ಪ್ರತಿಯೊಬ್ಬ ಕನ್ನಡಿಗರು ಸ್ವಾಭೀಮಾನದಿಂದ ಹೋರಾಟ ಮಾಡುವಂತಾಗಲಿ: ಡಾಽಽ ಮೋಟಗಿ

Let every Kannadigas fight with self-respect: Dr Motagi

ಪ್ರತಿಯೊಬ್ಬ ಕನ್ನಡಿಗರು ಸ್ವಾಭೀಮಾನದಿಂದ ಹೋರಾಟ ಮಾಡುವಂತಾಗಲಿ: ಡಾಽಽ ಮೋಟಗಿ

ರಾಣೇಬೆನ್ನೂರು 16 : ನಾಡ ನುಡಿಯ ವಿಚಾರ ಬಂದಾಗ ಪ್ರತಿಯೊಬ್ಬ ಕನ್ನಡಿಗರು ಸ್ವಾಭಿಮಾನದಿಂದ ಹೋರಾಟ ಮಾಡಬೇಕು, ನೆರೆಯ ರಾಜ್ಯಗಳ ಗಡಿಯಲ್ಲಿರುವ ಕನ್ನಡಿಗರು ಆತಂಕದಲ್ಲಿದ್ದಾರೆ ಅವರಿಗೆ ಧೈರ್ಯ ತುಂಬ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ವೈದ್ಯರಾದ ಸಂತೋಷ ವಿ. ಮೋಟಗಿ ಹೇಳಿದರು.   

     ತಾಲೂಕು ಸಮಿತಿಯ ವಯಿಯಿಂದ ನಡೆದ ವೀರ ವನಿತೆ ಒನಕೆ ಓಬ್ಬವ್ವ ಜಯಂತೋತ್ಸವ ಕಾರ್ಯಕ್ರಮ, ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಕಾರ್ಯದಕ್ಷರು ಹಾಗೂ ಹಾವೇರಿ ಜಿಲ್ಲಾ ಅಧ್ಯಕ್ಷರಾದ ರಾಮು ತಳವಾರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸದ್ಯ ಗಡಿಯ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಮಹತ್ವರವಾದ ಕಾರ್ಯಗಳು ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತಗೊಳ್ಳುವ ಅಗತ್ಯವಿದ್ದು, ಪ್ರಸಕ್ತ ಸಾಲಿನ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯಗಳ ಬಗ್ಗೆ ಚರ್ಚಿಸುವ ಅಗತ್ಯವಿದ್ದು ಆಡಳಿತ ಹಾಗೂ ವಿರೋಧ ಪಕ್ಷಗಳು ಅನಗತ್ಯ ಕಾಲಹರಣ ಮಾಡುತ್ತಿರುವುದು ಖಂಡನೀಯ ಎಂದರು.  

     ಈ ಸಂದರ್ಭದಲ್ಲಿ ರಾಣೇಬೆನ್ನೂರು ತಾಲೂಕಾ ಸಮಿತಿಗೆ ನೂತನ ಅಧ್ಯಕ್ಷರಾಗಿ ನಾಗರಾಜ ಯರಬಾಳರನ್ನು ನೇಮಿಸಿ ಆದೇಶ ಹೊರಡಿಸಲಾಯಿತು.  

   ನಂತರ ಕರ್ನಾಟಕ ರಕ್ಷಣಾ ವೇದಿಕೆಯ ಕರವೇ ಸ್ವಾಭೀಮಾನ ಸೇನೆಗೆ ತಾಲೂಕಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕರವೇ ಕಾರ್ಯಾಲಯದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು  ಜಿಲ್ಲಾ ಸಮಿತಿಯ ಗೌರವಾಧ್ಯಕ್ಷರಾದ ಎಂ.ಕೆ. ತಿಮ್ಮಾಪುರ ವಹಿಸಿದ್ದರು.    

 ತಾಲೂಕಾ ಸಮಿತಿ ಅಧ್ಯಕ್ಷರಾದ ನಾಗರಾಜ ಒ ಯರಬಾಳ ಅವರು ನೂತನ ತಾಲೂಕಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡುವ ಮೂಲಕ ಎಲ್ಲಾ ಪದಾಧಿಕಾರಿಗಳಿಗೆ ಸನ್ಮಾನ ಮಾಡಿದರು. ಉಪಾಧ್ಯಕ್ಷರನ್ನಾಗಿ ಸುರೇಶ ಅಡ್ಡಂಗಡಿ ಅವರನ್ನು ನೇಮಕ ಮಾಡಲಾಯಿತು.  

    ತಾಲೂಕಾ ರೈತ ಘಟಕದ ಅಧ್ಯಕ್ಷರಾಗಿ ರಾಮನಗೌಡ ಎನ್‌. ಸಿದ್ದಪ್ಪಳವರ, ತಾಲೂಕಾ ಮಹಿಳಾ ಅಧ್ಯಕ್ಷರಾಗಿ ಸುನಂದಾ ಎಮ್‌. ಪುಲಿಕಟ್ಟಿ, ಲಲಿತ ಬ್ಯಾಡಗಿ ಇವರು ಉಪಾಧ್ಯಕ್ಷರಾಗಿ, ತಾಲೂಕಾ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ನಿಂಗಪ್ಪ ವಾಸನದ ಮಾಸ್ಟಿ ಅವರುಗಳನ್ನು ಆಯ್ಕೆ ಮಾಡಲಾಯಿತು.  

     ಇದೇ ಸಂದರ್ಭದಲ್ಲಿ ಇತರೆ ಪದಾಧಿಕಾರಿಗಳನ್ನು ಈ ಸಭೆಯಲ್ಲಿ ತಾಲೂಕಾ ಅಧ್ಯಕ್ಷರು ನೇಮಕ ಮಾಡಿದರು.  

     ಸಮಾರಂಭದಲ್ಲಿ ಜಿಲ್ಲಾ ಮಹಿಳಾ ಸಮಿತಿಯ ಅಧ್ಯಕ್ಷೆ ಸುಮಾ ಪುರದ, ಜಿಲ್ಲಾ ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷ ಗೌರಮ್ಮ ಕುಲಕರ್ಣಿ, ಜಿಲ್ಲಾ ವಕ್ತಾರ ಶಿವಪ್ಪ ಬಳಲ್ಕೊಪ್ಪ, ಬ್ಯಾಡಗಿ ತಾಲೂಕ ಸಮಿತಿಯ ಅಧ್ಯಕ್ಷ ಮಂಜುನಾಥ ದಾನಪ್ಪನವರ, ಹಿರೇಕೆರೂರ ತಾಲೂಕ ಸಮಿತಿಯ ಅಧ್ಯಕ್ಷ ವೀರೇಶ ಹಡಪದ, ಗೌರವಾಧ್ಯಕ್ಷ ಜಯದೇವ ಹುಲಿಗಿನಮಳೆಮಠ ತಾಲೂಕಾ ಮಹಿಳಾ ಸಮಿತಿಯ ಅಧ್ಯಕ್ಷರಾದ ಸುನಂದ ಎಂ. ಪುಲಿಕಟ್ಟಿ ಹಿರೇಕೆರೂರ ತಾಲೂಕ ಮಹಿಳಾ ಸಮಿತಿಯ ಅಧ್ಯಕ್ಷರಾದ ನಾಗಮ್ಮ ಹೊಳೆ ಬಸಪ್ಪಗೌಡ್ರ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.