ಬರಹಗಾರನಾಗುವವನಿಗೆ ಸದಾ ಜ್ಞಾನದ ಹಸಿವು ಇರಲಿ: ಸಿದ್ಧಾಂತಿ

ಲೋಕದರ್ಶನ ವರದಿ

ಧಾರವಾಡ 12: ಭಾಷಾ ಶುದ್ಧತೆ ಜೀವನವನ್ನೇ ಬದಲಾಯಿಸುವ ಸಾಮಥ್ರ್ಯ ಹೊಂದಿದೆ ಎಂದು  ಇಂಗ್ಲೀಷ್ ಪ್ರಾಧ್ಯಾಪಕ ಹಾಗು ಕೆ.. ಬೋಡರ್ಿನ ಪ್ರಥಮ ದಜರ್ೆ ಪ್ರಾಂಶುಪಾಲ  ಪ್ರೊ.ಮೋಹನ ಸಿದ್ಧಾಂತಿ ಹೇಳಿದರು.

ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂವಹನ ಕೂಟದಲ್ಲಿ "ಭಾಷಾ ಕೌಶಲ್ಯ ಮತ್ತು ಸಂವಹನ" ವಿಷಯ ಕುರಿತು ಉಪನ್ಯಾಸ ನೀಡಿದರು.

ಬರಹಗಾರನಾಗುವವ ಸದಾ ಜ್ಞಾನದ ಹಸಿವುಳ್ಳವಾನಾಗಿರಬೇಕು. ಸಾಹಿತ್ಯ, ವ್ಯಾಕರಣ, ವಾಸ್ತವ ಪರಿಸ್ಥಿತಿ ಅರಿಯುವವನಾಗಿರಬೇಕು. ಭಾಷೆಯನ್ನು ಪ್ರೀತಿಸುವ ಮನೋಧರ್ಮ, ಬರವಣಿಗೆಯಲ್ಲಿ ಪದಗಳನ್ನು ವಿಭಿನ್ನ ನೆಲೆಯಲ್ಲಿ ಬರಯುವ ಮೂಲಕ ಓದುಗರ ಮನ ಸೆಳೆಯಬೇಕು ಎಂದರು.

ಆಂಗ್ಲ ಭಾಷೆಯ ಸತತ ಅಧ್ಯಯನ ಪ್ರಯತ್ನದಿಂದ ಆಂಗ್ಲ ಭಾಷಾ ಕೌಶಲ್ಯಗಳನ್ನು ಎಲ್ಲರೂ ಗಳಿಸಬಹುದು, ಅನವಶ್ಯಕ ಅಂಶಗಳನ್ನು ಸೇರಿಸದೇ ತಿರುಳನ್ನು ಮಾತ್ರ ಬರೆಯಬೇಕು ಎಂದು ಹೇಳಿದರು. ಭಾಷೆ ಮತ್ತು ಭಾವನೆಗಳ ಬೆಸುಗೆ ಮನಕಲುಕುವಂತಿರಬೇಕು. ಭಾಷೆ ಮತ್ತು ಸಂವಹನ ಕೌಶಲ್ಯ ಅಭಿವೃದ್ಧಿ ಭಾಷೆಯನ್ನು ಮಾತನಾಡುವ ಮೂಲಕ ಪ್ರೀತಿಸುವುದನ್ನು ಕಲಿಯಬೇಕು ಎಂದರು.

 ಪತ್ರಿಕೋದ್ಯಮ ಎನ್ನುವುದು ಜೀವಂತ ವಿಭಾಗವಿದ್ದಂತೆ. ಪತ್ರಕರ್ತರಾದವರು ಉತ್ತಮ ಬರಹಗಾರರೊಂದಿಗೆ ಉತ್ತಮ ಮಾತುಗಾರರೂ ಆಗಿರಬೇಕು. ಪುಸ್ತಕವಿಲ್ಲದೆ ಜ್ಞಾನವಿಲ್ಲ, ಜ್ಞಾನವಿಲ್ಲದೆ ಇತಿಹಾಸವಿಲ್ಲ ಎಂದು ಹೇಳಿದರು. ಪತ್ರಕರ್ತನಾದವನಿಗೆ ಹೃದಯ ಮತ್ತು ಬುದ್ಧಿ ಎಂಬ ಮೂರನೇ ಕಣ್ಣನ್ನು ಪ್ರಯೋಗಿಸಿ ಪ್ರತಿಯೊಂದು ವಿಷಯವನ್ನು ಸೂಕ್ಷ್ಮವಾಗಿ ಅವಲೋಕಿಸುವ ಗುಣ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.

 ಅಧ್ಯಕ್ಷತೆ ವಹಿಸಿದ್ದ ವಿಭಾಗ ಮುಖ್ಯಸ್ಥ ಪ್ರೊ ಜೆ.ಎಂ.ಚಂದುನವರ ಮಾತನಾಡಿ, ಪ್ರೊ ಮೋಹನ ಸಿದ್ಧಾಂತಿ  ಅತ್ಯುತ್ತಮ ಇಂಗ್ಲೀಷ ಪ್ರಾಧ್ಯಾಪಕ ಅವರ ಸಲಹೆ ಸೂಚನೆಗಳನ್ನು ಅನುಸರಿಸಿ ಭಾಷಾ ಕೌಶಲ್ಯ ವೃದ್ಧಿಸಿಕೊಳ್ಳಿ  ಸಿದ್ಧಾಂತಿ ಗುರುಗಳ ಗರಡಿಯಲ್ಲಿ ಪಳಗಿದ ಅನೇಕ ವಿದ್ಯಾಥರ್ಿಗಳು ಉನ್ನತ ಹುದ್ದೆಯಲ್ಲಿದ್ದಾರೆ ಎಂದರು. ಅಜೇಯ ಹೆಗಡೆ ಸ್ವಾಗತಿಸಿದರು. ಐಶ್ವರ್ಯ ಹರಿಜನ ವಂದಿಸಿದರು. ಕಾವ್ಯಾ ಭಟ್ ಕಾರ್ಯಕ್ರಮ ನಿರೂಪಿಸಿದರು.

ಅಡಿಬರಹ: ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂವಹನ ಕೂಟದಲ್ಲಿ ಪ್ರೊ.ಮೋಹನ ಸಿದ್ಧಾಂತಿ ಮಾತನಾಡುತ್ತಿರುವದು