ಬೋರಿಸ್ ಜಾನ್ಸನ್ ಶೀಘ್ರ ಗುಣಮುಖರಾಗಲಿ : ನೆತನ್ಯಾಹು ಪ್ರಾರ್ಥನೆ

ಟೆಲ್ ಅವಿವ್, ಏ 7,ಕೊರೊನಾ ಸೋಂಕಿನಿಂದಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುಕೆ ಪ್ರಧಾನಿ ಬೋರಿಸ್ ಜಾನ್ಸ್ ನ್ ಶೀಘ್ರ ಗುಣಮುಖರಾಗಲಿ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಪ್ರಾರ್ಥಿಸಿದ್ದಾರೆ. “ಮಿತ್ರ ಬ್ರಿಟನ್ ಪ್ರಧಾನಿ ನೆತನ್ಯಾಹ ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲ್ ಜನತೆ ಪ್ರಾರ್ಥಿಸಿದ್ದಾರೆ” ಎಂದು ಅಲ್ಲಿನ ಪ್ರಧಾನಿ ಕಾರ್ಯಾಲಯ ಟ್ವೀಟ್ ನಲ್ಲಿ ತಿಳಿಸಿದೆ.ಕೊರೊನಾ ಸೋಂಕಿನಿಂದಾಗಿ ಜಾನ್ಸನ್ ಸ್ಥಿತಿ ಗಂಭೀರವಾಗಿದ್ದು ಅವರಿಗೆ ಸೇಂಟ್ ಥಾಮಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರ ಸಂಜೆಯಿಂದ ವೈದ್ಯರು ಅವರ ಆರೋಗ್ಯ ಮೇಲೆ ನಿಗಾ ವಹಿಸಿದ್ದು ಸೋಮವಾರ ಮಧ್ಯಾಹ್ನದ ನಂತರ ಅವರ ಸ್ಥಿತಿ ಇನ್ನಷ್ಟು ಗಂಭೀರವಾಗಿತ್ತು. ನಂತರ ಅವರನ್ನು ಐಸಿಯು ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಮಾರ್ಚ್ 27 ರಂದು ಬೋರಿಸ್ ಜಾನ್ಸನ್ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಕೂಡಲೇ ಅವರು ಸ್ವಯಂ ಪ್ರತ್ಯೇಕವಾಗಿದ್ದರು.