ನಾಥುರಾಮ್ ಗೋಡ್ಸೆಗೂ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಲಿ: ತಿವಾರಿ ಸವಾಲು

 ನಾಗ್ಪುರ, ಅ 17:     ವೀರ್ ಸಾವರ್ಕರ್ ಗೆ ಭಾರತ ರತ್ನ ನೀಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ   ಬಿಜೆಪಿಯ ನೀತಿ, ನಡವಳಿಕೆ  ವಿರುದ್ಧ ಕಿಡಿಕಾರಿರುವ  ಕಾಂಗ್ರೆಸ್ ನಾಯಕ ಮನೀಷ್ ತಿವಾರಿ, ನಾಥುರಾಮ್ ಗೋಡ್ಸೆಗೂ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಲಿ ಎಂದು ತಿರುಗೇಟು ನೀಡಿದ್ದಾರೆ. ಸಾವರ್ಕರ್ ಗಾಂಧೀಜಿ ಹತ್ಯೆಗೆ  ಸಂಚು ರೂಪಿಸಿದ್ದರು  ಎಂಬ ಆರೋಪವಿದೆ. ಆದರೇ ನಾಥೂರಾಮ್ ಗೋಡ್ಸೆ ಗಾಂಧೀಯನ್ನು  ಗುಂಡಿಟ್ಟು ಹತ್ಯೆಮಾಡಿದ್ದ,  ಈ ವರ್ಷ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆಯ ಸಮಯದಲ್ಲಿ  ಎನ್ ಡಿ ಎ ಸರ್ಕಾರ ಭಾರತ ರತ್ನವನ್ನು ಸಾವರ್ಕರ್ ಬದಲಾಗಿ ಗೋಡ್ಸೆಗೆ ನೀಡಬೇಕು ಎಂದು ಅವರು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬ ಕಾಂಗ್ರೆಸ್ ನಾಯಕ ರಷೀದ್ ಅಲ್ವಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಈ ಬಾರಿ ಸಾವರ್ಕರ್ ಹೆಸರು ಭಾರತ ರತ್ನ ನೀಡುವವರ ಪಟ್ಟಿಯಲ್ಲಿದ್ದು ಸೇರಲಿದ್ದು ಮುಂದಿನ  ಹೆಸರು ನಾಥೂರಾಮ್ ಗೋಡ್ಸೆಯದ್ದು ಎಂದು ಈಗಲೇ ಖಚಿತವಾಗಿದೆ ಎಂದು  ಆರೋಪಿಸಿ ಮುಂದಿನ ಬಾರಿ ಗೊಡ್ಸೆಗೆ ಬಿಜೆಪಿ ಸರ್ಕಾರ ಭಾರತ ರತ್ನ ನೀಡುವುದರಲ್ಲಿ  ಅನುಮಾನವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಬಿಜೆಪಿ ಕಾರ್ಯದ್ಯಕ್ಷ  ಜೆ.ಪಿ ನಡ್ಡಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಢ್ನವೀಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದರು. ಇದರಲ್ಲಿ  ಸಾವರ್ ಕರ್  ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಭರವಸೆ ನೀಡಲಾಗಿತ್ತು.