ಸೇವಾಲಾಲ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ನಡೆಯೋಣ

ಬೆಳಗಾವಿ, 15: ಮಹನೀಯರ ಜೀವನವೇ ಒಂದು ಸಂದೇಶ ಅಂತವರನ್ನು ಕೇವಲ ಆಚರಣೆಗೆ ಸೀಮಿತಗೊಳಿಸಿದೇ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಿದೆ ಎಂದು ಕೆ.ಎಸ್.ಎಫ್.ಸಿ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಪಿ.ಆರ್. ಜಾಧವ  ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ  ಕುಮಾರ ಗಂಧರ್ವ ಕಲಾಮಂದಿರದಲ್ಲಿ ಶನಿವಾರ (ಫೆ.15) ಏರ್ಪಡಿಸಲಾಗಿದ್ದ ಸಂತ ಸೇವಾಲಾಲ  ಜಯಂತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಸಮಾಜದ ಮಹನೀಯರು ಮನುಕುಲದ ಉದ್ದಾರಕ್ಕಾಗಿ ಒಳ್ಳೆಯ ಸಂದೇಶಗಳನ್ನು ಕೊಟ್ಟು ಹೋಗಿದ್ದಾರೆ. ಅವರ ಸಂದೇಶ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.ಸೇವಾಲಾಲರು ಕೇವಲ ಬಂಜಾರ ಸಮುದಾಯಕ್ಕೆ ಮಾತ್ರ ಕೆಲಸ ಮಾಡದೆ, ಎಲ್ಲಾ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಪಿ.ಆರ್. ಜಾಧವ ಅವರು ಹೇಳಿದರುಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಆಧುನಿಕ ಯುಗದಲ್ಲಿ ಕಲಿಯಬೇಕಾದದ್ದು ತುಂಬಾ ಇದೆ. ಆದ್ದರಿಂದ ಶಿಸ್ತನ್ನು ರೂಢಿಸಿಕೊಂಡರೆ ಜಗತ್ತನ್ನು ಗೆಲ್ಲಲು ಸಾಧ್ಯ ಎಂದು ಹೇಳಿದರು.ಸಮಾಜದ ಮುಖಂಡರಾದ ಎಮ್. ಟಿ.ರಾಠೋಡ ಮಾತನಾಡಿ, ಸಮಾಜದ ಕಟ್ಟಳೆಗಳನ್ನು ಮುರಿಯದೇ ಸೇವಾಲಾಲರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.ಪ್ರಾರಂಭದಲ್ಲಿ ಹೇಮಂತ ಲಮಾಣಿ ಮತ್ತು ತಂಡದವರು ವಚನ ಗಾಯನ ಕಾರ್ಯಕ್ರಮ ನಡಸಿಕೊಟ್ಟರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ವಿದ್ಯಾವತಿ ಭಜಂತ್ರಿ, ಗೋಪಾಲ ಲಮಾಣಿ, ಎಂ.ಪಿ.ರಾಠೋಡ, ಆರ್.ಟಿ. ರಾಠೋಡ, ಎಸ್. ಪಿ.ರಾಠೋಡ, ಶೈಲಜ ಚವಾಣ, ಕೆ.ಸಿ. ಸತೀಶ್, ಮಾಜಿ ನಗರ ಸೇವಕಿ ಜಯಶ್ರೀ ಮಾಳಗಿ, ದಲಿತ ಮುಖಂಡ ಮಲ್ಲೇಶ ಚೌಗಲೆ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನೆರವೇರಿತು.

ಭಾವಚಿತ್ರದ ಭವ್ಯ ಮೆರವಣಿಗೆ: ಇದಕ್ಕೂ ಮುಂಚೆ ನಗರದ ಅಶೋಕ ವೃತ್ತದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು, ಲಂಬಾಣಿ ಸಮುದಾಯದ ವಿಶೇಷ ಉಡುಪು ಧರಿಸಿ, ಸಂತ ಸೇವಾಲಾಲ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು.ಸಚಿವರು ಸ್ವತ ಜಗ್ಗಲಗಿ ಬಾರಿಸುವ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದರು. ಶಾಸಕ ಅನಿಲ್ ಬೆನಕೆ ಅವರು ಕೂಡ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು.

   ಅಶೋಕ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಕೋಟೆ ಮಾರ್ಗವಾಗಿ ಆರ್. ಟಿ.ಓ ಕಚೇರಿ, ಸಂಗೊಳ್ಳಿ ರಾಯಣ್ಣ ರಸ್ತೆ ಮೂಲಕ ಕುಮಾರ್ ಗಂಧರ್ವ ರಂಗಮಂದಿರ ತಲುಪಿತು.

ಸ್ಮಾಟರ್್ ರಸ್ತೆ ಕಾಮಗಾರಿಗೆ ಸುರೇಶ್ ಅಂಗಡಿ ಚಾಲನೆ

ಬೆಳಗಾವಿ, 15: ನಗರದ ಮಿಲನ್ ಹೋಟೆಲ್ ನಿಂದ ಹಿಂಡಲಗಾ ರಸ್ತೆಯ ಗಾಂಧೀಜಿ ಪುತ್ಥಳಿವರೆಗಿನ ಸ್ಮಾಟರ್್ ರಸ್ತೆ ಕಾಮಗಾರಿಗೆ ರೈಲ್ವೆ ಇಲಾಖೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಶನಿವಾರ(ಫೆ.15) ಚಾಲನೆ ನೀಡಿದರು.

15.04 ಕೋಟಿ ರೂಪಾಯಿ ವೆಚ್ಚದ ಸ್ಮಾಟರ್್ ರಸ್ತೆ ಜತೆಗೆ ವೈಟ್ ಟಾಪಿಂಗ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ಗುಣಮಟ್ಟದ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಹೋಟೆಲ್ ಮಿಲನನಿಂದ ಹಷರ್ಾ ಶೋರೂಮ್ ಮೂಲಕ ಹಿಂಡಲಗಾ ರಸ್ತೆಯಲ್ಲಿರುವ ಗಾಂಧೀಜಿ ಪುತ್ಥಳಿವರೆಗೆ  ವೈಟ್ ಟಾಪಿಂಗ್, ಫುಟ್ ಪಾಥ್ ನಿಮರ್ಾಣ, ಬೀದಿದೀಪ ಅಳವಡಿಕೆ, ಸೈಕಲ್ ಟ್ರ್ಯಾಕ್ ನಿಮರ್ಾಣ ಮತ್ತು ಭೂಗತ ವಿದ್ಯುತ್ ವ್ಯವಸ್ಥೆಯನ್ನು ಕಾಮಗಾರಿ ಒಳಗೊಂಡಿದೆ.

ಶಾಸಕ ಅನಿಲ್ ಬೆನಕೆ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೂಳಪ್ಪ ಹೊಸಮನಿ, ಸ್ಮಾಟರ್್ ಸಿಟಿ ಯೋಜನೆಯ ವ್ಯವಸ್ಥಾಪಕ ನಿದರ್ೇಶಕ ಶಶಿಧರ್ ಕುರೇರ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ ಮತ್ತಿತರರು ಉಪಸ್ಥಿತರಿದ್ದರು.