ಮತಯಾಚಿಸುವ ಮೊದಲು ರಾಹುಲ್ ಗಾಂಧಿ 370ನೇ ವಿಧಿಯ ಬಗ್ಗೆ ನಿಲುವು ಸ್ಪಷ್ಟಪಡಿಸಲಿ: ಅಮಿತ್ ಶಾ

ಜಮ್ತರಾ, ಸೆ 18   ಸಂವಿಧಾನದ 370ನೇ ವಿಧಿ ದೇಶಕ್ಕೆ ಅಪಾಯ ತರುವಂತದ್ದು ಎಂಬ ನಿಲುವನ್ನು 1950ರಿಂದಲೇ ಪಕ್ಷ ಹೊಂದಿತ್ತು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 

ಜಾರ್ಖಂಡ್ನಲ್ಲಿಂದು ಜೊಹರ್ ಜನ್ ಆಶೀವರ್ಾದ್ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹಯರ್ಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಮತಯಾಚಿಸುವ ವೇಳೆ ಈ ವಿಧಿಯ ಬಗ್ಗೆ ರಾಹುಲ್ ಗಾಂಧಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. 

ಇಲ್ಲಿನ ಬೆನಾ ಕಾಳಿ ಮಂದಿರ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿ ನಡೆಸಿದಾಗ ರಾಹುಲ್ ಗಾಂಧಿ ಅದನ್ನೂ ವಿರೋಧಿಸಿದರು. ಮಾತ್ರವಲ್ಲ ಈ ಬಗ್ಗೆ ಸಾಕ್ಷ್ಯ ಕೇಳಿದರು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯನ್ನು ರದ್ದುಗೊಳಿಸುವ ಇಚ್ಛಾ ಶಕ್ತಿ ಮೋದಿ ಸರ್ಕಾರಕ್ಕೆ ಮಾತ್ರವಿದೆ ಎಂದು ಹೇಳಿದರು. 

ಜಾರ್ಖಂಡ್ ಪ್ರತ್ಯೇಕ ರಾಜ್ಯವಾಗಬೇಕು ಎಂಬುದು ಇಲ್ಲಿನ ಜನರ ಬಹುದಿನದ ಬೇಡಿಕೆಯಾಗಿತ್ತು. ಹೊಸ ರಾಜ್ಯ ರಚನೆಗೆ ಕಾಂಗ್ರೆಸ್ ಸರ್ಕಾರ ಒಪ್ಪಿರಲಿಲ್ಲ. ಆದರೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಇಲ್ಲಿನ ಜನರ ಬೇಡಿಕೆಯನ್ನು ಈಡೇರಿಸಿದರು. ಅಟಲ್ ಬಿಹಾರಿ ವಾಜಪೇಯಿ ನಿರ್ಮಿಸಿದ ಹೊಸ ರಾಜ್ಯವನ್ನು ಈಗಿನ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದು ಹೇಳಿದರು. 

2014ರಲ್ಲಿ ಜಾರ್ಖಂಡ್ನ ಜನರು ಬಹುಮತದ ಸರ್ಕಾರಕ್ಕೆ ಮತ ಚಲಾಯಿಸಿದರು, ನಂತರ ಮುಖ್ಯಮಂತ್ರಿ ರಘುಬರ್ ದಾಸ್ ಅವರ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ರಾಜ್ಯದಲ್ಲಿ ಸ್ಥಿರ ಸರ್ಕಾರ ಇರುವುದರಿಂದ ಮಾತ್ರ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದರು. 

ಒಂದು ಕಾಲದಲ್ಲಿ ಮಾವೋವಾದಿಗಳ ಹಿಡಿತಕ್ಕೆ ಸಿಲುಕಿದ್ದ ಜಾರ್ಖಂಡ್ ಈಗ ಅದರಿಂದ ಸಂಪೂರ್ಣವಾಗಿ ಹೊರಬಂದು ಅಭಿವೃದ್ಧಿಯ ಪಥದತ್ತ ವೇಗವಾಗಿ ಸಾಗುತ್ತಿದೆ ಎಂದು ಶಾ ಹೇಳಿದರು. 

ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, 2004-2014ರವರೆಗೆ ಕಾಂಗ್ರೆಸ್ ನಾಯಕ ಯುಪಿಎ ಅಧಿಕಾರದಲ್ಲಿದ್ದರೂ ಜಾರ್ಖಂಡ್ಗೆ ಏನೂ ಸಿಗಲಿಲ್ಲ. 13ನೇ ಹಣಕಾಸು ಆಯೋಗದ ನಿಧಿಯಡಿಯಲ್ಲಿ ಜಾರ್ಖಂಡ್ಗೆ 55,200 ಕೋಟಿ ರೂ.ನೀಡಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 14 ನೇ ಹಣಕಾಸು ಆಯೋಗದ ಅಡಿಯಲ್ಲಿ ರಾಜ್ಯಕ್ಕೆ 1.45 ಲಕ್ಷ ಕೋಟಿ ರೂ. ಅನುದಾನ ನೀಡಿದೆ ಎಂದರು. 

ಸಂತಾಲ್ ಪರಗಣ ಪ್ರದೇಶದಲ್ಲಿ ಎಲ್ಲಾ 18 ಸ್ಥಾನಗಳನ್ನು ಪಕ್ಷ ಗೆಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಈ ಪ್ರದೇಶವು ಧೈರ್ಯಶಾಲಿಗಳ ಭೂಮಿಯಾಗಿದ್ದು, ಇಲ್ಲಿನ ಜನರು ಯಾವಾಗಲೂ ಅನ್ಯಾಯದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಎತ್ತಿಕೊಂಡಿದ್ದಾರೆ. ದೇಶದ ಸ್ವಾತಂತ್ರ್ಯ ಸಂಗ್ರಾಮವೂ ಸಂತಲ್ ಪರ್ಗ್ನಾ ಪ್ರದೇಶದಿಂದಲೇ ಪ್ರಾರಂಭವಾಗಿದೆ ಎಂದು ಹೇಳಿದರು.