ರಾಜಕೀಯ ಪ್ರಜ್ಞೆ ಯುವಕರಲ್ಲಿ ಜಾಗೃತಿಗೊಳ್ಳಲಿ

ಬಾಗಲಕೋಟೆ: ಪ್ರತಿಯೊಬ್ಬರು ತಮ್ಮ ಹಕ್ಕು ಹಾಗೂ ಕರ್ತವ್ಯಗಳನ್ನು ಅರಿತುಕೊಂಡು ತಮ್ಮನ್ನಾಳುವ ನಾಯಕರು ಯಾವ ತೆರನಾಗಿರಬೇಕು ಎಂದು ನಿರ್ಧರಿಸುವ ಹಕ್ಕು ಪ್ರತಿಯೊಬ್ಬ ಪ್ರಜೆಯದ್ದಾಗಿದ್ದು ಅದರಲ್ಲೂ ಯುವಕರು ಭವಿಷ್ಯದ ನಾಗರಿಕರಾಗಿದ್ದು ರಾಜಕೀಯ ಕಾರ್ಯಕಲಾಪಗಳನ್ನು ಅರಿತುಕೊಳ್ಳುವಂತಾಗಬೇಕೆಂದು ಬಿ.ವಿ.ವ ಸಂಘದ ಗೌರವ ಕಾರ್ಯದಶರ್ಿ ಮಹೇಶ ಅಥಣಿ ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ   ಹಾಗೂ ಸಂಸದೀಯ ವ್ಯವಹಾರಗಳ ಶಾಸನವನ್ನು ವಿದ್ಯಾಗಿರಿಯ ಬಿವಿವಿ ಸಂಘದ ಕಲಾ, ವಿಜ್ಞಾನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಯುವ ಸಂಸತ್ ಅಣಕು ಸ್ಪಧರ್ೆಯನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಕರಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಕಾರ್ಯವಾಗಬೇಕು. ಇಂತಹ ಸಂಸತ್ನ ಅಣಕು ಸ್ಪಧರ್ೆಯನ್ನು ಏರ್ಪಡಿಸಿದ್ದು ಉತ್ತಮ ಕಾರ್ಯವೆಂದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿದರ್ೇಶಕ ಎಸ್.ಬಿ.ಪೂಜಾರಿ ಯುವ ಸಂಸತ್ ಅಣಕು ಸ್ಪಧರ್ೆ ವಿದ್ಯಾಥರ್ಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗಿವೆ.

  18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾನ ಕಾರ್ಯದಲ್ಲಿ ಭಾಗವಹಿಸಬೇಕು. 

      ತಾವು ನಾಯಕರಾಗುವ ಹಾಗೂ ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ತಮಗಿದೆ ಎಂಬುದನ್ನು ಈ ಸ್ಪಧರ್ೆಯ ಮೂಲಕ ಅರಿತುಕೊಳ್ಳಲು ಸಹಾಯಕವಾಗಿದೆ ಎಂದರು.

       ಸಂಸತ್ತಿನ ಕಾರ್ಯಕಲಾಪದಂತೆ ಎಲ್ಲ ಸಭಾಪತಿಗಳು, ಪ್ರಧಾನಮಂತ್ರಿ ವಿವಿಧ ಸಚಿವರುಗಳು ಹಾಗೂ ವಿರೋಧ ಪಕ್ಷದ ನಾಯಕರು, ಅಧಿಕಾರಿ ವರ್ಗದ ವೇಶಭೂಷಣಗಳು ಸಂಸತ್ತಿನ ನಿಜ ದರ್ಶನ ನೀಡಿತು ಎಂದು ಕಾಲೇಜುಗಳ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷ ಅಶೋಕ ಸಜ್ಜನ ಹೇಳಿದರು. 

       ಈ ಚಿಅಣಕು ಸಂಸತ್ ಸ್ಪಧರ್ೆಯಲ್ಲಿ ಜಿಲ್ಲೆಯಾದಂತ ವಿವಿದ ಕಾಲೇಜಿನಿಂದ ಒಟ್ಟು 52 ವಿದ್ಯಾಥರ್ಿಗಳು ಭಾಗವಹಿಸಿದ್ದರು. ಬಾಗಲಕೋಟೆಯಿಂದ 20, ಹುನಗುಂದ-2, ಮುಧೋಳ-8, ಜಮಖಂಡಿ-9, ಬೀಳಗಿಯಿಂದ-7, ಗುಳೇದಗುಡ್ಡದಿಂದ-3, ರಬಕವಿಯಿಂದ-2, ಇಲಕಲ್ ಒಬ್ಬ ವಿದ್ಯಾಥರ್ಿಗಳು ಇದ್ದರು. 

    ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು. ಶ್ರೀಮತಿ ಅನ್ನಪೂರ್ಣ ಹದ್ಲಿ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಸ್.ಎಚ್.ವಟವಟಿ ಸ್ವಾಗತಿಸಿದರು. ಎಮ್.ಎ.ಪಾಟೋಳಿ ಪರಿಚಯಿಸಿದರು. ಎಮ್.ಎಚ್.ಕಟಗೇರಿ ವಂದಿಸಿದರು.