊಂಡ ನಂತರ ರಾಜ್ಯದ ಪ್ರತಿಯೊಂದು ನೀರಾವರಿ ಯೋಜನಾ ಪ್ರದೇಶಕ್ಕೂ ಭೆಟ್ಟಿ ನೀಡಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದಾರೆ. ಕೇವಲ ಅಧಿಕಾರಿಗಳನ್ನು ಅವಲಂಬಿಸದೇ ಸ್ವತಃ ಕೇಂದ್ರ ಸರಕಾರದ ಸಚಿವರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಮಹಾದಾಯಿ ಯೋಜನೆ ಸಂಬಂಧ ರಸ್ತೆಯ ಮೂಲಕವಾದರೂ ದಿಲ್ಲಿಗೆ ಹೋಗಿ ಕೇಂದ್ರದ ಮೇಲೆ ಒತ್ತಡ ತರಲೂ ನಾನು ಸಿದ್ಧ' ಎಂಬ ಅವರ ಮಾತು ಅವರಿಗಿರುವ ಬದ್ಧತೆಯನ್ನು ತೋರಿಸುತ್ತದೆ. ಆದಷ್ಟು ಬೇಗ ಕೇಂದ್ರವು ಪ್ರಾಧಿಕಾರ ರಚನೆ ಮಾಡಬೇಕು. ಕನರ್ಾಟಕಕ್ಕೆ ನ್ಯಾಯ ಸಿಗಬೇಕು. ನೀರಾವರಿ ಸಚಿವರ ಪ್ರಯತ್ನಕ್ಕೆ ಕೇಂದ್ರದಲ್ಲಿರುವ ರಾಜ್ಯದ ಮಂತ್ರಿಗಳು ಇದಕ್ಕೆ ಸಾಥ್ ಕೊಡಬೇಕು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಒತ್ತಾಯಿಸಿದ್ದಾರೆ.