ಅದು ಮುಸ್ಸಂಜೆಯ ಸಮಯ, ಆಗ ಮೂರು ವರ್ಷದ ಒಬ್ಬ ಪುಟ್ಟ ಬಾಲಕನಿಗೆ ತನ್ನ ಅಪ್ಪ ವೀರರ ಕತೆ ಹೇಳುತ್ತಾ ಮುಂದೆ ಸಾಗುತ್ತಿದ್ದ. ಆ ಮೂರು ವರ್ಷದ ಬಾಲಕ ಅಪ್ಪನ ಆ ಕಥೆ ಕೇಳುತ್ತಾ ಹಿಂದೆ ಹೆಜ್ಜೆ ಹಾಕುತ್ತಾ ಹೊರಟಿದ್ದ, ಹಾಗೆ ಅಪ್ಪ ಮುಂದೆ ಹೋದ ಆದರೆ ಬರಬರುತ್ತಾ ಹಿಂದಿನ ಹೆಜ್ಜೆಯ ಸಪ್ಪಳವೇ ನಿಂತು ಹೋಗಿತ್ತು. ಹಿಂತಿರುಗಿ ನೋಡಿದರೆ ಮಗ ಇಲ್ಲ. ಕೂಡಲೇ ಅಪ್ಪ ತಾನು ನಡೆದುಬಂದ ದಾರಿಯಲ್ಲಿಯೇ ವಾಪಸ್ ಹಿಂದಿರುಗಿದರೆ ಆ ಪುಟ್ಟ ಹುಡುಗ ಆ ಗದ್ದೆಯಲ್ಲಿ ಗುಂಡಿಗಳನ್ನು ತೋಡುತ್ತಿದ್ದ. ಇದನ್ನು ಕಂಡು ಆಶ್ಚರ್ಯದಿಂದ ಅಪ್ಪ, ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಆ ಪುಟ್ಟ ಬಾಲಕ ಹೇಳಿದ 'ಅಪ್ಪಾ ಈ ಗದ್ದೆಯಲ್ಲೆಲ್ಲ ಬಂದೂಕು ಬೆಳೆಯಬೇಕು. ಅದಕ್ಕೆ ಬಂದೂಕಿನ ಗಿಡ ನೆಡಲು ಗುಂಡಿ ತೋಡುತ್ತಿದ್ದೇನೆ'! ತಂದೆ ಆ ಒಂದು ಕ್ಷಣ ನಿಬ್ಬೆರಗಾಗಿ ನಿಂತುಬಿಟ್ಟ. ಆ ಪುಟ್ಟ ಬಾಲಕನೇ ಭಗತ್ಸಿಂಗ್.
ಭಗತ್ಸಿಂಗ್ ಹುಟ್ಟಿದ ದಿನ ಎಲ್ಲರಿಗೂ ಅತ್ಯಂತ ಅದೃಷ್ಟದ ದಿನವಾಗಿತ್ತು. ತಂದೆ ಕಿಶನ್ಸಿಂಗ್ ಇನ್ನೊಬ್ಬ ಚಿಕ್ಕಪ್ಪ ಅಜಿತ್ಸಿಂಗ್, ಸ್ವರ್ಣಸಿಂಗ್ ಜೈಲಿನಿಂದ ಈ ಮೂವರು ಒಂದೇ ದಿನ ಬಿಡುಗಡೆಯಾಗಿದ್ದರು. ಆ ದಿನವೇ ಭಗತ್ಸಿಂಗ್ ಹುಟ್ಟಿದ್ದ, ಹಾಗಾಗಿ ಭಗತ್ಸಿಂಗ್ನಿಗೆ ಭಾಗ್ಯವಂತ ಎಂದು ನಾಮಕರಣ ಮಾಡಿದರು. ಬ್ರಿಟೀಷ್ ಸರಕಾರ 1919 ಸುಮಾರಿಗೆ ರೌಲೆಟ್ ಕಾಯಿದೆಯನ್ನು ಜಾರಿಗೆ ತಂದಿತ್ತು. ಇದರ ಉದ್ದೇಶ ಯಾವುದೇ ವಿಚಾರಣೆ ಇಲ್ಲದೇ ಹಾಗೆ ಸುಖಾಸುಮ್ಮನೆ, ಹೋರಾಟಗಾರರನ್ನು ಬಂಧಿಸಿ ಜೈಲಿಗಟ್ಟುವುದು. ಆ ಮೂಲಕ ಭಾರತೀಯರ ಸ್ವಾತಂತ್ರ್ಯ ಹೋರಾಟವನ್ನು ದಮನಗೊಳಿಸುವುದಾಗಿತ್ತು. ಬ್ರಿಟಿಷರ ಆ ಕ್ರೂರ ಧೋರಣೆಯನ್ನು ಖಂಡಿಸಿ ಸಾವಿರಾರು ಹೋರಾಟಗಾರರು ಶಾಂತ ರೀತಿಯಾಗಿ ಜಲಿಯನ್ ವಾಲಾಬಾಗ್ ಎಂಬ ಪ್ರದೇಶದಲ್ಲಿ ಬ್ರಿಟೀಷರ ವಿರುದ್ಧ ಪ್ರತಿಭಟಿಸುತ್ತಿದ್ದರು. ಆ ಸಮಯದಲ್ಲಿ ಜನರಲ್ ಡಯರ್ ತನ್ನ ಸೈನಿಕ ಸೂತ್ರಬದ್ದ, ಯೋಜನೆಯೊಂದಿಗೆ ಜಲಿಯನ್ ವಾಲಾಬಾಗನ್ನು, ಸುತ್ತುವರಿದ. ಎತ್ತರದ ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮೈದಾನದಲ್ಲಿ ಹೊರಹೋಗಲು ಒಂದೇ ಒಂದು ಸಣ್ಣ ದ್ವಾರ ಮಾತ್ರ ಇತ್ತು. ಶಾಂತ ರೀತಿಯಲ್ಲಿ ಪ್ರತಿಭಟಿಸುತ್ತಿದ್ದ ಆ ಜನರ ಮೇಲೆ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಇದ್ದಕ್ಕಿದ್ದಂತೆ 1650 ಸುತ್ತಿನ ಗುಂಡಿನ ಸುರಿಮಳೆಗೈದ. ಪರಿಣಾಮ, ಒಂದೇ ಒಂದು ಗುಂಡು ಹಾಳಾಗಲಿಲ್ಲ, ನೂರಾರು ಜನ ಪ್ರಾಣ ಕಳೆದುಕೊಂಡರು. ಇಡೀ ಜಲಿಯನ್ ವಾಲಾಬಾಗ್ ರಕ್ತದ ಓಕುಳಿಯಲ್ಲಿ ಮುಳುಗಿ ಹೋಯಿತು. ಆಗ ಭಗತ್ ಸಿಂಗ್ ಅತ್ಯಂತ ಎಳೆಯ ವಯಸ್ಸಿನ ಪುಟ್ಟ ಬಾಲಕ. ಅವನಿಗೆ ಅತಿಯಾಗಿ ಕಾಡಿದ್ದು ಜಲಿಯನ್ ವಾಲಾಬಾಗ್ನ ದುರಂತ. ಆ ದುರಂತದಲ್ಲಿ ಹತ್ಯೆಯಾದವರ ಸುದ್ದಿ ಎಲ್ಲೆಡೆಯಲ್ಲಿಯೂ ಹಬ್ಬಿತ್ತು. ಶಾಲೆ ಬಿಟ್ಟ ಕೂಡಲೇ ಭಗತ್ ಸಿಂಗ್ ತನ್ನ ತಂಗಿಯನ್ನು ಮನೆಗೆ ಕಳುಹಿಸಿ ಜಲಿಯನ್ ವಾಲಾಬಾಗ್ನತ್ತ ಹೆಜ್ಜೆ ಹಾಕಿದ. ತನ್ನ ಶಾಲೆಯ ಬ್ಯಾಗಿನಲ್ಲಿದ್ದ ಇಂಕ್ ಬಾಟಲ್ನ್ನು ಹೊರ ತೆಗೆದು ಆ ದುರಂತದಲ್ಲಿ ಸತ್ತವರ ರಕ್ತದ ಮಡುವಿನ ಮಣ್ಣನ್ನು ಅದರಲ್ಲಿ ತುಂಬಿದ. ಅದನ್ನೇ ದೇವರ ಕೋಣೆಯೊಳಗೆ ಇಟ್ಟು ನಿತ್ಯ ನಿಷ್ಠೆಯಿಂದ, ಪೂಜಿಸತೊಡಗಿದ. ನಂತರ ಮಹಾತ್ಮಾಗಾಂಧೀಜಿ ದೇಶಾದ್ಯಂತ ಬ್ರಿಟೀಷರ ವಿರುದ್ಧ ಅಸಹಕಾರ ಚಳುವಳಿಗೆ ಕರೆಕೊಟ್ಟರು. ಉದ್ದೇಶ, ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದು, ಸರಕಾರಿ ಕೆಲಸಕ್ಕೆ ಹಾಜರಾಗದೇ ಇರುವುದು, ವಿದ್ಯಾಥರ್ಿಗಳು ಶೈಕ್ಷಣಿಕ ಸಂಸ್ಥೆಗಳಿಂದ ಹೊರಬರುವುದು, ಇದು ಅಸಹಕಾರ ಚಳುವಳಿಯ ಉದ್ದೇಶವಾಗಿತ್ತು. ಗಾಂಧಿಜೀಯ ಆ ಒಂದು ಕರೆಗೆ ಭಗತ್ಸಿಂಗ್ ಕೂಡಲೇ ಶಾಲೆ ಬಿಟ್ಟು ಆ ಚಳುವಳಿಯಲ್ಲಿ ಧುಮುಕಿಬಿಟ್ಟ. ಚಳುವಳಿ ನಡೆಯುತ್ತಿದ್ದಂತೆ ಗೋರಖ್ಪುರದ 'ಚೌರಿ ಚೌರಾ' ಎಂಬ ಗ್ರಾಮದಲ್ಲಿ ರೊಚ್ಚಿಗೆದ್ದ ಕ್ರಾಂತಿಕಾರಿಗಳ ಗುಂಪೊಂದು ಇಪ್ಪತ್ತು ಜನ ಪೊಲೀಸ್ ಮತ್ತು ಒಬ್ಬ ಪಿಎಸ್ಐನನ್ನು ಠಾಣೆಯ ಕಟ್ಟಡದಲ್ಲೇ ಬೆಂಕಿ ಹಾಕಿ ಕೊಂದಿತು. ಇದರಿಂದ ಅಸಹಕಾರ ಚಳುವಳಿಗೆ ಮುಖಭಂಗವಾಯಿತು. ಪರಿಣಾಮವಾಗಿ ಗಾಂಧಿಜಿ ಕೂಡಲೇ ಈ ಚಳುವಳಿಯನ್ನು ಹಿಂದಕ್ಕೆ ತೆಗೆದುಕೊಂಡುಬಿಟ್ಟರು. ಲಾಲಾ ಲಜಪತ ರಾಯರು, ಗಾಂಜಿಯ ಈ ಕ್ರಮದಿಂದ ತೀವ್ರ ಅಸಮಾಧಾನಗೊಂಡರು. ಗಾಂಧಿಜಿಯ ಕರೆಗೆೆ ಓಗೊಟ್ಟು, ಶಾಲೆ ಬಿಟ್ಟು ಬೀದಿಗೆ ಬಿದ್ದಿದ್ದ ಆ ನೂರಾರು ಮಕ್ಕಳ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಲಾಲಾ ಲಜಪತರಾಯರು ನ್ಯಾಷನಲ್ ಕಾಲೇಜ್ ಪ್ರಾರಂಭಿಸಿದರು. ಬುದ್ದಿವಂತ ಹುಡುಗ ಭಗತ್ಸಿಂಗ್ ನೇರವಾಗಿ ಕಾಲೇಜಿಗೆ ಸೇರಿಕೊಂಡ. ಭಗತ್ಸಿಂಗ್ ಕಾಲೇಜಿನಲ್ಲಿರುವ ಸಮಯದಲ್ಲಿ ಯಶ್ಪಾಲ್, ಭಗವತಿ ಚರಣ್, ಸುಖದೇವ್, ತೀರ್ಥರಾಂ ಅವರ ಸ್ನೇಹದಿಂದ ಕ್ರಾಂತಿಕಾರಕ್ಕೆ ಒಂದು ಹೊಸ ಆಯಾಮವನ್ನು ಕಂಡುಕೊಂಡ.
ನಂತರ ಭಗತ್ಸಿಂಗ್ ಕಾನ್ಪುರಕ್ಕೆ ತೆರಳಿ ಹಳ್ಳಿ ಹಳ್ಳಿಗಳಲ್ಲಿ ಕ್ರಾಂತಿಯ ಚಟುವಟಿಕೆಗಳನ್ನು ಪ್ರಾರಂಭಿಸುತ್ತಾ ತನ್ನೊಂದಿಗೆ ನೂರಾರು ಯುವಕರನ್ನು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ. ಆಗಲೇ ಬ್ರಿಟಿಷರು ಅವನ ಮೇಲೊಂದು ಕಣ್ಣಿಟ್ಟಿದ್ದರು. ಭಗತ್ಸಿಂಗ್ 1926ರಲ್ಲಿ 'ನೌಜವಾನ್ ಭಾರತ ಸಭಾ' ಎಂಬ ಸಂಘಟನೆಯನ್ನು ಪ್ರಾರಂಭಿಸಿ ಅದರ ಕಾರ್ಯದಶರ್ಿಯಾಗಿ ಉತ್ಸುಕತೆಯಿಂದ ಕಾರ್ಯ ಆರಂಭಿಸಿದ. 1927 ರಲ್ಲಿ ಬ್ರಿಟೀಷ್ ಸರಕಾರ ನೌಜವಾನ್ ಭಾತರ ಸಭಾ ಕಾನೂನು ಬಾಹಿರ ಸಂಸ್ಥೆ ಎಂದು ಘೋಷಿಸಿತು. ಅಷ್ಟರಲ್ಲೇ ಕಾಕೋರಿ ಲೂಟಿಯ ಪ್ರಕರಣದಲ್ಲಿ ಬ್ರಿಟೀಷ್ ಸಕರ್ಾರ ರಾಮ್ಪ್ರಸಾದ್ ಬಿಸ್ಮಿಲ್, ಆಶ್ಫಕುಲ್ಲಾಖಾನ್, ರೋಶನ್ಸಿಂಗ್ ರವರಿಗೆ ಗಲ್ಲು ಶಿಕ್ಷೆ ವಿಧಿಸಿತು. ಇವರೆಲ್ಲರನ್ನು ಬಿಡಿಸಲು ಚಂದ್ರಶೇಖರ ಆಜಾದ್ ಸಾಕಷ್ಟು ಪ್ರಯತ್ನಗಳನ್ನು ಮಾಡಿದ. ಆದರೆ ಆ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಕಾಕೊರಿ ಘಟನೆಯ ನಂತರ ಎಲ್ಲ ಕ್ರಾಂತಿಗಳು ಚದುರಿ ಹೋಗುತ್ತಾರೆ. ಆದರೆ ಭಗತ್ಸಿಂಗ್ ಹಲವು ಪ್ರಯತ್ನಗಳಿಂದ ಕೆಲವರನ್ನು ಒಂದುಗೂಡಿಸಿ 1928 ರಂದು ದೆಹಲಿಯಲ್ಲಿ ಕ್ರಾಂತಿಕಾರಿಗಳ ಸಭೆ ನಡೆಸುತ್ತಾನೆ. ಹಿಂದೂಸ್ತಾನ್ ರಿಪಬ್ಲಿಕನ್ ಆಮರ್ಿಗೆ ಸೋಸಿಯಲಿಸ್ಟ ರಿಪಬ್ಲಿಕನ್ ಅಸೋಸಿಯೇಶನ್ ಎಂದು ಹೆಸರು ಬದಲಿಸಿ ಅದರ ನೇತೃತ್ವವನ್ನು ಚಂದ್ರಶೇಖರ ಆಜಾದನಿಗೆ ವಹಿಸಿಕೊಟ್ಟ. ಚಂದ್ರಶೇಖರ್ ಆಜಾದ್ ಭಗತ್ಸಿಂಗ್ ಇಬ್ಬರೂ ಜೊತೆಗೂಡಿ ಕ್ರಾಂತಿಕಾರಕ ಯೋಜನೆಗಳನ್ನು ಮತ್ತಷ್ಟು ಬಲಿಷ್ಠಗೊಳಿಸತೊಡಗಿದರು. ಆಗ 1928 ಫೆಬ್ರುವರಿಯಲ್ಲಿ ಬ್ರಿಟೀಷ್ ಸರಕಾರ ಸೈಮನ್ ಕಮಿಷನ ರಚಿಸಿತು. ಇದನ್ನು ವಿರೋಧಿಸಿ ನೌಜವಾನ್ ಭಾರತ ಸಭಾ ಲಾಲಾಲಜಪತರಾಯರ ನೇತೃತ್ವದಲ್ಲಿ ಪ್ರತಿಭಟನೆ ಯನ್ನು ಆಯೋ ಜಿಸಿತು. ಈ ಹೋರಾಟದಲ್ಲಿ ಭಗತ್ಸಿಂಗ್ ಮತ್ತು ಆಜಾದ್ ಸಾವಿರಾರು ಯುವಕರನ್ನು ಸೇರಿಸಿದ್ದರು. ಕೋಪಗೊಂಡ ಬ್ರಿಟೀಷ್ ಅಧಿಕಾರಿ ಸ್ಕಾಟ್ ಕೂಡಲೆ ಲಾಠಿ ಪ್ರಹಾರವನ್ನು ನಡೆಸಿಯೇಬಿಟ್ಟ. ತೀವ್ರ ಲಾಠಿ ಏಟಿನಿಂದ ವೃದ್ಧ ಲಾಲಾಲಜಪತರಾಯರು ಮರಣ ಹೊಂದಿದರು. ಲಾಲಾಲಜಪತರಾಯರು ಸಾಯುವ ಕೊನೆಯಲ್ಲಿ ಬ್ರಿಟೀಷರಿಗೆ ಹೀಗೆ ಹೇಳುತ್ತಾರೆ "ನನಗೆ ಹೊಡೆದ ಒಂದೊಂದು ಲಾಟಿ ಏಟು ಬ್ರಿಟೀಷರ ಶವ ಪಟ್ಟಿಗೆಗೆ ಹೊಡದ ಕೊನೆಯ ಮೊಳೆಗಳಾಗುತ್ತವೆ" ಇದರ ಪ್ರತೀಕಾರವನ್ನು ತೀರಿಸಿಕೊಳ್ಳುವುದಕ್ಕಾಗಿ ಭಗತ್ಸಿಂಗ್, ರಾಜಗುರು, ಸುಖದೇವ, ಚಂದ್ರಶೇಖರ ಆಜಾದ, ಜಯಗೋಪಾಲ್ ಹಾಗೂ ದುಗರ್ಾಬಾಬಿ ಎಲ್ಲರೂ ಜೊತೆಗೂಡಿ ಸ್ಕಾಟ್ನನ್ನು ಕೊಲ್ಲಲು ಯೋಜನೆಯೊಂದನ್ನು ರೂಪಿಸಿದರು. ಒಂದು ದಿನ ಸ್ಕಾಟ್ ಹೋಗುವುದನ್ನು ಎಲ್ಲರೂ ಗಮನಿಸುತ್ತಿದ್ದರು, ಮಧ್ಯದಲ್ಲಿ ಸ್ಯಾಂಡ್ಸರ್್ ಕೂಡಾ ಬಂದು ಬಿಟ್ಟ. ಕೂಡಲೇ ಜಯಗೋಪಾಲ್ ರಾಜ್ಗುರುನಿಗೆ ಸನ್ನೆ ಮಾಡಿ ಅಲ್ಲಿಂದ ಹೊರಟು ಹೋದ. ಆಗ ರಾಜ್ಗುರು ಸ್ಕಾಟ್ನೆಂದುಕೊಂಡು ತಪ್ಪಿ ಸ್ಯಾಂಡಸರ್್ಗೆ ಹೊಡೆದು ಅಲ್ಲಿಂದ ಪರಾರಿಯಾದ.
ನಂತರ ಅನೇಕ ತಿಂಗಳುಗಳ ಕಾಲ ವಿಚಾರಣೆ ನಡೆಯಿತು. ಇವರಾಗಿ ಬಾಯಿಬಿಡುವವರೆಗೆ ಸ್ಯಾಂಡಸರ್್ನನ್ನು ಹತ್ಯೆಮಾಡಿದವರ್ಯಾರೆಂದು ಬ್ರಿಟಿಷ್ ಸರಕಾರಕ್ಕೆ ಗೊತ್ತಾಗಲೇ ಇಲ್ಲ. ಬ್ರಿಟಿಷರ ದಬ್ಬಾಳಿಕೆಗೆ ಪ್ರತ್ಯುತ್ತರವಾಗಿ ನಮ್ಮಲ್ಲಿಯೂ ಬಾಂಬ್ ತಯಾರಿಸುವ ಶಕ್ತಿ ಇದೆ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ, 1929 ಎಪ್ರಿಲ್ 8 ರಂದು ತಾವು ತಯಾರಿಸಿದ ಬಾಂಬ್ಗಳನ್ನು ಬ್ರಿಟೀಷರ ಪಾಲರ್ಿಮೆಂಟ್ ಮೇಲೆ ಎಸೆದುಬಿಟ್ಟರು. ಆ ಪಾಲರ್ಿಮೆಂಟ್ ಒಳಗಡೆ ಮೋತಿಲಾಲ್ ನೆಹರು, ಜಿನ್ನ, ಮದನ್ಮೋಹನ ಮಾಳವಿಯಾ ಕುಳಿತಿದ್ದರು. ವಸಾಹತು ಶಾಹಿಗೆ ಧಿಕ್ಕಾರ, ವಂದೇಮಾತರಂ, ಇಂಕ್ವಿಲಾಬ್ ಜಿಂದಾಬಾದ್ ಎಂಬ ಘರ್ಜನೆಗಳು ಪಾಲರ್ಿಮೆಂಟ್ ಒಳಗಡೆ ಮೊಳಗಿದವು. ಆಗ ಭಗತ್ಸಿಂಗ್, ಸುಖದೇವ, ರಾಜಗುರು, ಬಟುಕೇಶ್ವರದತ್ತರು ಓಡಿಹೋಗದೇ ಬ್ರಿಟಿಷರಿಗೆ ಶರಣಾಗತರಾದರು. ಚಂದ್ರಶೇಖರ್ ಆಜಾದ್ ಮಾತ್ರ ತಪ್ಪಿಸಿಕೊಂಡು ಪರಾರಿಯಾದ. ನಂತರ ಬಂಧನಕ್ಕೊಳಗಾದ ಎಲ್ಲರನ್ನು ವಿಚಾರಣೆಗೆ ತರುತ್ತಾರೆ. ಕೋಟರ್ಿನ ಕಟಕಟೆಯಲ್ಲಿ ನಿಂತ ಭಗತ್ಸಿಂಗ್ ನ್ಯಾಯಾಧೀಶರಿಗೆ ಹೇಳುತ್ತಾನೆ. "ನಾವು ಯಾವತ್ತೂ ಹಿಂಸಾಮಾರ್ಗವನ್ನು ಹಿಡಿಯಬೇಕೆಂದು ಯೋಚಿಸಿದವರಲ್ಲ. ರೈತರು, ಕಾಮರ್ಿಕರು, ಈ ದೇಶದ ಸಂಪತ್ತನ್ನು ಕ್ರೋಢೀಕರಿಸುವವರು, ಅವರ ದುಡಿಮೆಯ ಫಲವನ್ನು ಅವರಿಗೆ ಒದಗಿಸಿಕೊಡುವುದು ನಮ್ಮ ಕರ್ತವ್ಯ. ಕ್ರಾಂತಿಯ ಪರಾಕಾಷ್ಠೆಯೇ ಬಲಿದಾನ, ತಮ್ಮ ಪ್ರಾಣಹಾನಿ ಉದ್ದೇಶ ಸಾಧನೆಗಾಗಿ ಅಲ್ಲ. ಜಿಡ್ಡು ಹಿಡಿದ ನಿಮ್ಮ ನೀತಿಯನ್ನು ತಿಳಿಸಲಿಕ್ಕಾಗಿ, ಶಾಸನ ಸಭೆಯಲ್ಲಿ ಸ್ಪೋಟಿಸಿದ ಬಾಂಬ್ ಯಾರ ಪ್ರಾಣಹಾನಿ ಮಾಡಲಿಕ್ಕಾಗಿ ಅಲ್ಲ. ಸ್ಯಾಂಡಸರ್್ನ ಕೊಲೆಯ ಪ್ರತಿಕಾರಕ್ಕಾಗಿ ನಡೆದಿದ್ದು ಇನ್ನೊಬ್ಬರ ಜೀವನದ ಬೆಲೆ ಏನು? ಎಂಬುದನ್ನು ತಿಳಿಸಲಿಕ್ಕಾಗಿ ನಡೆಸಿದ್ದು. ಅದಕ್ಕಾಗಿ ನಮಗೆ ದಕ್ಕುವ ಶಿಕ್ಷೆಯನ್ನು ಸ್ವೀಕರಿಸಲು ಸಿದ್ದರಿದ್ದೇವೆ". ಆದರೆ ಒಂದು ಮಾತ್ರ ಸತ್ಯ ನಮಗೆ ನೀಡಿದ ಶಿಕ್ಷೆಯಿಂದಾಗಿ ಕ್ರಾಂತಿಕಾರಿ ಹೋರಾಟಕ್ಕೆ ಇನ್ನೂ ಹೆಚ್ಚಿನ ಬಲ ಬರುತ್ತದೆ. ಭಾರತಮಾತೆಗೋಸ್ಕರ ನೇಣುಗಂಬಕ್ಕೇರಲು ಸಾವಿರಾರು ಕ್ರಾಂತಿಕಾರಿಗಳು ತಯಾರಾಗುತ್ತಾರೆಂದು ಭಗತ್ಸಿಂಗ್ ಗುಡುಗಿದ. 1931 ಮಾರ್ಚ 24 ರಂದು ಎಲ್ಲರನ್ನೂ, ಗಲ್ಲಿಗೇರಿಸುವ ಯೋಜನೆಯಾಗಿತ್ತು. ಆದರೆ ಇದನ್ನು ವಿರೋಧಿಸಿ ದೇಶಾದ್ಯಂತ ಲಕ್ಷಾಂತರ ಪತ್ರಗಳು ವೈಸ್ರಾಯನ ಆಫೀಸಿಗೆ ಬಂದಿದ್ದವು. ಪರಿಣಾಮವಾಗಿ ಆಂಗ್ಲ ಸರಕಾರ ಮಾರ್ಚ 24ರ ಬದಲಿಗೆ 23ರ ರಾತ್ರಿಯೇ ಇವರನ್ನು ಗಲ್ಲಿಗೇರಿಸುವ ತೀಮರ್ಾನಮಾಡಿತು. ಗಾಂಧೀಜಿ ಭಗತ್ಸಿಂಗ್ಗೆ ಮಾಫಿ ನೀಡುವ ವಿಚಾರ ಬಿಟ್ಟು ಉಳಿದೆಲ್ಲ ವಿಷಯಗಳನ್ನು ಇವರ್ಿನ್ ಜೊತೆ ಚಚರ್ಿಸಿದ್ದರು!. ಕೊನೆಯ ಕ್ಷಣದಲ್ಲಿ ಭಗತ್ಸಿಂಗ್, ರಾಜಗುರು, ಸುಖದೇವ ಮೂವರು ತಬ್ಬಿಕೊಂಡು 'ಮೇರೆ ರಂಗದೆ ಬಸಂತಿ ಚೊಲಾ' ಕ್ರಾಂತಿಯ ಗೀತೆ ಹೇಳುತ್ತಾ ಭಾರತ ಮಾತೆಗೆ ಅರ್ಪಣೆಯಾಗಿಬಿಟ್ಟರು. ಆದರೆ ಬ್ರಿಟೀಷ್ರಿಗೆ ಭಗತ್ಸಿಂಗ್ನ ಮೇಲೆ ಅದೆಷ್ಟು ಭಯವಿತ್ತೆಂದರೆ ಆತನ ಮೃತ ಶರೀರವನ್ನು ಅವನ ಸಂಬಂಧಿಕರಿಗೂ ನೀಡದೆ ರಾತ್ರೋ ರಾತ್ರಿ ಸಟ್ಲೆಜ್ ನದಿಯ ದಂಡೆಯ ಮೇಲೆ ಶವ ಸಂಸ್ಕಾರ ಮಾಡಿದರು. 1908 ರಂದು ಜನಿಸಿ ಕೇವಲ 23 ವರ್ಷಗಳ ಕಾಲ ಬದುಕಿ 1931 ಮಾರ್ಚ 23 ರಂದು ಬಲಿದಾನ ಗೈದ ಭಗತ್ ಸಿಂಗ್ರು ದೇಶಕ್ಕಾಗಿ ಕೊಟ್ಟ ಅವರ ಕೊಡುಗೆಗಳು ಚಿಸ್ಮರಣೀಯವಾಗಿವೆ. ಹೀಗೆ ಅಮರನಾದ ಭಗತ್ಸಿಂಗ್ ಭಾರತೀಯ ಯುವಕರ ಹೃದಯದ ಕಣ್ಮಣಿಯಾಗಿದ್ದಾನೆ, ಯುವಕರಿಗೆ ಸ್ಫೂತರ್ಿಯಾಗಿದ್ದಾನೆ. ಪ್ರತಿಯೊಬ್ಬರೊಳಗೂ ಭಗತ್ ಸಿಂಗ್ ಇದ್ದಾನೆ.