ವಿದ್ಯಾರ್ಥಿಗಳು ಕೌಶಲ್ಯಗಳನ್ನು ಪ್ರದರ್ಶಿಸಿ ಉತ್ತಮ ಉದ್ಯೋಗಿಗಳಾಗಲಿ: ಕೃಷ್ಣಮೂರ್ತಿ

Let students demonstrate skills and become better employees: Krishnamurthy

ವಿದ್ಯಾರ್ಥಿಗಳು ಕೌಶಲ್ಯಗಳನ್ನು ಪ್ರದರ್ಶಿಸಿ ಉತ್ತಮ ಉದ್ಯೋಗಿಗಳಾಗಲಿ: ಕೃಷ್ಣಮೂರ್ತಿ  

ಬೆಳಗಾವಿ 03: ವಿದ್ಯಾರ್ಥಿಗಳು ತಮ್ಮಲ್ಲಿನ ಕೌಶಲ್ಯಗಳನ್ನು ಪ್ರದರ್ಶಿಸಿ ಉತ್ತಮ ಉದ್ಯೋಗಿಗಳಾಗಬೇಕೆಂದು ರಾ​‍್ಯಂಡ ಸ್ಯಾಂಡರ್ಡ ಇಂಡಿಯಾ ಪ್ರೈ .ಲಿ. ಮಾನವ ಸಂಪನ್ಮೂಲ ಅಧಿಕಾರಿ ಕೃಷ್ಣಮೂರ್ತಿ ಅವರು ಹೇಳಿದರು.  ಇತ್ತಿಚಿಗೆ ಭರತೇಶ ಶಿಕ್ಷಣ ಸಂಸ್ಥೆಯ  ವತಿಯಿಂದ  ಹಾಗೂ ರಾ​‍್ಯಂಡ ಸ್ಯಾಂಡರ್ಡ ಇಂಡಿಯಾ ಪ್ರೈ .ಲಿ. ಟಾಟಾ  ಎಲೆಕ್ಟ್ರಾನಿಕ್ಸ್‌, ಬಿಸಿಎ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಬೃಹತ್ತ ಉದ್ಯೋಗಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ಶಶಾಂಕ ಲೆಂಗಡೆ  ಮತ್ತು ಗ್ಲೋಬಲ ಬಿಜಿನೆಸ್ ಸ್ಕೂಲ ಆಡಳಿತ ಮಂಡಳಿ ಅಧ್ಯಕ್ಷ ಶರದ ಬಾಳಿಕಾಯಿ ಅವರು ಮಾತನಾಡಿ ಯುವಕರು ತಮಗೆ ದೊರಕಿದ ಉದ್ಯೋಗವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಕಠಿಣ ಶ್ರಮ ಹಾಗೂ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಯಶಸ್ಸು ಸಿಗುವುದು ಖಂಡಿತ ಎಂದು ಅವರು ಹೇಳಿದರು.  ಈ ಮೇಳದಲ್ಲಿ ಸುಮರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗ್ಲೋಬಲ ಬಿಜಿನೆಸ್ ಸ್ಕೂಲ ನಿರ್ದೇಶಕ ಡಾ.ಪ್ರಸಾದ ಅವರು ಅತಿಥಿಗಳನ್ನು ಸ್ವಾಗತಿಸಿದರು.