ಲೋಕದರ್ಶನ ವರದಿ
ಮುಂಡಗೋಡ 06: ಪ್ಲಾಸ್ಟೀಕ್ ಬಳಕೆ ಕಡಿವಾಣ ಹಾಕುವುದು ಮೊದಲು ನಮ್ಮ ನಮ್ಮ ಮನೆಯಿಂದ ಮೊದಲುಗೊಳ್ಳಲಿ ಕಾನೂನಿನಿಂದ ಎಲ್ಲವನ್ನು ಸರಿಪಡಿಸುವುದು ಸಾಧ್ಯವಿಲ್ಲ ಪ್ಲಾಸ್ಟೀಕ್ ಬಳಕೆ ನಿಷೇಧಿಸುವ ಮನಸ್ಥಿತಿ ಎಲ್ಲರಲ್ಲಿಯೂ ಬರಬೇಕು ಎಂದು ನ್ಯಾಯಾಧೀಶ ಈರಣ್ಣ ಕಬ್ಬೂರ ಹೇಳಿದರು.
ಅವರು ಮಹಾತ್ಮಗಾಂಧಿ ಹಾಗೂ ಲಾಲಬಹದ್ದೂರ ಶಾಸ್ತ್ರೀ ಜನ್ಮದ ಅಂಗವಾಗಿ ಮುಂಡಗೋಡ ಪಟ್ಟಣ ಪಂಚಾಯತ್ ಹಮ್ಮಿಕೊಂಡಿರುವ ಸ್ವಚ್ಚತಾ ಸೇವಾ, ಹಾಗೂ ಪ್ಲಾಸ್ಟೀಕ್ ಮುಕ್ತಪಟ್ಟಣ ಅಂಗವಾಗಿ ಟ್ಯಾಬಿಲೋ ಉದ್ಘಾಟನೆಮಾಡಿ ಮತ್ತುಅಂಗಿಕಾರಅಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಉಳಿದ ಕಡೆಗಳಲ್ಲಿಕ್ಕಿಂತ ಮುಂಡಗೋಡ ಪಟ್ಟಣ ಸ್ವಚ್ಚವಾಗಿದೆ ಸುಂದರವಾಗಿದೆ.ಇದಕ್ಕೆಕಾರಣ ಮುಂಡಗೋಡ ಪಟ್ಟಣದ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳು ಕಾರಣ ಎಂದರು.
ತಹಶೀಲ್ದಾರ ಶ್ರೀಧರ ಮುಂದಲ ಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ಲಾಸ್ಟೀಕ್ ನಿಷೇಧ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಾಗಬೇಕಾಗಿದೆ ಪ್ಲಾಸ್ಟೀಕ್ ಬಳಕೆಯಿಂದ ಪರಿಸರಕ್ಕೆ ಜನ, ಜಾನುವಾರು ಹಾಗೂ ಜಲಚರ ಪ್ರಾಣಿಗಳಿಗೆ ಆಗುವಂತ ಹಾನಿಗಳು ಆರೋಗ್ಯದ ತೊಂದರೆಗಳು ಜನರಿಗೆ ಮನ ಮುಟ್ಟುವಂತೆ ತಿಳಿಸುವ ಕೆಲಸವಾಗಬೇಕು ಅಲ್ಲದೆ ಕಾನೂನತ್ಮಕ ಅಡಿಯಲ್ಲಿ ಏನೇನು ಕ್ರಮ ಕೈಗೊಂಡರೆ ಜನರು ಮನವರಿಕೆ ಹೊಂದುತ್ತಾರೆ ಎಂಬುದರ ಕುರಿತು ಯೋಚನೆ ಮಾಡಬೇಕಾಗಿದೆ. ಪ.ಪಂ. ಮುಖ್ಯಾಧಿಕಾರಿ ಸಂಗನಬಸಯ್ಯಾ, ಪ.ಪಂ. ಸದಸ್ಯ ಅಶೋಕ ಚಲವಾದಿ ಮಾತನಾಡಿದರು.ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.
ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲಕೃಷ್ಣ ಜಿ., ಪ್ರಭಾರ ಸಿಡಿಪಿಒ ದೀಪಾ, ಸರಕಾರಿ ಪಾಲಿಟೇಕ್ನಿಕ್ ಕಾಲೇಜ ಭೋಧಕ ಸಿಬ್ಬಂದಿ ಯಾದ ಪಿ.ಎಸ್. ಖಲಂದರ, ಮಹೇಶ ನಾಯ್ಕ, ಪ್ರಸಾದ, ಮಾಲತಿ ಹಾಗೂ ವಿದ್ಯಾರ್ಥಿಗಳು, ಪ.ಪಂ ಸದಸ್ಯರಾದ ಅಹ್ಮದ ರಜಾ ಪಠಾಣ, ಮಹ್ಮದಗೌಸ ಮಕಾನದಾರ ಮಹ್ಮದಜಾಫರ ಹಂಡಿ, ಶಿವರಾಜ ಸುಬ್ರಾಯರ್ ಮತ್ತು ಮಾಜಿ ಅಧ್ಯಕ್ಷರ ಫೀಕ ಇನಾಮದಾರ, ಅಲ್ಲಿಖಾನ ಪಠಾಣ, ಸಂಜು ಪಿಶೇ ಇತರೆ ಸದಸ್ಯರು ಹಾಗೂ ಪ.ಪಂ ಸಿಬ್ಬಂದಿಗಳು ಮತ್ತಿತರರಿದ್ದರು.
ಕಿರಿಯ ಇಂಜಿನಿಯರ ಶಂಕರದಂಡಿನ ಮತ್ತು ಎಸ್.ವೈ.ಗೋಣೆಪ್ಪನವರ ನಿರ್ವಹಿಸಿದರು.